ಆತುರದಲ್ಲಿ ಯಡವಿದ ಬೈಡನ್! ಆಘ್ಫಾನ್​​ನಲ್ಲಿ ತಾಲಿಬಾನಿ​ಗಳಿಂದ ಅಮೆರಿಕ ಬಂದೂಕುಗಳ ಮೆರವಣಿಗೆ..!

ಆತುರದಲ್ಲಿ ಯಡವಿದ ಬೈಡನ್! ಆಘ್ಫಾನ್​​ನಲ್ಲಿ ತಾಲಿಬಾನಿ​ಗಳಿಂದ ಅಮೆರಿಕ ಬಂದೂಕುಗಳ ಮೆರವಣಿಗೆ..!

ಅದು 2001 ಸೆಫ್ಟೆಂಬರ್ 11. ತಾಲಿಬಾನ್ ಆಶ್ರಯದಲ್ಲಿದ್ದ ಅಲ್​ಖೈದಾ ಉಗ್ರರ ಕೈಗೆ ಜಸ್ಟ್​ ಎರಡು ವಿಮಾನಗಳು ​ ಸಿಕ್ಕಿದ್ದರ ಪರಿಣಾಮ, ಅಮೆರಿಕದ ಅವಳಿ ಕಡ್ಡಗಳು ನೆಲಸಮವಾಗಿ ಮೂರು ಸಾವಿರ ಜನರು ಸಾವಿನ ಮನೆ ಸೇರಿದ್ರು. ಆದ್ರೆ ಇದೀಗ ಇದೇ ತಾಲಿಬಾನ್​ಗಳ ಕೈಗೆ 1 ಲಕ್ಷ 50 ಸಾವಿರ ಕೋಟಿ ಮೌಲ್ಯದ ಪವರ್​​ಫುಲ್​ ವೆಪನ್ಸ್​​ ಸಿಕ್ಕಿದೆ. ಹಾಗಾದ್ರೆ ತಾಲಿಬಾನ್​ಗಳ ಕೈಗೆ ಈ ಬೃಹತ್ ಪ್ರಮಾಣ ಶಸ್ತ್ರಾಸ್ತ್ರ ಸಿಕ್ಕಿದ್ದೇಗೆ..? ತಾಲಿಬಾನ್​ಗಳಿಗೆ ಶಸ್ತಾಸ್ತ್ರ ಕೊಟ್ಟೋರು ಯಾರು..?

blank

ಸಿಡಿದ ಗುಂಡು, ಚೆಲ್ಲಿದ್ದ ರಕ್ತ, ಎಲ್ಲೆಲ್ಲೂ ರಕ್ತಪಾತ. ತಾಲಿಬಾನ್​​​ಗಳು ಬಂದೂಕಿನಿಂದಲೇ ಉಗ್ರ ಶಾಸನ ಬರೆಯುತ್ತಿದ್ದಾರೆ. ಜನರು ಪ್ರಾಣ ಭಯದಿಂದ ನರಳುತ್ತಿದ್ದಾರೆ. ತಾಲಿಬಾನ್​ಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನ್​ ಆಕ್ರಂದಿಸುತ್ತಿದೆ. ಉಗ್ರರ ಕೈಯಲ್ಲಿರುವ ಬಂದೂಕುಗಳು ಅಬ್ಬರಿಸುತ್ತಿದ್ದರೆ, ಅಫ್ಘನ್ನರು ಬೀದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳು ಅಟ್ಟಹಾಸದ ರಣಕಹಳೆ ಮೊಳಗಿಸಿದ್ದಾರೆ. ಉಗ್ರರು ಅತ್ಯಾಧುನಿಕ ಮಾಡೆರ್ನ್​ ವೆಪನ್​ಗಳನ್ನ ಇಟ್ಕೊಂಡು ಬೀದಿಗೆ ಇಳಿದಿದ್ದಾರೆ. ತಾಲಿಬಾನ್​ಗಳು ರಕ್ಕಸ ನಗೆ ಬೀರುತ್ತಾ, ರಣ ಕೇಕೆ ಹಾಕುತ್ತಾ ಅಫ್ಘಾನಿದಾದ್ಯಂತ ತನ್ನ ಕಬಂದ ಬಾಹುಗಳನ್ನ ಚಾಚಿದ್ದು, ಸಿಕ್ಕಿದೆಲ್ಲವನ್ನ ಧ್ವಂಸ ಮಾಡುತ್ತಿದ್ದಾರೆ. ಅಫ್ಘಾನ್​ನ ಸದ್ಯದ ಘನಘೋರ ಪರಸ್ಥಿತಿಯನ್ನ ಪದಗಳಲ್ಲಿ ಬಣ್ಣಿಸೋದು ಅಸಾಧ್ಯ ಎಂಬತ್ತಾಗಿದೆ. ಬಂದೂಕು ಬಿಟ್ಟು ತಾಲಿಬಾನ್​ಗಳಿಗೆ ಬದುಕೇ ಇಲ್ಲ ಅನ್ನುವಷ್ಟರ ಮಟ್ಟಿಗೆ ತಾಲಿಬಾನ್​ಗಳ ಹೆಗಲ ಮೇಲೆ, ಕೈಯಲ್ಲಿ ಬಂದೂಕುಗಳು ಕಾಣಿಸುತ್ತಿವೆ. ತಾಲಿಬಾನ್​​ಗಳು ಕೂತರು ನಿಂತರೂ ಬಂದೂಕಳೊಂದಿಗೆನೇ ಬದುಕುತ್ತಿದ್ದಾರೆ.

