ಚೀನಾ-ತಾಲಿಬಾನ್ ಸ್ನೇಹ.. ಇದರ ಹಿಂದಿದೆ 75 ಲಕ್ಷ ಕೋಟಿ ರೂಪಾಯಿ ಚಕ್ರವ್ಯೂಹ..!

ಚೀನಾ-ತಾಲಿಬಾನ್ ಸ್ನೇಹ.. ಇದರ ಹಿಂದಿದೆ 75 ಲಕ್ಷ ಕೋಟಿ ರೂಪಾಯಿ ಚಕ್ರವ್ಯೂಹ..!

ಅಫ್ಘಾನ್​ನಲ್ಲಿ ತಾಲಿಬಾನ್​​ಗಳ ರಕ್ಕಸ ರೂಪ ದಿನದಿಂದ ದಿನಕ್ಕೆ ಕೆರಳುತ್ತ ಇರೋದನ್ನು ನೋಡಿದ್ದೀವಿ. ಅಲ್ಲಿನ ಪರಿಸ್ಥಿತಿ ಕೈ-ಮೀರಿ ಹೋಗಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಅಲ್ಲಿನ ಪರಿಸ್ಥಿತಿ ಸುಧಾರಿಸಲು ಪ್ಲಾನ್​ಗಳನ್ನ ಮಾಡುತ್ತಿದ್ರೆ, ಚೀನಾ ತಾಲಿಬಾನ್ ಜೊತೆಗೆ ತನ್ನ ಸ್ನೇಹ ಹಸ್ತ ಚಾಚುತ್ತಿದೆ. ಇದ್ಯಾಕೆ? ಗೊತ್ತಾ.. ಇದು ಬರೋಬ್ಬರಿ 75 ಲಕ್ಷ ಕೋಟಿ ರೂಪಾಯಿ ಚಕ್ರವ್ಯೂಹ..!

ಚೀನಾ ಬೇಸಿಕಲಿ ವ್ಯಾಪಾರಿ ಮನಸ್ಥಿತಿಯ ರಾಷ್ಟ್ರ.. ಯಾರಿಗೆ ಏನಾಗುತ್ತೋ ನಮಗೆ ಸಂಬಂಧಿಸಿದ್ದಲ್ಲ. ಲಾಭ ಆಗುತ್ತಾ? ಅದು ಮುಖ್ಯ ಅನ್ನೋದು ಚೀನಾದ ಗುಣ.. ಶತ್ರುವಿನ ಶತ್ರಗಳನ್ನು ಮಿತ್ರನಾಗಿಸಿಕೊಳ್ಳೋದು, ರಕ್ತದ ಮಡುವಲ್ಲೂ ಲಾಭ ಹುಡುಕೋದು ಚೀನಾದ ವೈಖರಿ.. ಅದೇ ದಾಳವನ್ನ ಈಗ ಈ ಡ್ರಾಗನ್ ರಾಷ್ಟ್ರ ಆತಂಕದ ಅತಿರೇಕ ತಲುಪಿರೋ ಅಫ್ಘಾನಿಸ್ತಾನದಲ್ಲಿ ಹೂಡಿದೆ. ಅದು ಯಾಕೆ ಅಂತೀರಾ.. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 75 ಲಕ್ಷ ಕೋಟಿ ರೂಪಾಯಿ ಸಂಪತ್ತು ಅವರ ಕೈಗೆ ಸಿಗೋ ಅದೃಷ್ಟ ಅವರನ್ನು ಹುಡುಕಿ ಬಂದಂತಾಗಿದೆ..!

