ಮೇಯರ್ ಚುನಾವಣೆ: ಮತ್ತೆ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಬಗ್ಗೆ ಸಾರಾ ಮಹೇಶ್ ಹೇಳಿದ್ದೇನು..?

ಮೇಯರ್ ಚುನಾವಣೆ: ಮತ್ತೆ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಬಗ್ಗೆ ಸಾರಾ ಮಹೇಶ್ ಹೇಳಿದ್ದೇನು..?

ಮೈಸೂರು: ಆಗಸ್ಟ್ 25ಕ್ಕೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಯುವ ಮುನ್ನವೇ ಪಕ್ಷಗಳಲ್ಲಿ ದೋಸ್ತಿ, ಮೈತ್ರಿ ಮಾತುಗಳು ಜೋರಾಗಿದ್ದು ಮೇಯರ್​ ಚುನಾವಣೆ ರಂಗೇರಿದೆ. ಇದರ ಬೆನ್ನಲ್ಲೇ ಪಾಲಿಕೆಯಲ್ಲಿ ಜೆಡಿಎಸ್​, ಕಾಂಗ್ರೆಸ್​ ದೋಸ್ತಿ ಖತಂಗೊಳಿಸುವ ಕುರಿತು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸುಳಿವು ನೀಡಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೇಯರ್ ಸ್ಥಾನದ ವಿಚಾರವಾಗಿ ಕೋರ್ಟ್‌ಗೆ ಹೋಗುವ ತನಕ ಮಾತ್ರ ಕಾಂಗ್ರೆಸ್ ಮೈತ್ರಿ ಇತ್ತು. ಆನಂತರ ನಾವು ಅವರ ಜೊತೆಗಿಲ್ಲ. ಅವರೊಂದಿಗೆ ಮೈತ್ರಿ ಆಗ್ತೇವೆ ಅಂತಾ ಎಲ್ಲೂ ಹೇಳಿಲ್ಲ. ಆದ್ರೆ ಈ ಹಿಂದೆ ನಾವು ಅವರ ಜೊತೆ ಮೈತ್ರಿ ವಿಚಾರವಾಗಿ ಮಾತಾಡಿದ್ದೇವೆ ಅಷ್ಟೇ..

ನಾವು ಹತ್ತು ವರ್ಷಗಳ ಕಾಲ ಮೇಯರ್ ಸ್ಥಾನದಲ್ಲಿದ್ದೇವೆ. ಆದರೆ ಈ ಬಾರಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ. ನಗರ ಪಾಲಿಕೆಯ ಸದಸ್ಯರ, ನಮ್ಮ ನಾಯಕರ ಅಭಿಪ್ರಾಯ ತೆಗೆದುಕೊಂಡು ಮುಂದೆ ಹೋಗ್ತೀವಿ ಎನ್ನುವ ಮೂಲಕ ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಪರೋಕ್ಷ ಸುಳಿವು ನೀಡಿದ್ದಾರೆ.

ಇದನ್ನೂ ಓದಿ:  ಮೈಸೂರಲ್ಲಿ ಮತ್ತೆ ಜಿದ್ದಾಜಿದ್ದಿಗೆ ಅಖಾಡ ರೆಡಿ; ಪಾಲಿಕೆಯ ಮೇಯರ್​ ಚುನಾವಣೆಗೆ ಡೇಟ್​ ಫಿಕ್ಸ್

Source: newsfirstlive.com Source link