ಇಷ್ಟು ದಿನ ಮೂವತ್ತು ವರ್ಷಗಳ ಹಿಂದಿನ ಬಂದೂಕುಗಳನ್ನ ಇಟ್ಟುಕೊಂಡು ರಕ್ತದ ಕೋಡಿ ಹರಿಸುತ್ತಿದ್ದ ಈ ತಾಲಿಬಾನ್​ಗಳ ಕೈಗೆ ಇದೀಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಅಮೆರಿಕಾ ಮಾಡಿದ ಯಡವಟ್ಟು.. ಜೋ ಬೈಡನ್​ ಆತುರದ ನಿರ್ಧಾರದಿಂದಾಗಿ ಬರೋಬ್ಬರಿ 1 ಲಕ್ಷ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಮೆರಿಕಾದ ಆಧುನಿಕ ಶಸ್ತ್ರಾಸ್ತ್ರಗಳು ತಾಲಿಬಾನ್ ಪಾಲಾಗಿವೆ. ಹೌದು.. ಬರೋಬ್ಬರಿ 1 ಲಕ್ಷ 50 ಸಾವಿರ ಕೋಟಿ ರೂಪಾಯಿ..!

blank

ತಾಲಿಬಾನ್​ಗಳ ಕೈ ಸೇರಿದ ಅಮೆರಿಕದ ವೆಪನ್ಸ್
ಆಧುನಿಕ ಗನ್​ಗಳೊಂದಿಗೆ ಬೀದಿಗಿಳಿದ ಉಗ್ರರು
ತಾಲಿಬಾನ್​ಗಳಿಂದ ಬಂದೂಕಿನ ಮೆರವಣಿಗೆ
ಅಮೆರಿಕದ ಎಡವಟ್ಟಿನಿಂದ ಏಷ್ಯಾಗೆ ಕಂಟಕ

ಇದೀಗ ಅಮೆರಿಕ ಬಂದೂಕುಗಳನ್ನ ಹಿಡ್ಕೊಂಡು ತಾಲಿಬಾನಿಗಳು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಮಾಡುತ್ತಿದ್ದಾರೆ. ಇಲ್ನೋಡಿ.. ಗಾಡಿಯಲ್ಲಿ ಕಟ್ಟಿಗೆಗಳನ್ನ ರಾಶಿ ಮಾಡಿದಂತೆ ಗನ್​ಗಳನ್ನ ಇಟ್ಟು ಸಾಗಿಸುತ್ತಿದ್ದಾರೆ. ಇವೆಲ್ಲವು ಅಮೆರಿಕ ನಿರ್ಮಿತ ಅತ್ಯಾಧುನಿಕ ಶಸ್ತ್ರಾಸ್ತ್ರಗಳು. ಇದು ತಾಲಿಬಾನ್​ ರಕ್ಕಸರು ಮಾಡೆರ್ನ್​ ವೆಪನ್​ಗಳೊಂದಿಗೆ ಮಾಡಿರುವ ಮೆರವಣಿಗೆ. ವಿಶ್ವದ ಅತ್ಯಾಧುನಿಕ ಪವರ್​ಫುಲ್ ವೆಪನ್ಸ್​ಗಳನ್ನ ಇಟ್ಕೊಂಡು ತಾಲಿಬಾನ್​ ರಕ್ಕಸರು ಱಲಿ ಮಾಡಿದ್ದಾರೆ. ಇದು ಬರೀ ಮೆರವಣಿಗೆ ಇಲ್ಲ. ಇಡೀ ಏಷ್ಯಾಗೆ ಒಂದು ಎಚ್ಚರಿಕೆಯ ಕರೆಗಂಟೆ ಎನ್ನಲಾಗಿದೆ.