blank

ತಾಲಿಬಾನ್​ ಕೈವಶವಾಗಿರೋ ಅಫ್ಘಾನಿಸ್ತಾನದಲ್ಲಿ ಈಗ ಅಕ್ಷಶಃ ಹಸಿವಿನ ತಾಂಡವ.. ಬಡತನದ ಅಂಧಕೂಪ ಆವರಿಸಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ. ಭಯೋತ್ಪಾದಕರೇ ಹಸಿವಿನಿಂದ ನರಳೋ ಭಯಕ್ಕೆ ಸಿಲುಕಿದ್ದಾರೆ.. ಇನ್ನೊಂದು ಕಡೆ ಪ್ರಶ್ನೆಗಳಿಗೆ ಮಾತಿನಿಂದ ಉತ್ತರ ಕೊಡುವ ಬದಲು ಬಂದೂಕಿನಿಂದ ಉತ್ತರ ನೀಡುತ್ತಿದ್ದಾರೆ. ಇದರಿಂದ ತಾಲಿಬಾನ್ ನೆಲ ಸದ್ಯ ರಕ್ತ ಸಿಕ್ತವಾಗಿ ಕ್ರೌರ್ಯದಲ್ಲಿ ಮುಳುಗಿದೆ. ಇಂಥ ಪರಿಸ್ಥಿತಿಯ ಲಾಭ ಪಡೆಯಲು ದೂರಾಲೋಚನೆ ಮಾಡಿರೋ ಚೀನಾ.. ಬರೋಬ್ಬರಿ 75 ಲಕ್ಷ ಕೋಟಿ ರೂಪಾಯಿ ಸಂಪತ್ತೇ ಬಂದು ಜೇಬಿಗೆ ಬಿದ್ದಂತೆ ಕನಸು ಕಾಣುತ್ತಿದೆ.

ತಾಲಿಬಾನ್​ಗಳ ನಡೆಗೆ ಚೀನಾ ಸಂಪೂರ್ಣ ಬೆಂಬಲ
ತಾಲಿಬಾನಿಗಳು ಅತ್ಯಂತ ಒಳ್ಳೆಯವರು ಎಂದ ಚೀನಾ

ಚೀನಾ ಕಣ್ಣಿಗೆ ಕ್ರೂರತ್ವ ಮೆರಿಯುತ್ತಿರುವ ತಾಲಿಬಾನಿಗಳೂ ಅತ್ಯಂತ ಒಳ್ಳೇಯವರಂತೆ. ತಾಲಿಬಾನಿಗಳ ನಡೆಗೆ ಚೀನಾ ಸಂಪೂರ್ಣ ಬೆಂಬಲ ನೀಡುತ್ತೆವೆ ಎಂದಿದೆ ಚೀನಾ. ಇದರ ಹಿಂದೆ ಇರುವ ಯೋಜನೆಯನ್ನು ನಾವು ಯಾವುದೇ ಗೋಜಿಲ್ಲದೆ ಅರ್ಥ ಮಾಡಿಕೊಂಡು ಬಿಡಬಹುದು. ಚೀನಾ ಇಲ್ಲಿ ಏನೋ ಕುತಂತ್ರದ ಪ್ಲಾನ್ ರೂಪಿಸಿದೆ ಅಂತ. ಅಂತಹ ಒಳ್ಳೆತನ ಚೀನಾ ಕಣ್ಣಿಗೆ ತಾಲಿಬಾನಿಗಳಲ್ಲಿ ಕಂಡಿದ್ದಾರು ಏನು?

