ಅಫ್ಘಾನಿಸ್ತಾನದ ಸ್ಥಿತಿಗೆ ಮರುಗಿದ ಸೋನುಸೂದ್.. ಅವರಿಗೆ ನಮ್ಮ ನೆರವು ಬೇಕಿದೆ ಎಂದ ನಟ

ಅಫ್ಘಾನಿಸ್ತಾನದ ಸ್ಥಿತಿಗೆ ಮರುಗಿದ ಸೋನುಸೂದ್.. ಅವರಿಗೆ ನಮ್ಮ ನೆರವು ಬೇಕಿದೆ ಎಂದ ನಟ

ಮುಂಬೈ: ಅಫ್ಘಾನಿಸ್ತಾನದವರ ಸ್ಥಿತಿ ಕಂಡು ನಟ ಸೋನು ಸೂದ್ ಮರುಗಿದ್ದಾರೆ. ಅಪ್ಘಾನಿಸ್ತಾನದ ಜನರಿಗೆ ಹಾಗೂ ಅಲ್ಲಿ ನೆಲೆಸಿರೋ ಭಾರತೀಯರ ನೆರವಿಗೂ ನಾವೆಲ್ಲರೂ ಧಾವಿಸಬೇಕು ಅಂತ ಮನವಿ ಮಾಡಿದ್ದಾರೆ.

ಅಫ್ಘಾನಿಸ್ತಾನದ ಜನ ಈಗ ಅಕ್ಷರಶಃ ಬೀದಿಗೆ ಬಂದಿದ್ದಾರೆ. ಅಫ್ಘಾನಿಯರಿಗೆ ಕೆಲಸ ಮತ್ತು ಮನೆ ನೀಡುವ ಮೂಲಕ ಅವರ ನೆರವಿಗೆ ಧಾವಿಸಬೇಕು ಅಂತ ಟ್ವೀಟ್​​ನಲ್ಲಿ ಸೂದ್ ಪೋಸ್ಟ್ ಮಾಡಿದ್ದಾರೆ.

ಅಫ್ಘಾನ್​​ಲ್ಲಿರುವ ಭಾರತೀಯರ ಪರವಾಗಿ ಸಹ ಧ್ವನಿ ಎತ್ತಿರುವ ಸೋನುಸೂದ್.. ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಭಾರತೀಯರು ಸಹ ಈಗ ನಿರಾಶ್ರಿತರಾಗಿದ್ದಾರೆ. ಅವರು ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲ ಸಹಾಯ ಮಾಡಬೇಕು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರಿಗೆ ನಮ್ಮ ಅವಶ್ಯಕತೆಯಿದೆ ಅಂತ ಸೋನುಸೂದ್ ಮನವಿ ಮಾಡಿದ್ದಾರೆ.

Source: newsfirstlive.com Source link