ಉತ್ತರಾಖಂಡ್​ನಲ್ಲಿ ಮತ್ತೊಂದು ಭಾರೀ ಭೂಕುಸಿತ; ಕೂದಲೆಳೆ ಅಂತರದಲ್ಲಿ ಬದುಕುಳಿದ 30 ಮಂದಿ

ಉತ್ತರಾಖಂಡ್​ನಲ್ಲಿ ಮತ್ತೊಂದು ಭಾರೀ ಭೂಕುಸಿತ; ಕೂದಲೆಳೆ ಅಂತರದಲ್ಲಿ ಬದುಕುಳಿದ 30 ಮಂದಿ

ನೈನಿಟಾಲ್: ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು ಕೂದಲೆಳೆ ಅಂತರದಲ್ಲಿ ಬಸ್​ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಉತ್ತರಾಖಂಡ್​ನ ನೈನಿಟಾಲ್​ನಲ್ಲಿ ನಡೆದಿದೆ.

ಭೂಕುಸಿತ ಸಂಭವಿಸುವ ವೇಳೆ ಬಸ್​​​ವೊಂದು ಹತ್ತಿರದಲ್ಲೇ ತೆರಳುತ್ತಿತ್ತು. ಈ ವೇಳೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದುಬಿದ್ದಿದೆ. ಬಸ್​ನಲ್ಲಿದ್ದ ಪ್ರಯಾಣಿಕರು ತಕ್ಷಣವೇ ಇಳಿದು ಓಡಿಹೋಗಿದ್ದಾರೆ. ಬಸ್​ನ ಡ್ರೈವರ್ ತಕ್ಷಣವೇ ಬಸ್​ನ್ನ ಹಿಂದಕ್ಕೆ ಚಲಾಯಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ. ಬಸ್​ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.

 

Source: newsfirstlive.com Source link