ಕೋಚ್ ಸ್ಥಾನಕ್ಕೆ ಸೈಮನ್ ಕ್ಯಾಟಿಚ್‌ ಗುಡ್​ಬೈ- ಮೈಕ್​ ಹೆಸನ್ RCB ನೂತನ ಕೋಚ್

ಕೋಚ್ ಸ್ಥಾನಕ್ಕೆ ಸೈಮನ್ ಕ್ಯಾಟಿಚ್‌ ಗುಡ್​ಬೈ- ಮೈಕ್​ ಹೆಸನ್ RCB ನೂತನ ಕೋಚ್

14ನೇ ಆವೃತ್ತಿಯ ಐಪಿಎಲ್ ದ್ವೀತಿಯಾರ್ಧ ಆರಂಭಕ್ಕೂ ಮುನ್ನವೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಇಂದು 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರ್​ಸಿಬಿ ಹೆಡ್ ಕೋಚ್ ಸೈಮನ್ ಕ್ಯಾಟಿಚ್‌, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಸ್ಥಾನದಿಂದ ಸೈಮನ್ ಕ್ಯಾಟಿಚ್‌ ಕೆಳಗಿಳಿದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಕೋಚ್ ಹುದ್ದೆ ತೊರೆದಿರುವ ಸೈಮನ್ ಕ್ಯಾಟಿಚ್‌ ಸ್ಥಾನಕ್ಕೆ, ಆರ್​​ಸಿಬಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೈಕ್ ಹೆಸನ್, ನೂತನ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

2020ರಲ್ಲಿ ಕೋಚ್ ಆಗಿ ನೇಮಕಗೊಂಡಿದ್ದ ಕ್ಯಾಟಿಚ್‌, ಅದೇ ವರ್ಷ ಆರ್​ಸಿಬಿ ಪ್ಲೇ-ಆಫ್​ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಪ್ರಸಕ್ತ ವರ್ಷದಲ್ಲೂ ಕ್ಯಾಟಿಚ್‌ ಗರಡಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್​​ಸಿಬಿ, 7ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ.

Source: newsfirstlive.com Source link