ವಿದ್ಯಾರ್ಥಿನಿಯರ ದಾಖಲಾತಿಗಳನ್ನು ಸುಟ್ಟು.. ನೋವಿನ ಕಥೆ ಹೇಳಿಕೊಂಡ ಆಫ್ಘನ್ ಶಾಲಾ ಸಂಸ್ಥಾಪಕಿ

ವಿದ್ಯಾರ್ಥಿನಿಯರ ದಾಖಲಾತಿಗಳನ್ನು ಸುಟ್ಟು.. ನೋವಿನ ಕಥೆ ಹೇಳಿಕೊಂಡ ಆಫ್ಘನ್ ಶಾಲಾ ಸಂಸ್ಥಾಪಕಿ

ಅಫ್ಘಾನಿಸ್ತಾನದಲ್ಲಿ ಇದೀಗ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದೆ. ಈ ತಾಲಿಬಾನಿಗಳಿಂದ ಹೆಚ್ಚು ಅಪಾಯವಿರುವುದು ಮಹಿಳೆಯರಿಗೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ತಾಲಿಬಾನಿಗಳ ಪ್ರಕಾರ ಮಹಿಳೆಯರು ವಿದ್ಯಾಭ್ಯಾಸ ಮಾಡುವಂತಿಲ್ಲ.. ಮೇಕಪ್ ಮಾಡಿಕೊಳ್ಳುವಂತಿಲ್ಲ ಮತ್ತು ಸಾರ್ವಜನಿಕ ಬದುಕಿನಲ್ಲಿ ಮುಕ್ತವಾಗಿ ತೊಡಗಿಕೊಳ್ಳುವಂತಿಲ್ಲ. ಇದೇ ಕಾರಣಕ್ಕೆ ತಾಲಿಬಾನಿಗಳು ಮಹಿಳೆಯರ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆಯೂ ವರದಿಗಳಾಗುತ್ತಿವೆ.

ಈ ಮಧ್ಯೆ ಅಫ್ಘಾನಿಸ್ತಾನದ ಹೆಣ್ಣುಮಕ್ಕಳ ಬೋರ್ಡಿಂಗ್ ಸ್ಕೂಲ್​ನ ಸಂಸ್ಥಾಪಕಿಯೋರ್ವಳು ತನ್ನ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯರ ದಾಖಲಾತಿಗಳನ್ನ ಸುಟ್ಟುಹಾಕಿದ್ದಾರೆ. ಈ ಕುರಿತು ಸರಣಿ ಟ್ವೀಟ್​ಗಳನ್ನ ಮಾಡಿರುವ ಸಂಸ್ಥಾಪಕಿ ಶಬಾನ ಬಸಿಜ್ ರಸಿಖ್ ನಾನು ಈ ದಾಖಲಾತಿಗಳನ್ನು ಸುಟ್ಟುಹಾಕುತ್ತಿರುವುದು ಅವರ ಭವಿಷ್ಯವನ್ನು ಅಳಿಸಿ ಹಾಕಲು ಅಲ್ಲ.. ಬದಲಿಗೆ ಅವರು ಮತ್ತು ಅವರ ಕುಟುಂಬಗಳನ್ನು ರಕ್ಷಿಸಲು ಎಂದು ಬರೆದುಕೊಂಡಿದ್ದಾರೆ.

2002 ಮಾರ್ಚ್​ನಲ್ಲಿ ಆಫ್ಘನ್​ ತಾಲಿಬಾನಿಗಳಿಂದ ಮುಕ್ತವಾಗಿತ್ತು. ಅದಕ್ಕೂ ಮೊದಲು ತಾಲಿಬಾನಿಗಳು ಸಾವಿರಾರು ವಿದ್ಯಾರ್ಥಿನಿಯರ ದಾಖಲಾತಿಗಳನ್ನು ಅಳಿಸಿಹಾಕಿದ್ದರು. ಅವರಲ್ಲಿ ನಾನೂ ಕೂಡ ಒಬ್ಬಳು.

blank

ನನ್ನ ವಿದ್ಯಾರ್ಥಿಗಳು, ಸಹಪಾಠಿಗಳು ಈಗ ಸೇಫ್ ಆಗಿ ಇದ್ದೇವೆ. ನನ್ನ ಕೃತಜ್ಞತೆಯನ್ನು ಸಲ್ಲಿಸುವ ಸಮಯ ಹತ್ತಿರವಾಗುತ್ತದೆ, ಆದರೆ ಈಗ ಬಹುತೇಕ ಮಂದಿ ಸೇಫ್ ಆಗಿಲ್ಲ. ಅವರಿಗಾಗಿ ನಾನು ನೊಂದಿದ್ದೇನೆ. ನನ್ನ ಮಕ್ಕಳ ಕುಟುಂಬಗಳ ರಕ್ಷಣೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆಂದು ಅವರ ಪೋಷಕರಿಗೆ ಗೊತ್ತಾಗಲೆಂದು ನಾನಿದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಶಬಾನ ಹೇಳಿಕೊಂಡಿದ್ದಾರೆ.

Source: newsfirstlive.com Source link