ರಾಹುಲ್ ಗಾಂಧಿಯನ್ನ ‘ಬೀದಿ ಬಸವ’ನಿಗೆ ಹೋಲಿಸಿ ವಿವಾದಕ್ಕೊಳಗಾದ ಕೇಂದ್ರ ಸಚಿವ

ರಾಹುಲ್ ಗಾಂಧಿಯನ್ನ ‘ಬೀದಿ ಬಸವ’ನಿಗೆ ಹೋಲಿಸಿ ವಿವಾದಕ್ಕೊಳಗಾದ ಕೇಂದ್ರ ಸಚಿವ

ನವದೆಹಲಿ: ಕೇಂದ್ರ ಸಚಿವ ರಾವ್​ಸಾಹೇಬ್ ದಾನ್ವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನ ದೇವರಿಗೆ ಮೀಸಲಿಟ್ಟ ಬೀದಿ ಬಸವನಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಇದನ್ನೂ ಓದಿ: BJP, RSSಗೆ ಹೆದರುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ- ರಾಹುಲ್ ಗಾಂಧಿ

ಮಹಾರಾಷ್ಟ್ರ ಜಲ್ನಾ ಬಳಿ ಜನರನ್ನುದ್ದೇಶಿಸಿ ಮಾತನಾಡಿದ ರಾವ್ ಸಾಹೇಬ್.. ರಾಹುಲ್ ಗಾಂಧಿಯಿಂದ ಯಾರಿಗೂ ಯಾವ ಲಾಭವೂ ಇಲ್ಲ. ಸುಮ್ಮನೆ ಬೀದಿ ಬಸವನ ರೀತಿ ಅಲ್ಲಿ ಇಲ್ಲಿ ಸುತ್ತುತ್ತಿರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಹುಲ್ ಗಾಂಧಿ- ಸಿದ್ದರಾಮಯ್ಯ ಮತ್ತೆ ಎಡವಟ್ಟು ಹೇಳಿಕೆ

ಮಹಾರಾಷ್ಟ್ರದ ಕೆಲವೆಡೆ ಕೆಲವು ಎತ್ತುಗಳನ್ನು ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಈ ಎತ್ತುಗಳನ್ನು ಕೃಷಿಗಾಗಲಿ, ಸಾರಿಗೆಗಾಗಲಿ ಬಳಸುವುದಿಲ್ಲ. ಇಂಥ ಬಸವನ ರೀತಿ ರಾಹುಲ್ ಗಾಂಧಿ ಎಂದು ರಾವ್​ಸಾಹೇಬ್ ಹೇಳಿದ್ದಾರೆ. ರೈಲ್ವೇ ಖಾತೆ ರಾಜ್ಯ ಸಚಿವರಾಗಿರುವ ರಾವ್​ಸಾಹೇಬ್ ಮುಂದುವರೆದು ಇಂಥ ಬಸವಗಳು ಜಮೀನಿಗೆ ನುಗ್ಗಿ ಬೆಳೆಯನ್ನು ತಿಂದರೂ ಸಹ ರೈತರು ಆ ಪ್ರಾಣಿಯನ್ನು ಕ್ಷಮಿಸಿಬಿಡುತ್ತಾರೆ ಎಂದು ಹೇಳಿದ್ದಾರೆ.

Source: newsfirstlive.com Source link