ನಾವು ಬದಲಾಗಿದ್ದೇವೆ..ನಮ್ಮ ಚಿಂತನೆ ಹಿಂದೆ ಇದ್ದಂತೆ ಇದ್ದರೂ.. ಹೊರ ಜಗತ್ತಿನ ವ್ಯವಹಾರ ಅರಿತಿದ್ದೇವೆ ಅಂತ ತಾಲಿಬಾನಿಗಳೇ ಹೇಳಿದ್ದರು. ಆದರೆ ದಿನ ಕಳೆದಂತೆ ಅವರ ಬದಲಾವಣೆ ಏನು ಅನ್ನೋದು ಎಲ್ಲರಿಗೂ ಪರಿಚಯ ಆಗಿಬಿಡ್ತು. ಈ ರೀತಿ ಹೇಳಿಕೆಗಳನ್ನು ನೀಡಿ ಜಗತ್ತಿನ ಸಹಾಯದ ನಿರೀಕ್ಷೆ ಬಯಸಿದ್ದರು ತಾಲಿಬಾನಿಗಳು. ಆದರೆ ಅದು ಕೊನೆ ಗೊಂಡಿದ್ದು ಮತ್ತದೆ ರಕ್ತ ಚೆಲ್ಲುವುದರಿಂದ. ನಾವು ಬದಲಾಗಿದ್ದೇವೆ ಅನ್ನೋ ಮಾತನ್ನು ತಾಲಿಬಾನಿಗಳೇ ತಮ್ಮ ನಡೆಯಲ್ಲಿ ತೋರಲಿಲ್ಲ. ಆದರೆ ಚೀನಾ ಈ ಮಾತನ್ನು ಹೇಳ್ತಾ ಇದೆ. ತಾಲಿಬಾನಿಗಳು ಬದಲಾಗಿದ್ದಾರೆ, ಅವರು ಮುಂಚಿನಂತಿಲ್ಲ, ಅವರ ಬೆಳವಣೆಗೆಗೆ ಸಪೋರ್ಟ್ ನೀಡಿದರೆ ಒಂದು ಒಳ್ಳೆಯ ದೇಶ ಆಗುವುದರಲ್ಲಿ ಸಂಶಯವಿಲ್ಲ ಅನ್ನೋ ರೀತಿ ಹೇಳಿ. ನಿಮ್ಮ ಜೊತೆ ನಾವಿದ್ದೇವೆ ಎನ್ನುತ್ತಿದ್ದಾರೆ ಚೀನಿಯರು.

ಚೀನಿಯರು ಹೀಗೆ ಹೇಳಿದ್ದಾದ್ರೂ ಯಾಕೆ?
ಕಳೆದ ತಿಂಗಳು ನಡೆದ ಸಭೆಯಲ್ಲಿ ಏನಾಗಿತ್ತು?

ಅಫ್ಘಾನ್ ಪರ ಚೀನಾ ಹೇಳಿಕೆ ನೀಡ್ತಾ ಇದ್ದಂತೆ ಅಫ್ಘಾನ್ ನಲ್ಲಿ ನೆಲೆ ನಿಂತಿರುವ ತಾಲಿಬಾನ್ ವಕ್ತಾರರು ಮಾಧ್ಯಮವನ್ನು ಕುರಿತು ಕೆಲವು ವಿಷಯಗಳನ್ನು ಹಂಚಿಕೊಳ್ತಾರೆ. ಅಫ್ಘಾನ್ ನೆಲದಲ್ಲಿ ಚೀನಿಯರು ಹೂಡಿಕೆ ಮಾಡಬಹುದು, ನಮಗೆ ಅಫ್ಘಾನಿಸ್ತಾನವನ್ನು ಮರುಸೃಷ್ಟಿ ಮಾಡಲು, ಅಫ್ಘಾನ್ ಅನ್ನು ಮತ್ತೆ ಅಭಿವೃದ್ಧಿ ಪಥದ ಹತ್ತಿರ ಕರೆದೊಕೊಂಡು ಹೋಗಲು ಚೀನ ಸಹಾಯ ಮಾಡುತ್ತೆ ಅನ್ನೋ ಮಾತುಗಳನ್ನು ಬಹಿರಂಗ ಪಡಿಸಿಬಿಡಿಸಿ ಬಿಡ್ತಾರೆ. ಇಲ್ಲಿಂದಲೇ ಚೀನಾ ಅಫ್ಘಾನ್ ನಡುವಿನ ಹೊಸ ಚಿತ್ರಣ ರೂಪುಗೊಳ್ಳೋದು. ಆದರೆ ಚೀನಿಯರಿಗೆ ಇದರಿಂದ ಏನು ಲಾಭ ?

blank

ಅಫ್ಘಾನ್ ನೆಲದಲ್ಲಿ ಚೀನಾ ಕಣ್ಣಿಗೆ ಬಿದ್ದಿರುವ ಆ ಒಂದು ಅಂಶವೇನು ?

