ಬೃಂದಾವನ ಪ್ರಾಪರ್ಟಿಸ್ ವಂಚನೆ ಆರೋಪ​: ಪ್ರಕರಣದ ತನಿಖೆ CID ಹೆಗಲಿಗೆ..?

ಬೃಂದಾವನ ಪ್ರಾಪರ್ಟಿಸ್ ವಂಚನೆ ಆರೋಪ​: ಪ್ರಕರಣದ ತನಿಖೆ CID ಹೆಗಲಿಗೆ..?

ಬೆಂಗಳೂರು: ಇತ್ತೀಚಿಗೆ ನಗರದ ರಾಜಾಜಿನಗರದ ಮೂರನೇ ಹಂತದಲ್ಲಿರುವ ಬೃಂದಾವನ ಪ್ರಾಪರ್ಟಿಸ್ ಕಂಪನಿ ನೂರಾರು ಜನರಿಗೆ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು.

ಐದಾರು ಲಕ್ಷಕ್ಕೆ ಸೈಟ್​​ ನೀಡೋದಾಗಿ ಹಲವರಿಗೆ ವಂಚಿಸಲಾಗಿದೆ ಎನ್ನಲಾಗಿದ್ದು, ಕೇವಲ 5-6 ಲಕ್ಷ ರೂಪಾಯಿಗೆ ಸೈಟ್​ ನೀಡುವುದಾಗಿ ಹೇಳಿ ಬೃಂದಾವನ ಪ್ರಾಪರ್ಟಿಸ್ ಕಂಪನಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಪರಾರಿಯಾದ ಘಟನೆ ನಡೆದಿತ್ತು. ಮುಂದಿನ ವಾರದಲ್ಲಿ ಕೇಸ್ ಅ​ನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಇದೆ.

ಸದ್ಯ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಈವರೆಗೂ 3,800 ಪ್ರಕರಣಗಳು ದಾಖಲಾಗಿದೆ. ಸುಮಾರು 86 ಕೋಟಿ ವಂಚನೆ ಅಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. BUDS ಌಕ್ಟ್​ (ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯಿದೆ) ಅಡಿಯಲ್ಲಿ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದು, ಮುಂದಿನ ವಾರದಲ್ಲಿ ಕೇಸ್ ಅ​ನ್ನು ಸಿಐಡಿಗೆ ವರ್ಗಾವಣೆ ಮಾಡುವ ಸಾಧ್ಯತೆಗಳಿವೆ. ಆರ್ಥಿಕ ವಂಚನೆ ಪ್ರಕರಣವಾಗಿರುವುದರಿಂದ ಆರೋಪಿ ದಿನೇಶ್ ಗೌಡನನ್ನ ಕಸ್ಟಡಿಗೆ ಪಡೆದು ಸಿಐಡಿ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಸೈಟಿನ ಕನಸು ನುಚ್ಚು ನೂರು; ಮೋಸ ಹೋದ್ರಾ 30ಕ್ಕೂ ಹೆಚ್ಚು ಪೊಲೀಸರು..?

ಆರೋಪಿ ದಿನೇಶ್ ಗೌಡಗೆ ಸಂಬಂಧಿಸಿದ ಆಸ್ತಿಯ ಎಲ್ಲಾ ಮಾಹಿತಿಯನ್ನ ಪರಿಶೀಲನೆ ನಡೆಸಲಿರುವ ಸಿಐಡಿ, ಈ ಕಾಯ್ದೆ ಹಾಕಿದ ಮೇಲೆ ಈಗಾಗಲೇ ಹೂಡಿಕೆದಾರರಿಗೆ ಯಾವುದಾದರು ರೂಪದಲ್ಲಿ ಹಣ ಸಂದಾಯ ಆಗಿದ್ಯಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಹೂಡಿಕೆದಾರರಿಗೆ ಹಣ ಸಂದಾಯ ಆಗಿದ್ರೆ ಅದನ್ನ ಮೂಲ ಹೂಡಿಕೆ ಹಣ ಅಂತ ಪರಿಗಣನೆ ಮಾಡಿ, ಜೊತೆಗೆ ಮುಟ್ಟುಗೋಲು ಹಾಕಿದ ಆಸ್ತಿಯಲ್ಲಿ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲಾಗುತ್ತದೆ ಎನ್ನಲಾಗಿದೆ. ಒಂದು ವೇಳೆ ಹೂಡಿಕೆಯ ಹಣ ಮುಟ್ಟುಗೋಲು ಹಾಕಿಕೊಂಡ ಆಸ್ತಿ ಮೌಲ್ಯಕ್ಕಿಂತ ಜಾಸ್ತಿ ಇದ್ರೆ ಹಣ ಕಟ್ಟಿಕೊಡುವಂತೆ ಸೂಚನೆ ನೀಡಲಾಗುತ್ತದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link