BELನಿಂದ ರಾಯಚೂರು ಜಿಲ್ಲೆಗೆ 10 ಅಂಬ್ಯುಲೆನ್ಸ್

ರಾಯಚೂರು : ಅಭಿವೃದ್ಧಿ ವಿಚಾರದಲ್ಲಿ ರಾಯಚೂರು ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವುದರಿಂದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿ ಜಿಲ್ಲೆಗೆ 10 ಅಂಬ್ಯುಲೆನ್ಸ್ ಗಳನ್ನ ನೀಡಿದೆ. ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ ಸಿಎಸ್‍ಆರ್ ಫಂಡ್‍ನಿಂದ ಅಂಬ್ಯುಲೆನ್ಸ್ ಗಳನ್ನ ಜಿಲ್ಲೆಗೆ ನೀಡಲಾಗಿದೆ.

ಬಿಇಎಲ್ ಕಂಪನಿ ಅಧಿಕಾರಿಗಳು ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂಬ್ಯುಲೆನ್ಸ್ ಗಳನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದರು. ಸುಮಾರು 4 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ಹವಾ ನಿಯಂತ್ರಿತ ಅಂಬ್ಯುಲೆನ್ಸ್ ಗಳನ್ನ ನೀಡಲಾಗಿದೆ. ಸದ್ಯ ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಸರಬರಾಜು, ರೋಗಿಗಳ ಸಾಗಣೆಗೆ ಅಗತ್ಯ ಸೌಲಭ್ಯಗಳಿವೆ.

ವೆಂಟಿಲೇಟರ್ ಸೇರಿದಂತೆ ಅಡ್ವಾನ್ಸ್ ಲೈಫ್ ಸಪೋರ್ಟ್ ವ್ಯವಸ್ಥೆಗಳನ್ನ ಅಳವಡಿಸುವುದು ಬಾಕಿಯಿದೆ. ಬಿಇಎಲ್ ಕಂಪನಿ ನೀಡಿರುವ ಅಂಬ್ಯುಲೆನ್ಸ್ ಗಳು ಜಿಲ್ಲೆಗೆ ಅವಶ್ಯಕವಾಗಿದ್ದು, ಸದ್ಬಳಕೆಯಾಗಲಿವೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ: ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್

Source: publictv.in Source link