ಅಫ್ಘಾನ್ ಸದ್ಯಕ್ಕಂತೂ ಬಲಿಷ್ಟರೆಲ್ಲರಿಂದ ತಿರಸ್ಕಾರಕ್ಕೆ ಒಳಗಾಗಿ ಬಡ ರಾಷ್ಟ್ರವಾಗಿ ಹೋಗಿದೆ. ಇಲ್ಲಿಯ ಸೇನೆಯಾಗಲಿ, ಸೇನಾ ಪರಿಕರಗಳಾಗಲಿ ಯಾವುದು ಅಫ್ಘಾನಿಯರದಲ್ಲ. ತಾಲಿಬಾನ್ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ವಿಶ್ವ ಸಂಸ್ಥೇ ಹೇಳಿದ್ದಾಗಿದೆ. ಇನ್ನು ಸೈನಿಕರ ಸಹಾಯ ಬಯಸುವುದಾದರೇ, ತಾಲಿಬಾನಿಗಳು ಅದರಲ್ಲೂ ಪರಿಣಿತರಲ್ಲ. ಆದರೆ ಚೀನಾ ತಾಲಿಬಾನಿಗಳಿಂದ ಲಾಭವನ್ನು ನಿರೀಕ್ಷಿಸಿ ಅವರ ಬೆನ್ನಗಿ ನಿಂತಿದೆ. ಹಾಗಾದರೇ ಚೀನಿಯರಿಗೆ ಇವರಿಂದ ಅಂತ ಲಾಭ ಏನು ? ಕೇವಲ ಶತ್ರಗಳ ಶತ್ರ ಮಿತ್ರ ಎನ್ನುವ ಅಂಶ ಹಿಡುದು ಹೀಗೆ ಸಹಾಯಕ್ಕಿಳಿದಿದ್ಯಾ? ಖಂಡಿತ ಇಲ್ಲ. ಅಫ್ಘಾನ್ ನೆಲದಿಂದ ಬರಿ ಚೀನಾಗಲ್ಲ, ಇಡೀ ವಿಶ್ವಕ್ಕೆ ಬೇಕಾಗಿರುವ ಅಂಶವಿದೆ. ಆ ಅಂಶವನ್ನು ತನ್ನದಾಗಿಸಲು ಪಟ್ಟು ಹಿಡಿದು ಕೂತಿದೆ ಚೀನಾ. ಅಷ್ಟಕ್ಕೂ ಆ ಅಂಶವೇನು ಗೊತ್ತಾ?

ಅಫ್ಘಾನ್ ಬಳಿ ಇದೆ, ವಿಶ್ವಕ್ಕೆ ಬೇಕಾದಷ್ಟು ಮಿನರಲ್ಸ್
ಈ ಬೆಲೆಬಾಳುವ ಮಿನರಲ್ಸ್ ಮೇಲೆ ಬಿದ್ದಿದೆ ಚೀನಿಯರ ಕಣ್ಣು

