ಸಿಟಿ ರವಿ ಮನೆ ಮುತ್ತಿಗೆಗೆ ಕಾಂಗ್ರೆಸ್ ಯತ್ನ.. ಪ್ರತಿರೋಧ ಒಡ್ಡಲು ಬಿಜೆಪಿ ಕಾರ್ಯಕರ್ತರು ಜಮಾವಣೆ

ಸಿಟಿ ರವಿ ಮನೆ ಮುತ್ತಿಗೆಗೆ ಕಾಂಗ್ರೆಸ್ ಯತ್ನ.. ಪ್ರತಿರೋಧ ಒಡ್ಡಲು ಬಿಜೆಪಿ ಕಾರ್ಯಕರ್ತರು ಜಮಾವಣೆ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನೆ ಮೇಲೆ ಕಾಂಗ್ರೆಸ್ ಮುತ್ತಿಗೆ ಕರೆ ನೀಡಿತ್ತು. ಅದರಂತೆ ರಕ್ಷ ರಾಮಯ್ಯ ನೇತೃತ್ವದಲ್ಲಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರನ್ನ ತಡೆದು ವಾಪಸ್ ಕಳುಹಿಸಿದ್ದಾರೆ.

blank

ಯುವ ಕಾಂಗ್ರೆಸ್ ಘಟಕದಿಂದ ರಾಜ್ಯ ಯುವಮೋರ್ಚಾ ಅಧ್ಯಕ್ಷ ರಕ್ಷ ರಾಮಯ್ಯ ನೇತೃತ್ವದಲ್ಲಿ ಮುತ್ತಿಗೆಗೆ ಇಂದು ಕರೆ ನೀಡಲಾಗಿತ್ತು. ಇನ್ನು ಕಾಂಗ್ರೆಸ್​ ಪ್ರತಿಭಟನೆ ಪ್ರತಿರೋಧ ನೀಡಲು ಸಿ.ಟಿ.ರವಿ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.

ಸುಮಾರು 400ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜಮಾವಣೆ ಮಾಡಿದ್ದರು. ಇವರೆಲ್ಲ ಕಾಂಗ್ರೆಸ್ ಮುತ್ತಿಗೆಗೆ ಪ್ರತಿರೋಧ ನೀಡಲು ಬಂದಿದ್ರು. ಹೀಗಾಗಿ ಸಿ.ಟಿ.ರವಿ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್​ ನಿಯೋಜಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಪೊಲೀಸರು ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆಯನ್ನ ತಡೆದು ವಾಪಸ್ ಕಳುಹಿಸಿದ್ದಾರೆ ಅಂತಾ ವರದಿಯಾಗಿದೆ.

blank
ಬಿಜೆಪಿ ಕಾರ್ಯಕರ್ತರ ಜಮಾವಣೆ

Source: newsfirstlive.com Source link