ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಡಾಲಿ ಧನಂಜಯ್ ರಕ್ಷಾ ಬಂಧನ ಆಚರಣೆ

ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಡಾಲಿ ಧನಂಜಯ್ ರಕ್ಷಾ ಬಂಧನ ಆಚರಣೆ

ಡಾಲಿ ಧನಂಜಯ್ ತಾನೆಂಥ ನಟ ಅನ್ನೋದನ್ನ ಈಗಾಗಲೇ ತನ್ನ ಸಿನಿಮಾಗಳ ವಿಭಿನ್ನ ಪಾತ್ರಗಳ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ. ಧನಂಜಯ್​ಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು ಟಗರು ಸಿನಿಮಾ ಮೂಲಕ ಡಾಲಿ ಧನಂಜಯ್​ ಅದ್ರು.

ಇನ್ನು ರಾಖಿ ಹಬ್ಬ ನಾಳೆಯಾಗಿದ್ರು ಕೂಡ ಡಾಲಿ ಧನಂಜಯ್​ಗೆ ಮಾತ್ರ ಅವ್ರ ಸಹೋದರಿ ಇಂದೇ ರಾಖಿ ಕಟ್ಟಿದ್ದಾರೆ.

blank

ಹೌದು.. ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕಯ್ ಪದ್ಮಶಾಲಿಯವರು ಮತ್ತು ನಟ ಡಾಲಿ ಧನಂಜಯ್​ಅವರು ಸಹೋದರ ಸಹೋದರಿಯಾಗಿದ್ದಾರೆ. ಇಂದು ಜೆ.ಪಿ ನಗರದ ಡಾಲಿ ನಿವಾಸದಲ್ಲಿ ಮಂಗಳಮುಖಿಯಾಗಿರುವ ಅಕ್ಕಯ್ ಪದ್ಮಶಾಲಿ ಡಾಲಿಯವರಿಗೆ ರಾಖಿಯನ್ನ ಕಟ್ಟಿ ಸಿಹಿ ತಿನ್ನಿಸಿದ್ದಾರೆ. ರಾಖಿ ಕಟ್ಟಿದ ಬಳಿಕ ಅಕ್ಕಯ್ ಪದ್ಮಶಾಲಿಯವರಿಗೆ ಧನಂಜಯ್​ ಸೀರೆಯನ್ನು ಉಡುಗೊರೆಯಾಗಿ ನೀಡಿ ಡಾಲಿ ರಾಖಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

blank

ಡಾಲಿ ಧನಂಜಯ್​ ಅಭಿನಯ ‘ರತ್ನನ್​ ಪ್ರಪಂಚ’ ಸಿನಿಮಾದ ಟ್ರೈಲರ್​ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಡಾಲಿಯವರ ರಾಖಿ ಸಹೋದರಿ ಅಕ್ಕಯ್ ಪದ್ಮಶಾಲಿಯವರು ಕೂಡ ‘ರತ್ನನ್​ ಪ್ರಪಂಚ’ ಚಿತ್ರದ ಟ್ರೈಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಡಾಲಿ ಧನಂಜಯ್​ ಸಾಲು ಸಾಲು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದು ಮುಂದಿನ ಸೆಪ್ಟೆಂಬರ್​ 24 ನೇ ತಾರೀಖ್​ ಡಾಲಿಯ ಬಡವ ರಾಸ್ಕಲ್​ ಸಿನಿಮಾ ರಿಲೀಸ್​ ಅಗ್ತಾಯಿದೆ.

Source: newsfirstlive.com Source link