ಕೋವಿಡ್​ ನಿಯಮ ಮೀರಿ ಕ್ರಿಕೆಟ್​ ಆಯೋಜನೆ; ಬಿಜೆಪಿ ಯುವ ಮೋರ್ಚಾ ವಿರುದ್ಧ ಜನ ಗರಂ

ಕೋವಿಡ್​ ನಿಯಮ ಮೀರಿ ಕ್ರಿಕೆಟ್​ ಆಯೋಜನೆ; ಬಿಜೆಪಿ ಯುವ ಮೋರ್ಚಾ ವಿರುದ್ಧ ಜನ ಗರಂ

ಯಾದಗಿರಿ: ಕೋವಿಡ್​ ಮಾರ್ಗಸೂಚಿ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಯುವಮೋರ್ಚಾ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಆಗಸ್ಟ್​ 30ರವರೆಗೂ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿಗಳ ಕಠಿಣ ಆದೇಶ ಇದ್ದರೂ ಕ್ಯಾರೆ ಎನ್ನದೇ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಲಾಗಿದೆ.

blank

ಜಿಲ್ಲಾ ಕ್ರೀಡಾಂಗಣದಲ್ಲಿ ಯಾದಗಿರಿಯ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಅದ್ದೂರಿಯಾಗಿ ಕ್ರಿಕೆಟ್​ ಟೋರ್ನಾಮೆಂಟ್​ ಆಯೋಜಿಸಲಾಗಿದೆ.100 ಕ್ಕೂ ಹೆಚ್ಚು ಜನರು ಈ ಕೂಟದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಸಂದೀಪ್ ಕೆ.ಸಿ. ಅವರಿಂದ ಉದ್ಘಾಟನೆ ಮಾಡಿಸಲಾಗಿದ್ದು, ರಾಜ್ಯದೆಲ್ಲೆಡೆ ಇರುವ ಮೂರನೇ ಅಲೆ, ವಿಕೆಂಡ್ ಕರ್ಫ್ಯೂಗೆ ಡೋಂಟ್​ಕೇರ್​ ಎಂದಿದ್ದಾರೆ.

blank

ಇನ್ನು ಸಾಮಾನ್ಯ ಜನರಿಗೊಂದು ನ್ಯಾಯ, ಬಿಜೆಪಿ ಕಾರ್ಯಕರ್ತರಿಗೊಂದು ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಜಿಲ್ಲಾಡಳಿತದ ಜಾಗದಲ್ಲೇ ಕೋವಿಡ್​ ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಜಾಣಕುರುಡರಂತೆ ವರ್ತಿಸುತ್ತಿರೋ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣ ಭೋಪಾಲ ರೆಡ್ಡಿ ಸೇರಿ ಪಕ್ಷದ ಹಲವು ಮುಖಂಡರು ಭಾಗಿಯಾಗಿದ್ದಾರೆ.

blank

Source: newsfirstlive.com Source link