ಇಷ್ಟು ದಿನ ದಶಕಗಳ ಹಿಂದಿನ ವೆಪನ್​​ಗಳಲ್ಲಿ ರಕ್ತದ ಕೋಡಿ ಹರಿಸುತ್ತಿದ್ದ ಈ ರಕ್ಕಸರ ಕೈಗೆ ಇದೀಗ ಅಮೆರಿಕದ ಮಾಡೆರ್ನ್​ ವೆಪನ್ಸ್ ಸಿಕ್ಕಿದೆ. ದಶಕದ ಹಿಂದಿನ ವೆಪನ್ಸ್​ಗಳಲ್ಲೇ ಇಷ್ಟೊಂದು ರಕ್ತದೋಕುಳಿ ಹರಿಸಿರುವ ಈ ಕ್ರೂರಿಗಳ ಕೈಗೆ ಆಧುನಿಕ ವೆಪನ್​​ಗಳು ಸಿಕ್ಕಿವೆ.

blank

1 ಲಕ್ಷ 50 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಉಗ್ರರ ವಶಕ್ಕೆ
ಪವರ್​ಫುಲ್ ವೆಪನ್ಸ್​ಗಳೆಲ್ಲಾ ತಾಲಿಬಾನ್​ಗಳ ಹಿಡಿತಕ್ಕೆ

ಅಮೆರಿದಲ್ಲಿ ತಯಾರಾಗಿರುವ ಅತ್ಯಾಧುನಿಕ ಯುದ್ಧ ವಿಮಾನಗಳು, ಬಂದೂಕುಗಳು, ರಾತ್ರಿ ಕಾರ್ಯಾಚರಣೆಗೆ ಬಳಸುವ ಕನ್ನಡಕ, ರಾಕೆಟ್​, ಡ್ರೋನ್​ಮೆಷಿನ್, ಗನ್ಸ್ , ಡ್ರೋನ್ಸ್​ ಚಾಪರ್ಸ್​ ಹಮ್ ವೀ ಹೀಗೆ ಒಂದರ ಹಿಂದೆ ಒಂದರಂತೆ ಎಲ್ಲವು ಉಗ್ರರ ಕೈವಶವಾಗಿದೆ. ಉಗ್ರರು ಇದೇ ಮಾಡೆರ್ನ್​ ವೆಪನ್​ಗಳನ್ನ ಇಟ್ಟುಕೊಂಡು ಅಫ್ಘಾನ್​ನ ಬೀದಿ ಬೀದಿಗಳಲ್ಲಿ ರಾಜರೋಷವಾಗಿ ಮೆರವಣಿಗೆ ಮಾಡುತ್ತಿದ್ದಾರೆ.

20 ವರ್ಷಗಳ ಕಾಲ ರಕ್ಷಣೆಯ ತಡೆಗೋಡೆಯಂತ್ತಿದ್ದ ದೊಡ್ಡಣ್ಣನ ಸೇನೆ ಅಫ್ಘಾನ್​ ನೆಲದಿಂದ ತವರಿಗೆ ಮರಳುವ ವೇಳೆ ಎಸಗಿರುವ ಪ್ರಮಾದಗಳಿಂದ ಇದೀಗ ಇಡೀ ಏಷ್ಯಾವೇ ಬೆಚ್ಚಿ ಬೀಳುವಂತ್ತಾಗಿದೆ. 2 ದಶಕದಿಂದ ವರ್ಷಗಳಿಂದ ಅಫ್ಘಾನಿಸ್ತಾನ ತನ್ನ ರಕ್ಷಣೆಗೆಂದು ಇಟ್ಟುಕೊಂಡಿದ್ದ 1 ಲಕ್ಷ 50 ಸಾವಿರ ಕೋಟಿ ಮಾಲ್ಯದ ಶಸ್ತ್ರಾಸ್ತ್ರ ಉಗ್ರರ ವಶವಾಗಿರುವುದು ಏಷ್ಯಾದಾದ್ಯಂತ ಆತಂಕದ ಕಾರ್ಮೋಡ ಕವಿದಿದೆ.

