ಚಿನ್ನ ಖರೀದಿ ನೆಪ-ಸರ ಕದ್ದು ಯುವಕ ಪರಾರಿ

ಚಿಕ್ಕಬಳ್ಳಾಪುರ: ಚಿನ್ನಾಭರಣ ಖರೀದಿ ನೆಪದಲ್ಲಿ ಚಿನ್ನದಂಗಡಿಗೆ ಬಂದ ಯುವಕನೊರ್ವ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನರೇಶ್ ಅವರ ಜ್ಯುವೆಲ್ಲರಿ ಶಾಪ್‍ನಲ್ಲಿ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡಿರುವ ಯುವಕ ನೋಡ ನೋಡುತ್ತಲೇ ಸೈಲಂಟಾಗಿ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿದ್ದಾನೆ. ಯುವಕ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ನಂತರ ಅನುಮಾನಗೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಯುವಕನ ಕಳ್ಳತನ ಕೃತ್ಯ ಬಯಲಾಗಿದೆ. ಇದನ್ನೂ ಓದಿ:  ಭಾರತಕ್ಕೆ ಬರುವ ಅಫ್ಘಾನ್ನರಿಗೆ ತಾತ್ಕಾಲಿಕ ವೀಸಾ ವ್ಯವಸ್ಥೆ

ಅಂಗಡಿಯಲ್ಲಿ ಚಿನ್ನದ ಖರೀದಿ ಮಾಡುತ್ತಿದ್ದ ಮಹಿಳೆಯರನ್ನ ವಿಚಾರಿಸಿದಾಗ ಯುವಕ ಅವರ ಸಂಬಂಧಿ ಅಲ್ಲ ಅಂತ ತಿಳಿದುಬಂದಿದೆ ಎನ್ನಲಾಗಿದೆ. ಈ ಸಂಬಂಧ ಯುವಕನಿಗಾಗಿ ಅಂಗಡಿ ಮಾಲೀಕ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Source: publictv.in Source link