ಗೋಕರ್ಣದಲ್ಲಿ ಸೆಲ್ಫಿ ತೆಗೆಯುವಾಗ ದುರಂತ; ನೀರಿನಲ್ಲಿ ಕೊಚ್ಚಿಹೋದ 35 ವರ್ಷದ ವ್ಯಕ್ತಿ

ಗೋಕರ್ಣದಲ್ಲಿ ಸೆಲ್ಫಿ ತೆಗೆಯುವಾಗ ದುರಂತ; ನೀರಿನಲ್ಲಿ ಕೊಚ್ಚಿಹೋದ 35 ವರ್ಷದ ವ್ಯಕ್ತಿ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಸೆಲ್ಫಿ ತೆಗೆಯುವ ವೇಳೆ ಕುಮಾರ ಶೇಕಪ್ಪ ಕಮಾಟಿ(35) ಸಮುದ್ರದ ನೀರಿನಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ. ನೀರಲ್ಲಿ ಕಣ್ಮರೆಯಾಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮಂಗಳೂರಲ್ಲಿ ರೈಲ್ವೇ ಹಳಿ ದಾಟುತ್ತಿದ್ದಾಗ ಆಕ್ಸಿಡೆಂಟ್; ಟ್ರೈನ್ ಡಿಕ್ಕಿಯಾಗಿ ಇಬ್ಬರು ದುರ್ಮರಣ

ಗೋಕರ್ಣದ ಓಂ ಕಡಲತೀರದಲ್ಲಿ ಘಟನೆ ನಡೆದಿದ್ದು ಹಾನಗಲ್‌ನಿಂದ ಪ್ರವಾಸಕ್ಕೆಂದು 12 ಮಂದಿ ಬಂದಿದ್ದರು. ಸಮುದ್ರದ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಕಲ್ಲಿನ ಮೇಲೆ ನಿಂತಿದ್ದ ವ್ಯಕ್ತಿಗೆ ಅಲೆ ಅಪ್ಪಳಿಸಿ ನೀರಿಗೆ ಬಿದ್ದಿದ್ದಾನೆ. ಕೂಡಲೇ ಲೈಫ್‌ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ. ನೀರಿಗಿಳಿದು ರಕ್ಷಣೆಗೆ ಮುಂದಾದರೂ ಸಮುದ್ರದಲ್ಲಿ ಪ್ರವಾಸಿಗ ಕಣ್ಮರೆಯಾಗಿದ್ದಾನೆ.

blank

ಅಲೆಗಳ ಅಬ್ಬರ ಹೆಚ್ಚಿದ್ದರೂ ನಾಪತ್ತೆಯಾದವನಿಗಾಗಿ ಲೈಫ್‌ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Source: newsfirstlive.com Source link