ಅಮೆರಿಕದ ಸೇನಾ ಹೆಲಿಕಾಫ್ಟರ್​ಗಳು ಉಗ್ರರ ವಶಕ್ಕೆ
ಅಮೆರಿಕ ಮಿಲಿಟರಿ ಬಯೋಮೆಟ್ರಿಕ್ಸ್ ತಾಲಿಬಾನ್​ ತೆಕ್ಕೆಗೆ

ತಾಲಿಬಾನ್ ಈಗಾಗಲೇ ಅಮೆರಿಕದ ಅಮೆರಿಕದ ಮಿಲಿಟರಿ ಬಯೋಮೆಟ್ರಿಕ್ಸ್ ಸಾಧನಗಳನ್ನು ಕೂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ತಾಲಿಬಾನ್​ಗಳು ವಶಪಡಿಸಿಕೊಂಡಿರುವ ಬಯೋಮೆಟ್ರಿಕ್ಸ್​ ಸಾಧನಗಳಲ್ಲಿ, ಐರಿಸ್ ಸ್ಕ್ಯಾನ್ ಮತ್ತು ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಡೇಟಾಗಳ ಮಾಹಿತಿಗಳನ್ನ ಒಳಗೊಂಡಿವೆ. ತಾಲಿಬಾನ್ ಕಂದಹಾರ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಿರ್ಮಿತ ಅಫ್ಘಾನ್ ಸೇನಾ ಹೆಲಿಕಾಪ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಡಾಯಗಾರನು ಯುಎಸ್ ನಿರ್ಮಿತ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಕೂಡ ಇದೀಗ ತಾಳಿಬಾನ್​ ವಶವಾಗಿದೆ.

blank

ಬುಲೆಟ್, ಗ್ರೆನೇಡ್​​ ದಾಳಿ ಮಾಡಿದ್ರು ರಕ್ಷಣೆ ಪಡೆಯುವಂತಹ ವಾಹನ, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು, ರಾತ್ರಿವ ವೇಳೆ ರಾತ್ರಿ ಕಾರ್ಯಾಚರಣೆಗೆ ಬಳಸುವ ಕನ್ನಡಕ, ದುರ್ಗಮ ಪ್ರದೇಶದಲ್ಲೂ ಪ್ರಯಾಣ ಮಾಡುವ ಹೆಲಿಕಾಫ್ಟರ್ ಎಲ್ಲವನ್ನ ಉಗ್ರರು ಇದೀಗ ತನ್ನ ಒಡಲಿಗೆ ಹಾಕಿಕೊಂಡಿದ್ದಾರೆ.

ಉಗ್ರರ ಕೈಸೇರಿರುವ ಬಹುತೇಕ ಶಸ್ತ್ರಾಸ್ತ್ರಗಲ್ಲಿ ಹೆಚ್ಚಿನವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಬಂದವುಗಳಾಗಿವೆ. ಅಫ್ಘಾನ್ ಸೈನಿಕರು ಉತ್ತರ ನಗರದ ಕುಂಡುಜ್ ನಲ್ಲಿ ತಾಲಿಬಾನ್​ಗಳಿಗೆ ಶರಣಾದ ವೇಳೆ, ಅಫ್ಘಾನ್ ಸೈನಿಕರ ಕೈಯಲ್ಲಿದ್ದ ಎಲ್ಲಾ ಶಸ್ತ್ತಾಸ್ತ್ರಗಳನ್ನು ಇದೇ ತಾಲಿಬಾನ್​ಗಳು ಕೈವಶಮಾಡ್ಕೊಂಡಿದ್ರು. ತಾಲಿಬಾನ್​ಗಳ ಕೈಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿರುವುದರಿಂದ, ಇದ್ರಿಂದ ಅಫ್ಘಾನ್​ನಲ್ಲಿ ಮತ್ತಷ್ಟು ಅಪಾಯಕಾರಿ ಸನ್ನಿವೇಶಗಳು ನಿರ್ಮಾಣವಾಗಲಿದೆ ಎಂದು ತಜ್ಷರು ಅಭಿಪ್ರಾಯ ಪಟ್ಟಿದ್ದಾರೆ.

