RCB ತಂಡ ಸೇರಿದ ಶ್ರೀಲಂಕಾದ ವನಿಂದು ಹಸರಂಗ, ದುಷ್ಮಾಂತ ಚಮೀರಾ

RCB ತಂಡ ಸೇರಿದ ಶ್ರೀಲಂಕಾದ ವನಿಂದು ಹಸರಂಗ, ದುಷ್ಮಾಂತ ಚಮೀರಾ

14ನೇ ಆವೃತ್ತಿಯ ಉಳಿದ ಪಂದ್ಯಗಳಿಗೂ ಮುನ್ನ ಆರ್​​ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಶ್ರೀಲಂಕಾದ ಆಲ್​ರೌಂಡರ್​​ ವನಿಂದು ಹಸರಂಗ ಹಾಗೂ ದುಷ್ಮಾಂತ ಚಮೀರಾ ಆರ್​ಸಿಬಿ ತಂಡವನ್ನ ಸೇರಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್​ ಆ್ಯಡಮ್​ ಜಂಪಾ ಸ್ಥಾನದಲ್ಲಿ ಹಸರಂಗ ಹಾಗೂ ಡೇನಿಯಲ್​ ಸ್ಯಾಮ್ಸ್​ ಸ್ಥಾನದಲ್ಲಿ ದುಷ್ಮಂತ ಚಮೀರಾ ತಂಡವನ್ನ ಸೇರಿಕೊಂಡಿದ್ದಾರೆ. ಜೊತೆಗೆ ಉಳಿದ ಪಂದ್ಯಗಳಿಗೆ ಫಿನ್​ ಅಲೆನ್​ ಕೂಡ ಅಲಭ್ಯರಾಗಿದ್ದು, ಅವರ ಸ್ಥಾನದಲ್ಲಿ ಸಿಂಗಪೂರ್​​ ಕ್ರಿಕೆಟ್ ತಂಡದ ಆಲ್​ರೌಂಡರ್​​ ಟಿಮ್​ ಡೇವಿಡ್​ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮಾಹಿತಿಯನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ, ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ತಿಳಿಸಿದೆ.

 

 

Source: newsfirstlive.com Source link