ಡಾ.ರಾಜ್​​​, ಡಾ.ವಿಷ್ಣು.. ನಂತರ ಕಿಚ್ಚ ಸುದೀಪ್​​ -ಖ್ಯಾತ ಹಾಸ್ಯ ನಟ ಅಲಿ ಮೆಚ್ಚುಗೆ

ಡಾ.ರಾಜ್​​​, ಡಾ.ವಿಷ್ಣು.. ನಂತರ ಕಿಚ್ಚ ಸುದೀಪ್​​ -ಖ್ಯಾತ ಹಾಸ್ಯ ನಟ ಅಲಿ ಮೆಚ್ಚುಗೆ

ಕಿಚ್ಚ ಸುದೀಪ್​ ಅವರ ಆಪ್ತ ಗೆಳೆಯ ರಾಜೀವ್ ಅವರು ನಾಯಕ ನಟರಾಗಿರುವ ಹೊಸ ಸಿನಿಮಾ ಉಸಿರೆ ಉಸಿರೆ ಚಿತ್ರದ ಪೋಸ್ಟರ್​ ಲಾಂಚ್​ ಕಾರ್ಯಕ್ರಮದಲ್ಲಿ ಟಾಲಿವುಡ್​ ಸ್ಟಾರ್ ನಟ ಅಲಿ ಭಾಗಿಯಾಗಿದ್ದರು. ಈ ವೇಳೆ ಕನ್ನಡ ಚಿತ್ರರಂಗದೊಂದಿಗೆ ತಮಗಿರುವ ಆತ್ಮೀಯ ಬಾಂಧವ್ಯದ ಬಗ್ಗೆ ನೆನಪು ಮಾಡಿಕೊಂಡರು.

ಮೊಟ್ಟ ಮೊದಲ ಬಾರಿಗೆ ನಾನು 1983ರಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ದಿಗ್ಗಜ ನಟ ಅಂಬರೀಶ್ ಅವರೊಂದಿಗೆ ಏಕಲವ್ಯ ಸಿನಿಮಾದಲ್ಲಿ ಅಭಿನಯಿಸಿದ್ದೆ ಎಂದು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್​ ಅವರಿಗೂ ಧನ್ಯವಾದ ತಿಳಿಸಿದ ನಟ ಅಲಿ, ಬಾಲಿವುಡ್​​ ಬಾದ್​​ಶಾ ಶಾರುಕ್​​ ​ಖಾನ್, ಕನ್ನಡ ಇಂಡಸ್ಟ್ರಿ ಬಾದ್​ ಶಾ ಕಿಚ್ಚ ಸುದೀಪ್​.

ಕನ್ನಡ ಚಿತ್ರರಂದಲ್ಲಿ ಡಾ.ರಾಜ್​ಕುಮಾರ್, ಡಾ.ವಿಷ್ಣು ವಿರ್ಧನ್​, ಅಂಬರೀಶ್​ ಬಳಿಕ ಆ ಮಟ್ಟದ ಹೆಸರನ್ನು ಕನ್ನಡ ಚಿತ್ರದಲ್ಲಿ ಕಿಚ್ಚ ಸುದೀಪ್​ ಪಡೆದುಕೊಂಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲ ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲೂ ಖ್ಯಾತಿ ಪಡೆದಿದ್ದಾರೆ. ಅವರ ಬಗ್ಗೆ ನಮ್ಮ ಇಂಡಸ್ಟ್ರಿಯಲ್ಲೂ ಮಾತನಾಡುತ್ತಿದ್ದರೆ ಕೇಳಲು ಸಂತೋಷವಾಗುತ್ತದೆ.

ನನಗೆ ಈ ಸಿನಿಮಾ ಬಗ್ಗೆ ಅರ್ಧ ಗಂಟೆಯಲ್ಲಿ ನಿರ್ದೇಶಕರು ವಿವರಣೆ ನೀಡಿದ್ರು. ಸಿನಿಮಾ ಕಥೆ ಉತ್ತಮವಾಗಿದೆ. ಈ ಕಥೆಯನ್ನು ಜನರು ಕನಿಷ್ಠ ನಾಲ್ಕು ಬಾರಿ ನೋಡ್ತಾರೆ. ಸಿನಿಮಾ ಕಥೆಗೆ ಅಷ್ಟು ಧಮ್​ ಇದೆ.. ಇಂತಹ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟಿದ್ದು, ಸಖತ್ ಖುಷಿ ಆಗುತ್ತಿದೆ ಎಂದು ಧನ್ಯವಾದ ತಿಳಿಸಿದರು.

Source: newsfirstlive.com Source link