ಭಾರಿ ಅಮೆರಿಕದ ಶಸ್ತ್ರಾಸ್ತ್ರಗಳು ಮಾತ್ರವಲ್ಲ ಭಾರತ ಅಫ್ಘಾನ್​ಗೆ ಕೊಟ್ಟಿದ್ದ ಹೆಲಿಕಾಫ್ಟರ್​ ಕೂಡ ಇದೀಗ ಉಗ್ರರ ವಶವಾಗಿದೆ. ಒಟ್ಟಿನಲ್ಲಿ ಉಗ್ರರ ಕೈಗೆ ಇದೀಗ ಅತ್ಯಾಧುನಿಕ ವೆಪನ್ಸ್​ಗಳು ಸಿಕ್ಕಿರುವುದರಿಂದ ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತ್ತಾಗಿದೆ. ಈ ತಾಲಿಬಾನ್​ಗಳೆಂಬ ಕಪಿಗಳು ಈ ವೆಪನ್​ಗಳನ್ನ ಇಟ್ಕೊಂಡು ಅದ್ಯಾಯ ಕ್ರೂರ ಆಟವಾಡುತ್ತೋ ಗೊತ್ತಿಲ್ಲ. ಆದ್ರೆ ತಾಲಿಬಾನ್​ಗಳ ಕೈಗೆ ಪವರ್​​ ಫುಲ್​ ವೆಪನ್ ಸಿಕ್ಕಿರುವುದರಿಂದ ಅವರ ಅಟ್ಟಹಾಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇವು ಭಾರತ , ಬಾಂಗ್ಲಾ ಸೇರಿದಂತೆ ಇತರೆ ಏಷ್ಯಾಗಳ ಕಳವಳಕ್ಕೂ ಕಾರಣವಾಗಿದೆ. ಯಾಕಂದ್ರೆ ಈ ತಾಲಿಬಾನ್​ಗಳು ಇತರೆ ದೇಶಗಳ ಉಗ್ರರಿಗೂ ಇಲ್ಲಿರುವ ಅತ್ಯಾಧುನಿಕ ವೆಪನ್ಸ್​ಗಳನ್ನ ಸಪ್ಲೈ ಮಾಡುವ ಸಾಧ್ಯತೆ ಕೂಡ ಇದೆ.

blank

ಅಮೆರಿಕದ ಅತ್ಯಾಧುನಿಕ ವೆಪನ್ಸ್​ಗಳು ತಾಲಿಬಾನ್​ಗಳ ಕೈವಶವಾಗಿರುವುದರಿಂದ ಇತರೆ ಸಣ್ಣ ಪುಟ್ಟ ಉಗ್ರ ಸಂಘಟನೆಗಳಿಗೂ ರೆಕ್ಕೆ ಪುಕ್ಕ ಬಂದತ್ತಾಗಿದೆ. ತಾಲಿಬಾನ್​ಗಳು ಇತರೆ ದೇಶಗಳಲ್ಲಿರುವ ಉಗ್ರರಿಗೂ ಇದೇ ಅತ್ಯಾಧುನಿಕ ವೆಪನ್ಸ್​​ಗಳನ್ನ ಸಪ್ಲೈ ಮಾಡುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷರ ನಡೆಯಿಂದ ಉಗ್ರರಿಗೆ ಕ್ರೌರ್ಯ ಮೆರೆಯಲು ಬಲ ಬಂದಂತ್ತಾಗಿರುವುದು ಮಾತ್ರ ನಿಜಕ್ಕೂ ದೊಡ್ಡ ದುರಂತ.

Source: newsfirstlive.com Source link