ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಯೋಧ.. ಕುಟುಂಬದಲ್ಲಿ ಮೂಡಿದ ಸಂತಸ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಯೋಧ.. ಕುಟುಂಬದಲ್ಲಿ ಮೂಡಿದ ಸಂತಸ

ಗದಗ: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಹಲವು ಭಾರತೀಯರು ಅಫ್ಘನ್​ನಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ. ಅವರೆಲ್ಲರನ್ನೂ ದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಗದಗ ಜಿಲ್ಲೆಯ ಬಳಗಾನೂರು ಗ್ರಾಮದ ಯೋಧ ರವಿ ನೀಲಗಾರನನ್ನ ಸುರಕ್ಷಿತವಾಗಿ ತಾಯಿನಾಡಿಗೆ ಕರೆತರಲಾಗಿದೆ.

blank

ರವಿ ಬಳಗಾನೂರು ದೆಹಲಿಗೆ ಬಂದಿಳಿದಿದ್ದು ಗದಗ ಜಿಲ್ಲೆಯ ಯೋಧನ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಮೈದುನ ಸುರಕ್ಷಿತವಾಗಿ ಬಂದಿರುವದು ಹಾಲು ಕುಡಿದಷ್ಟು ಸಂತಸವಾಗಿದೆ ಎಂದು ಯೋಧ ರವಿಯ ಅತ್ತಿಗೆ ಶೈಲಾ ನೀಲಗಾರ ಸಂತಸ ವ್ಯಕ್ತಪಡಿಸಿದ್ದಾರೆ.

blank

ರವಿ ಆರ್ ನೀಲಗಾರ ಐಟಿಬಿಪಿ ಯೋಧನಾಗಿದ್ದು 12 ವರ್ಷದಿಂದ ಐಟಿಬಿಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಎರಡು ವರ್ಷಗಳಿಂದ ಅಫ್ಘಾನಿಸ್ತಾನ ಕಾಬೂಲ್​ನಲ್ಲಿ ಕರ್ತವ್ಯ ಮಾಡುತ್ತಿದ್ದರು. ರಾಯಭಾರಿ ಕಚೇರಿಯಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿ ರವಿ ನೀಲಗಾರ ಸೇವೆ ಮಾಡುತ್ತಿದ್ರು. ಇದೀಗ ಅವರನ್ನ ಸುರಕ್ಷಿತವಾಗಿ ದೆಹಲಿಗೆ ಕರೆತಂದ ಬೆನ್ನಲ್ಲೇ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾವು ಯಾವುದೇ ಭಾರತೀಯರನ್ನ ಕಿಡ್ನಾಪ್​ ಮಾಡಿಲ್ಲ- ತಾಲಿಬಾನ್​ ವಕ್ತಾರ ಸ್ಪಷ್ಟನೆ

Source: newsfirstlive.com Source link