ಮಹಿಳೆಯರಿಗೆ ಸೂಟ್ ಆಗುವಂತಹ ಸ್ಟೈಲಿಶ್ ಟೋಪಿಗಳು

ಟೋಪಿಗಳು ಫ್ಯಾಶನ್ ಹುಡುಗಿಯರಿಗೆ ಬಹಳ ಅಚ್ಚು ಮೆಚ್ಚು ಹಾಗೂ ಅವುಗಳು ಬೆಸ್ಟ್ ಫ್ರೆಂಡ್ ಇದ್ದಂತೆ. ಇತ್ತೀಚೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ನೋಡಿದರೆ ಸೆಲಿಬ್ರೆಟಿಗಳು ಸೇರಿದಂತೆ ಅನೇಕ ಮಂದಿ ಟೋಪಿಗಳನ್ನು ಧರಿಸಿ ಫೋಟೋ ಹಾಗೂ ವೀಡಿಯೋ ಮಾಡಿರುತ್ತಾರೆ. ಸದ್ಯ ಟೋಪಿಗಳು ಒಂದು ರೀತಿ ಹೊಸ ಟ್ರೆಂಡ್ ಸೃಷ್ಟಿಸಿದೆ ಎಂದೇ ಹೆಳಬಹುದು. ಅಷ್ಟೇ ಅಲ್ಲದೇ ಟೋಪಿಗಳನ್ನು ಹವಾಮಾನ ಅನುಸಾರವಾಗಿ ಕೂಡ ಧರಿಸಲಾಗುತ್ತದೆ. ಬಿಸಿಲು, ಗಾಳಿ, ಮಳೆ ಹಾಗೂ ನಿಮ್ಮ ಕೂದಲನ್ನು ಮರೆಮಾಚಲು ನಿಮ್ಮ ತಲೆಯನ್ನು ರಕ್ಷಿಸಿಕೊಳ್ಳಲು ಟೋಪಿಗಳನ್ನು ಧರಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಬಟ್ಟೆಗೆ ಸೂಟ್ ಆಗುವಂತೆ ಟೋಪಿ ಯಾವುದು ಎಂದು ತಿಳಿದುಕೊಳ್ಳಬೇಕು. ಈ ಕುರಿತು ಕೆಳಗೆ ಒಂದಷ್ಟು ಮಾಹಿತಿ ನೀಡಲಾಗಿದೆ.

ಪೋಮ್ ಪೋಮ್ ಟೋಪಿ
ಕೆನಾಡದಲ್ಲಿ ಟೋಕ್ ಎಂದು ಕರೆಯಲ್ಪಡುವ ಪೋಮ್ ಪೋಮ್ ಟೋಪಿಯನ್ನು ಮಹಿಳೆಯರು ಹೆಚ್ಚಾಗಿ ಚಳಿಗಾಲದಲ್ಲಿ ಧರಿಸುತ್ತಾರೆ. ಇದನ್ನು ಉಲನ್ ನಿಂದ ಹೆಣೆದಿದ್ದು, ಟೋಪಿ ಮೇಲ್ಭಾಗದಲ್ಲಿ ಬಾಬುಲ್ ಒಂದನ್ನು ಇರಿಸಲಾಗಿದೆ. ಈ ಟೋಪಿಗಳು ವಿವಿಧ ಆಕಾರ, ಗಾತ್ರ ಹಾಗೂ ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

ಕ್ಲಾಸಿಕ್ ಫೆಡೋರಾ
ಕ್ಲಾಸಿಕ್ ಫೆಡೋರಾ ಟೋಪಿಯನ್ನು ಹಿಂದೆ ಪುರುಷರು ಮಾತ್ರ ಧರಿಸುತ್ತಿದ್ದರು, ಆದರೆ ಇದೀಗ ಸುಂದರವಾದ ಮಹಿಳೆಯರು ಕೂಡ ಧರಿಸಲು ಆರಂಭಿಸಿದ್ದಾರೆ. ಫ್ಯಾಬ್ರಿಕ್ ಮತ್ತು ಬಣ್ಣವನ್ನು ಲೆಕ್ಕಿಸದೇ ಮಹಿಳೆ ಈ ಟೋಪಿಯನ್ನು ಧರಿಸುತ್ತಿದ್ದಾರೆ. ಈ ಟೋಪಿ ಮೇಲ್ಭಾಗ ಸಣ್ಣ ರಿಮ್ ಮಾದರಿಯಿದ್ದು, ಇದರ ಸುತ್ತಲೂ ಮಡಚಿದಂತೆ ಕಾಣಿಸುತ್ತದೆ.

