‘ಪೊಲೀಸರಿಗೆಲ್ಲ ಹೆದರೋಕೆ ಆಗುತ್ತಾ’ ಎಂದು ಕಿಚಾಯಿಸಿ ವೀಲಿಂಗ್​ ಮಾಡ್ತಿದ್ದವ ಅಂದರ್​

‘ಪೊಲೀಸರಿಗೆಲ್ಲ ಹೆದರೋಕೆ ಆಗುತ್ತಾ’ ಎಂದು ಕಿಚಾಯಿಸಿ ವೀಲಿಂಗ್​ ಮಾಡ್ತಿದ್ದವ ಅಂದರ್​

ಬೆಂಗಳೂರು: ನಗರದ ಜಿಕೆವಿಕೆ, ವೀರಸಾಗರ ಬಳಿ ವೀಲಿಂಗ್ ಮಾಡಿ, ಪೊಲೀಸರಿಗೆ ಕಿಚಾಯಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ನಿಖಿಲ್ ಬಂಧಿತ ಯುವಕ. ಜಿಕೆವಿಕೆ , ವೀರಸಾಗರ ಬಳಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಈತ ಜೋರಾಗಿ ಹಾರ್ನ್ ಮಾಡಿಕೊಂಡು ವೀಲಿಂಗ್ ಮಾಡುವ ಮುಖಾಂತರ ಉಳಿದ ಸವಾರರಿಗೆ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿದ್ಕೊಂಡೇ ರೌಡಿಸಂ.. ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್

ಅಷ್ಟೇ ಅಲ್ಲದೇ ಇನ್ಸ್ಟಾದಲ್ಲಿ ರೀಲ್ಸ್​ ಮಾಡ್ತಿದ್ದ ಈತ ‘ಪೊಲೀಸರಿಗೆಲ್ಲ ಹೆದರೋಕಾಗುತ್ತಾ? ಪೊಲೀಸರೆಲ್ಲ ಹುಳ ಇದ್ದಂಗೆ’ ಎಂದು ತಮಿಳಿನಲ್ಲಿ ಪೊಲೀಸರನ್ನ ಅವಹೇಳನ ಮಾಡುವ ರೀತಿಯಲ್ಲಿ ರೀಲ್ಸ್ ಮಾಡಿ ಹರಿಬಿಟ್ಟಿದ್ದ ಎನ್ನಲಾಗಿದೆ. ಹೆಲ್ಮೆಟ್ ಧರಿಸದೆ, ವೀಲಿಂಗ್ ಮಾಡಿದ್ದಲ್ಲದೆ ಪೊಲೀಸರಿಗೆ ಕಿಚಾಯಿಸಿ ವೀಲಿಂಗ್ ವೀಡಿಯೋ ಮಾಡಿರುವ ಆರೋಪಿಯನ್ನು ಯಲಹಂಕ ಸಂಚಾರಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.

Source: newsfirstlive.com Source link