ಹೌದು, ಸಧ್ಯಕ್ಕಂತು ಅಫ್ಘಾನ್​ನಲ್ಲಿ ಹಣದ ಹರಿವು ಇಲ್ಲದೆ ಬಡ ರಾಷ್ಟ್ರವಾಗಿ ಹೋಗಿದೆ. ಆದರೆ ಅಫ್ಘಾನ್ ಮಣ್ಣು ಮಾತ್ರ ತನ್ನ ಶ್ರೀಮಂತಿಗೆಯನ್ನು ಎತ್ತಿ ಹಿಡಿಯುತ್ತಿದೆ. ಅಫ್ಘಾನ್ ಗುಡ್ಡ ಪ್ರದೇಶದಲ್ಲಿ ಜಗತ್ತಿಗೆ ಬೇಕಿರುವ, ಬೆಲೆ ಬಾಳುವ ಮೆಟಲ್ಸ್ ಗಳು, ಮಿನರಲ್ಸ್ ಗಳು ರಾಶಿ ರಾಶಿ ಇದೆ. ಈ ಒಂದು ಸಂಪತ್ತನ್ನು ತನ್ನದಾಗಿಸಿಕೊಳ್ಳಲು ಚೀನಾ ಸಕತ್ ಪ್ಲಾನ್ ಮಾಡಿದೆ. ಯಾವಾಗ ವಿಶ್ವದ ಬಲೀಷ್ಟರೆಲ್ಲರೂ ತಾಲಿಬಾನಿಗಳ ಕೈ ಬಿಟ್ಟರೋ, ಚೀನಾ ಈ ಸಮಯವನ್ನು ಸಾಧಿಸಿಕೊಳ್ಳಲು, ಆಮಿಷದ ರೂಪದಲ್ಲಿ ತಾಲಿಬಾನ್ ಗಳಿಗೆ ಬಗೆ ಬಗೆಯ ಆಫರ್ಸ್ ಗಳನ್ನು ನೀಡ್ತಾ ಇದೆ. ಈ ಆಫರ್ಸ್ ಗಳ ಹಿಂದೆ ಚೀನಾಗೆ ಬೇಕಿರೋದು ಅಫ್ಘಾನ್ ನ ಸಂಪತ್ತು.

ಅಫ್ಘಾನ್ ನೆಲವನ್ನು ಅಮೆರಿಕ ವಶಪಡಿಸಿಕೊಂಡಾಗ ಸಿಕ್ಕ ಸಂಪತ್ತು
1 ಟ್ರಿಲಿಯನ್ ಡಾಲರ್ ಬೆಲೆ ಬಾಳುವ ಖನಿಜಕ್ಕಾಗಿ ಚೀನಾ ಹರಸಾಹಸ

2001 ರಲ್ಲಿ ಅಮೆರಿಕ ತನ್ನ ಸೇನೆಯನ್ನು ಅಫ್ಘಾನ್ ನೆಲೆಕ್ಕೆ ಕಳುಹಿಸಿತ್ತು. ಇದಾದ ಬಳಿಕ 2010 ರಲ್ಲಿ ಅಮೆರಿಕಾದ ಭೂವಿಜ್ಞಾನಿಗಳ ಜೊತೆ ಅಫ್ಘಾನ್ ನೆಲವನ್ನು ಸಂಶೋಧನೆ ಮಾಡಿದಾಗ ಅಲ್ಲಿ ಚಿನ್ನ, ಕಬ್ಬಿಣ, ಕೋಬಾಲ್ಟ್ ನಂತಹ ಮೆಟಲ್ಸ್ ಜೊತೆಗೆ ಲಿಥಿಯುಂ, ಗ್ರಾಫೈಟ್ ನಂತಹ ಅತ್ಯಂತ ಅಪರೂಪದ ಮಿನರಲ್ಸ್ ಗಳು ಈ ನೆಲದಲ್ಲಿ ಅತಿ ಹೆಚ್ಚಾಗಿದೆ ಅನ್ನೋದನ್ನು ಘೋಷಿಸಿತ್ತು. ಅದಾದ ಬಳಿಕ ಅಫ್ಘಾನ್ ನಲ್ಲಿ ಗಣಿಗಾರಿಕೆಗಳು ಹಂತ ಹಂತವಾಗಿ ಕೈ ಗೊಂಡು, ವಿಶ್ವದ ಅನಿವಾರ್ಯವನ್ನು ಅಫ್ಘಾನ್ ಸರ್ಕಾರ ಪೂರ್ಣಗೊಳಿಸಿತ್ತು. ಆದ್ರೆ ಇದೀಗ ಅಫ್ಘಾನ್ ತಾಲಿಬಾನಿಗಳ ವಶದಲ್ಲಿದೆ. ಇದರೊಂದಿಗೆ ಆ ಶ್ರೀಮಂತ ಸಂಪತ್ತು ಸಹ ತಾಲಿಬಾನಿಗಳ ವಶದಲ್ಲಿದೆ. ಇನ್ನು ತಾಲಿಬಾನಿಗಳ ಬಳಿ ಇರುವ ಸಂಪತ್ತು ಅದೆಷ್ಟೂ ಅನ್ನೋದನ್ನು ನೋಡೋದಾದ್ರೆ.

