ದೇಶವ್ಯಾಪಿ ಹೋರಾಟ ನಡೆಸಲು ರೈತರ ಸಭೆ

ಚೆನ್ನೈ: ರೈತರ ಹೋರಾಟ ದೇಶವ್ಯಾಪಿ ಮುಂದಿನ ನಡೆ ಕುರಿತು ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರ ಸಭೆ ಚೆನ್ನೈನಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಜಲತಜ್ಞ ಡಾ ರಾಜೇಂದ್ರಸಿಂಗ್, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದಾಗಬೇಕು. ಕನಿಷ್ಟ ಬೆಂಬಲ ಬೆಲೆ ಖಾತ್ರಿ ಶಾಸನವಾಗಬೇಕು ಎಂದು ಒತ್ತಾಯಿಸಿ ಮತ್ತು ಕೃಷಿ ಕಾಯ್ದೆ ಜಾರಿಯಿಂದ ರೈತರಿಗೆ ಆಗುವ ಮಾರಕ ಪರಿಣಾಮಗಳ ಬಗ್ಗೆ ದೇಶಾದ್ಯಂತ ರೈತರನ್ನು ಜಾಗೃತಿ ಮಾಡಲು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಕಿಸಾನ್ ಯಾತ್ರಾ ನಡೆಸಲಾಗುತ್ತಿದೆ. ಭಾರತವನ್ನು ಈಸ್ಟ್ ಇಂಡಿಯಾ ಕಂಪನಿ ರೀತಿ, ಸ್ವದೇಶಿ ಬಂಡವಾಳಶಾಹಿಗಳ ಕಂಪನಿಗಳ ರಾಷ್ಟ್ರವಾಗಿ ಮಾಡಲು ಬಿಡುವುದಿಲ್ಲ ಅದಕ್ಕಾಗಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರೈತರ ಹೋರಾಟಕ್ಕೆ ಪಾಪ್ ಗಾಯಕಿ ಬೆಂಬಲ- ಅನ್ನದಾತರನ್ನ ಭಯೋತ್ಪಾದಕರೆಂದ ಕಂಗನಾ

ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ಕೇಂದ್ರದ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಎಸ್‍ಪಿಗೆ ಶಾಸನಬದ್ಧ ಕಾತ್ರಿ ಕಾಯ್ದೆ ಜಾರಿ ಬರಬೇಕು ಎಂಎಸ್‍ಪಿ ಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳ ಖರೀದಿ ಶಿಕ್ಷಾರ್ಹ ಅಪರಾಧ ಎಂದು ಕಾನೂನು ಆಗಬೇಕು, ಕೃಷಿ ಉತ್ಪನ್ನಗಳ ಖರೀದಿ ಸಮಯದಲ್ಲಿ ಆಗುವ ಸಮಸ್ಯೆಗಳ ಪರಿಹಾರಕ್ಕೆ ರೈತರು ನ್ಯಾಯಾಲಯಕ್ಕೆ ಹೋಗುವ ಅಧಿಕಾರ ಸಿಗಬೇಕು ಎನ್ನುವ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು ಎಂದರು.

blank

ತಮಿಳುನಾಡಿನ ಜಂಟಿ ರೈತ ಸಂಘಟನೆಗಳ ಒಕ್ಕೂಟದ ಪರವಾಗಿ ಗುರುಸ್ವಾಮಿ, ರೈತರ ಹೋರಾಟವನ್ನು ಹತ್ತಿಕ್ಕಲು ಹಲವು ರೀತಿಯಲ್ಲಿ ಅಪಪ್ರಚಾರಗಳನ್ನು ಮಾಡಿತು ಖಲಿಸ್ತಾನಿಗಳು, ಪಾಕಿಸ್ತಾನಿಗಳು, ದೇಶದ್ರೋಹಿಗಳು, ದಳ್ಳಾಳಿಗಳು ಎಂದು ಕರೆಯುವ ಮೂಲಕ ಚಳುವಳಿ ಮಾಡುವ ರಸ್ತೆಗಳನ್ನು ಅಗೆದು ಹಳ್ಳ ಮಾಡಿದರು. ಇಷ್ಟೆಲ್ಲ ಕಿರುಕುಳ ನೀಡಿದರು ರೈತರ ಪ್ರಬಲ ಹೋರಾಟ ನಿಲ್ಲಲಿಲ್ಲ ಇದು ರೈತರ ಅಳಿವು-ಉಳಿವಿನ ಪ್ರಶ್ನೆ ಚುನಾವಣೆ ಮೊದಲು ರೈತರೇ ದೇಶದ ಬೆನ್ನೆಲುಬು ಎನ್ನುತ್ತಾರೆ ಅಧಿಕಾರಕ್ಕೆ ಬಂದ ನಂತರ ರೈತರು ನಮ್ಮ ಸೇವಕರು ಎಂದು ಕಾಣುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವವರು ರೈತರಲ್ಲ, ಮಧ್ಯವರ್ತಿಗಳು: ಶೋಭಾ ಕರಂದ್ಲಾಜೆ

Source: publictv.in Source link