blank

ವೈಡ್ ಬ್ರಮ್ ಫೆಡೋರಾ
ಈ ಟೋಪಿಯನ್ನು ಸಫಾರಿ ಟೋಪಿಯಂತಲೂ ಕರೆಯುತ್ತಾರೆ. ಈ ಟೋಪಿ ಸ್ಟೈಲಿಶ್ ಹುಡುಗಿಯರಿಗೆ ಬೇಗ ಸೂಟ್ ಆಗುತ್ತದೆ. ಈ ಟೋಪಿ ಒಂದು ರೀತಿ ಕಿರೀಟದಂತಿದ್ದು, ವಿಶಾಲವಾದ ಅಂಚುಗಳನ್ನು ಹೊಂದಿದೆ ಹಾಗೂ ಇದನ್ನು ಉಣ್ಣೆ ಬಟ್ಟೆಯಿಂದ ವಿನ್ಯಾಸಗೊಳಿಸಲಾಗಿದೆ. ನೀವು ಹೇರ್ ವಾಶ್ ಮಾಡಿಲ್ಲದಿರುವಾಗ ಈ ಟೋಪಿ ಧರಿಸುವುದರಿಂದ ಇದು ನಿಮ್ಮ ಕೂದಲನ್ನು ಮರೆಮಾಚುತ್ತದೆ. ಇದನ್ನೂ ಓದಿ:ಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ

blank

ಸ್ಕೂಲ್ ಬಾಯ್ ಹ್ಯಾಟ್
ಸ್ಕೂಲ್ ಬಾಯ್ ಟೋಪಿ ಎಂದು ಕರೆಯಲ್ಪಡುವ ಈ ಟೋಪಿಯನ್ನು ನ್ಯೂಸ್ ಬಾಯ್ ಟೋಪಿ ಎಂದು ಹೇಳಲಾಗುತ್ತದೆ. ಈ ಟೋಪಿಯನ್ನು ಉಣ್ಣೆಯಿಂದ ಮಾಡಲ್ಪಟ್ಟಿದ್ದು, ಫ್ಯಾಷಶ್ ಪ್ರಿಯರಿಗೆ ಈ ಟೋಪಿ ಇಷ್ಟವಾಗುತ್ತದೆ ಮತ್ತು ಇದರ ಅಂದ ಬಣ್ಣದ ಮೇಲೆ ಅವಲಂಬಿತವಾಗಿರುತ್ತದೆ. ಶಾಲೆಗೆ ತೆರಳುವ ಬಾಲಕಿಯರು ಧರಿಸುವ ಸ್ಕರ್ಟ್‍ಗೆ ಈ ಟೋಪಿ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ.

blank

ಫರ್ ಪಿಲ್ ಬಾಕ್ಸ್ ಟೋಪಿ
ವಾತವಾರಣದಲ್ಲಿ ಚಳಿ ಹೆಚ್ಚಾದಾಗ ಈ ಟೋಪಿ ಬೆಚ್ಚಗಿರುತ್ತದೆ. ಮಹಿಳೆಯರಿಗೆ ಬೆಚ್ಚಗಿರಿಸುವುದರ ಜೊತೆ ಸ್ಟೈಲಿಶ್ ಲುಕ್ ನೀಡುವ ಈ ಟೋಪಿಯನ್ನು ಜ್ಹಿವಾಗೋ ಟೋಪಿ ಎಂದು ಕೂಡ ಕರೆಯಲಾಗುತ್ತದೆ. 1965ರಲ್ಲಿ ಜೂಲಿ ಕ್ರಿಸ್ಟಿ ನಟಿಸಿದ ಸಿನಿಮಾದ ನಂತರ ಈ ಮೃದುವಾದ ಟೋಪಿ ಸಖತ್ ಫೇಮಸ್ ಆಗಿತ್ತು. ಈ ಟೋಪಿ ಕ್ಯಾಶುಯಲ್ ವೇರ್ ಜೊತೆಗೆ ಸೊಗಸಾಗಿ ಕಾಣಿಸುತ್ತದೆ.ಇದನ್ನೂ ಓದಿ:ರೈಲ್ವೆ ಹಳಿ ಮೇಲೆ ಜ್ಞಾನತಪ್ಪಿ ಬಿದ್ದಿದ್ದ ವ್ಯಕ್ತಿ – ನಿಮಿಷದಲ್ಲಿ ಸಾವಿನ ಅಂಚಿನಿಂದ ಪಾರು

blank

Source: publictv.in Source link