ಅಫ್ಘಾನ್ ನೆಲದಲ್ಲಿರುವ ಸಂಪತ್ತು

ಅಫ್ಘಾನ್ ನೆಲದಲ್ಲಿ ಕಬ್ಬಿಣ 420 ಮಿಲಿಯನ್ ಡಾಲರ್, ಕಂಚು 274 ಮಿಲಿಯನ್ ಡಾಲರ್, ಚಿನ್ನ 25 ಮಿಲಿಯನ್ನ ಡಾಲರ್, ಲೀಥಿಯಂ 81 ಮಿಲಿಯನ್ ಡಾಲರ್, ಮಾಲಿಬ್ಡಿನಂ 23.9 ಮಿಲಿಯನ್ ಡಾಲರ್ ನಷ್ಟಿದೆ. ಜೊತೆಗೆ ಇತರೆ ಮೆಟಲ್ ಗಳು 33.2 ಮಿಲಿಯನ್ ಡಾಲರ್ ನಷ್ಟು ಸಂಪತ್ತು ಇದೆ ಅನ್ನೋ ಮಾಹಿತಿ ಇದೆ.

ಈ ಲೆಕ್ಕಾಚಾರದ ಪ್ರಕಾರ ಜಗತ್ತಿಗೆ ಅತಿ ಹೆಚ್ಚು ಅಗತ್ಯವಿರುವ ಲೀಥಿಯಂ ಅಫ್ಘಾನ್ ಬಳಿ ಅತಿ ಹೆಚ್ಚು ಇದೆ. ಮೊಬೈಲ್ , ಮೋಟರ್ ಸೈಕಲ್ ಜೊತೆಗೆ ಯಾವುದೆ ಬ್ಯಾಟರಿಗಳಿಗೆ ಲೀಥಿಯಂ ಅತಿ ಮುಖ್ಯವಾದ ಮಿನರಲ್. ಈ ಸಂಪತ್ತು ಅಫ್ಘಾನನಲ್ಲಿರೋದು ವಿಶ್ವದ ರಷ್ಯಾ, ಪಾಕಿಸ್ತಾನ, ಯೂರೋಪ್ ಸೇರಿ ಹಲವು ರಾಷ್ಟ್ರಗಳ ಕಣ್ಣು ಇದರ ಮೇಲಿದೆ. ಆದರೇ ಚೀನಾ ಮಾತ್ರ ಈ ಸಂಪತ್ತನ್ನು ತನ್ನಾದಾಗಿಸಿಕೊಂಡು ಲಾಭ ಹುಡುಕುವುದಕ್ಕೆ ಮುಂದಾಗಿದೆ.

blank

ಇದಿಷ್ಟೆ ಅಲ್ಲ, ಚೀನಾಗೆ ಯಾವುದೇ ಗೂಡ್ಸ್ ಬರಬೇಕಾದರೆ ಹಿಂದೂ ಮಹಾ ಸಾಗರ ದಾಟಿ, ಉತ್ತರ ಚೀನಾಗೆ ತಲುಪುತ್ತದೆ. ಎಂದಾದರು ಒಮ್ಮೆ ಈ ಸಂಚಾರವನ್ನು ಭಾರತ ನಿಲ್ಲಿಸಿದರೇ, ಚೀನಾಗೆ ಇರುವ ಮಾರ್ಗ, ಅಫ್ಘಾನ್ ದಾಟಿ, ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್​ ಮೂಲಕ ಡ್ರಾಗನ್ ದೇಶ ತಲುಪಬಹುದು. ಅಫ್ಘಾನ್ ತನ್ನ ಸಹಾಯ ಹಸ್ತ ಚಾಚುವುದರಿಂದ ಈ ಮಾರ್ಗವೂ ಸಲೀಸಾಗಿ ಬಿಡುತ್ತದೆ. ಈ ಕಾರಣ ಚೀನಾ ಅಫ್ಘಾನ್ ಗೆ ಬೆಂಬಲ ಸೂಚಿಸಲು ಮುಂದಾಗಿದೆ.

