ವಿನಯ್​ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 300 ಜನರ ಮೇಲೆ ಬಿತ್ತು ಕೇಸ್​

ವಿನಯ್​ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 300 ಜನರ ಮೇಲೆ ಬಿತ್ತು ಕೇಸ್​

ಬೆಳಗಾವಿ: ಇದೀಗ ಜೈಲಿನಿಂದ ಹೊರಬಂದ ವಿನಯ್​ ಕುಲಕರ್ಣಿಗೆ ಬೆಳಗಾವಿ ಪೊಲೀಸರು ಶಾಕ್​ ನೀಡಿದ್ದಾರೆ. ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆ ಆರೋಪದಡಿಯಲ್ಲಿ, ಬೆಳಗಾವಿ ಗ್ರಾಮಾಂತರ ಪೊಲೀಸ್​ರಿಂದ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 300 ಜನರ ಮೇಲೆ ಕೇಸ್​ ದಾಖಲಿಸಲಾಗಿದೆ.

blank

ಘಟನೆ ಕುರಿತು ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು, ಜೊತೆಗೆ ಹಿಂಡಲಗಾ ಪಿಡಿಓ ಕೊರೊನಾ ನಿಯಮ, ವೀಕೆಂಡ್ ಕರ್ಪ್ಯೂ ಉಲ್ಲಂಘನೆ ಕಾರಣಕ್ಕಾಗಿ ಕೇಸ್​ ದಾಖಲಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಇದನ್ನು ಓದಿ: ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್; ಸ್ವೀಟ್​ ತಿನ್ನಿಸಿ ಸ್ವಾಗತಿಸಿದ ಲಕ್ಷ್ಮೀ ಹೆಬ್ಬಾಳ್ಕರ್

blank

ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಇಂದು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ವೀಟ್​ ತಿನ್ನಿಸಿ, ಹಣೆಗೆ ತಿಲಕವಿಟ್ಟು ಸ್ವಾಗತಿಸಿದ್ದರು. ಈ ವೇಳೆ ಅದ್ಧೂರಿ ಮೆರವಣಿಗೆ ಆಯೋಜಿಸಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಮಾಜಿ ಸಚಿವರಿಗೆ ಭರ್ಜರಿ ಸ್ವಾಗತ ಕೋರಲಾಗಿತ್ತು.

Source: newsfirstlive.com Source link