ಜಿಮ್​ನಲ್ಲಿ ಸ್ಟಾಲಿನ್ ಫುಲ್ ವರ್ಕೌಟ್.. ವೈರಲ್ ಆಯ್ತು ತ.ನಾಡು CM ವೀಕೆಂಡ್ ವ್ಯಾಯಾಮದ ವಿಡಿಯೋ

ಜಿಮ್​ನಲ್ಲಿ ಸ್ಟಾಲಿನ್ ಫುಲ್ ವರ್ಕೌಟ್.. ವೈರಲ್ ಆಯ್ತು ತ.ನಾಡು CM ವೀಕೆಂಡ್ ವ್ಯಾಯಾಮದ ವಿಡಿಯೋ

ತಮಿಳುನಾಡು: ತಮಿಳುನಾಡು ದ್ರಾವಿಡ ಮುನ್ನೇತ್ರ ಕಳಗಂ ಮುಖ್ಯಸ್ಥ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ರಾಜಕೀಯ ಕಾರ್ಯ ವೈಖರಿಯಿಂದ ಜನರ ಗಮನಸೆಳೆದಿದ್ದಾರೆ. ಈ ಮಧ್ಯೆ ಅವರು ಜಿಮ್​ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ಟಾಲಿನ್ ಆರೋಗ್ಯದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸುತ್ತಾರೆ. ದೇಹದ ಆರೋಗ್ಯ ಸಮತೋಲನಕ್ಕಾಗಿ ಆಗಾಗ ವ್ಯಾಯಾಮ ಮಾಡುವುದು, ಸೈಕಲ್​ನ್ನೂ ತುಳಿಯುತ್ತಾರೆ. ಇದೀಗ ಜಿಮ್​ನಲ್ಲಿ ಬೆವರಿಳಿಸುತ್ತಾ ಸ್ಟಾಲಿನ್ ವ್ಯಾಯಾಮ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜನರ ಹುಬ್ಬೇರುವಂತೆ ಮಾಡಿದೆ.

 

ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೇರಿತು. ಆಗ ಪಕ್ಷದ ಮುಖ್ಯಸ್ಥರಾಗಿದ್ದ ಸ್ಟಾಲಿನ್ ನಿರೀಕ್ಷೆಯಂತೆ ಸಿಎಂ ಸ್ಥಾನಕ್ಕೇರಿದ್ದಾರೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಸ್ಟಾಲಿನ್ ತಮಿಳುನಾಡು ಜನರಿಗೆ ಭಾರೀ ಭರವಸೆಗಳನ್ನೇ ನೀಡಿದ್ದರು. ಇದೀಗ ಆ ಭರವಸೆಗಳನ್ನು ಈಡೇರಿಸುವತ್ತ ಸ್ಟಾಲಿನ್ ಗಮನ ಹರಿಸಿದ್ದಾರೆ.

Source: newsfirstlive.com Source link