ಚೀನಾ ಈಗ ಅಫ್ಘಾನ್ ನಲ್ಲಿರುವ ತಾಲಿಬಾನಿಗಳಿಗೆ ವ್ಯಾವಹಾರಿಕವಾಗಿ, ಹಣಕಾಸಿನ ವಿಚಾರವಾಗಿ, ಜೊತೆಗೆ ಸೇನೆ ಮತ್ತು ಸೇನಾ ಪರಿಕರಗಳ ಸಹಾಯ ಮಾಡುವುದಾಗಿ ಅಫ್ಘಾನ್ ಜೊತೆ ಮಾತುಕತೆ ನಡೆಸುತ್ತಿದೆ. ಇದರಿಂದ ಅಫ್ಘಾನ್ ಗಿಂತ ಚೀನಾಗೆ ಲಾಭ ಹೆಚ್ಚು ಅನ್ನೋದು ತಾಲಿಬಾನಿಯರಿಗೆ ಅರಿವಾಗದ ವಿಷಯ. ಇದಕ್ಕೂ ಹೆಚ್ಚಾಗಿ., ಭಾರತದ ವಿರೋಧಿಯಾಗಿ ಪಾಕ್​ಗೆ ಸಹಾಯ ಮಾಡುವ ಮೂಲಕ ವೈರತ್ವವನ್ನು ಹೆಚ್ಚು ಪಡಿಸಿದ ಚೀನಾ, ಈಗ ಅಫ್ಘಾನ್ ನಲ್ಲಿರುವ ತಾಲಿಬಾನ್ ಗಳನ್ನು ಭಾರತದ ಮೇಲೆ ಹಾಗೂ ವಿಶ್ವದ ಬಲಿಷ್ಟರ ಮೇಲೆ ಎತ್ತಿ ಕಟ್ಟುವ ಹುನ್ನಾರ ರೂಪಿಸಿದೆ.

ಒಟ್ಟಿನಲ್ಲಿ ಚೀನಾ ತನ್ನ ಕುತಂತ್ರ ಬುದ್ಧಿಯಿಂದ ತನ್ನದೇ ಶೈಲಿಯಲ್ಲಿ, ವಿಶ್ವಕ್ಕೆ ವಿರೋಧಿ ರಾಷ್ಟ್ರ ಒಂದನ್ನು ಹುಟ್ಟು ಹಾಕುತ್ತಿದೆ. ಇದರಿಂದ ಸಕಲ ಮಾರ್ಗದಲ್ಲೂ ಚೀನಾಗೆ ಲಾಭ ಹೆಚ್ಚು, ಆದರೆ ಮೇಲ್ನೋಟಕ್ಕೆ ಇದು ಅಫ್ಘಾನಿಗಳಿಗೆ ದೊಡ್ಡ ಸಹಾಯ ಎನ್ನುವ ರೀತಿ ಕಾಣಿಸುತ್ತಿರುವುದಂತು ಸುಳ್ಳಲ್ಲ.

ಅಫ್ಘಾನ್ ನಲ್ಲಿರುವ ಮುಗ್ಧ ನಾಗರೀಕರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡು ಹೋಗೋದು ಜಗತ್ತಿನ ಬೇರೆ ರಾಷ್ಟ್ರಗಳ ಯೋಚನೆಯಾದರೆ, ಸಮಯ ಸಾಧಕ ಚೀನಾಗೆ ಈ ಪರಿಸ್ಥಿತಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವ ಯೋಚನೆ. ಕೊನೆಗೆ ಚೀನಾದ ನರಿ ಬುದ್ಧಿಗೆ ಬಲಿಯಾಗೋದು ಯಾರು ಅನ್ನೋದು ಎಲ್ಲರಿಗೂ ತಿಳಿದೇ ಇದೆ.

Source: newsfirstlive.com Source link