ತಾಯ್ನಾಡಿಗೆ ಮರಳುವ ಭಾರತೀಯರಲ್ಲಿ ಇಬ್ಬರು ಕನ್ನಡಿಗರಿದ್ದಾರೆ-ನೋಡಲ್​ ಅಧಿಕಾರಿ

ತಾಯ್ನಾಡಿಗೆ ಮರಳುವ ಭಾರತೀಯರಲ್ಲಿ ಇಬ್ಬರು ಕನ್ನಡಿಗರಿದ್ದಾರೆ-ನೋಡಲ್​ ಅಧಿಕಾರಿ

ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆಯಿಂದ ಅಲ್ಲಿರುವ ಭಾರತೀಯರ ರಕ್ಷಣೆ ದೊಡ್ಡ ಸವಾಲಾ​​ಗಿ ಪರಿಣಮಿಸಿದೆ. ಈಗಾಗಲೇ ಅಮೆರಿಕ ಸೇನೆಯ ಸಹಕಾರದಿಂದ 2 ಬ್ಯಾಚ್​​ನಲ್ಲಿ ಭಾರತೀಯರನ್ನ ಸುರಕ್ಷಿತವಾಗಿ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. ಜೊತೆಗೆ ಇನ್ನುಳಿದವರನ್ನ ವಾಪಸ್ ಕರೆದುಕೊಂಡು ಬರುವ ಎಲ್ಲಾ ತಯಾರಿಗಳು ನಡೆಯುತ್ತಿವೆ.

ಈ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್​ ಕೂಡ ಅಫ್ಘಾನಿಸ್ತಾನದಲ್ಲಿ ಇನ್ನು 1650 ಭಾರತೀಯರು ಅಫ್ಘಾನ್​ನಲ್ಲಿ ಸಿಲುಕಿರುವ ಕುರಿತು ​ ಮಾಹಿತಿ ನೀಡಿದ್ದರು.

ಅದರ ಬೆನ್ನಲ್ಲೇ ಇಂದು ಬಹುತೇಕ ಅಫ್ಘಾನ್ ನಲ್ಲಿರುವ ಭಾರತೀಯರು ಏರ್​ಲಿಫ್ಟ್ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಸಂಬಂಧಿಸಿ ಒಟ್ಟು 250 ಭಾರತೀಯರನ್ನ ಪಟ್ಟಿ ಮಾಡಲಾಗಿದ್ದು, ಇಂದು 2 ವಿಮಾನದಲ್ಲಿ ಭಾರತೀಯರನ್ನ ಏರ್​ಲಿಫ್ಟ್ ಮಾಡುವುದಾಗಿ ನ್ಯೂಸ್​ಫಸ್ಟ್​ಗೆ ಭಾರತೀಯ ವಿದೇಶಾಂಗ ಇಲಾಖೆಯ ಅಫ್ಘಾನ್ ಸೆಲ್ ನಿಂದ ಮಾಹಿತಿ ದೊರಕಿದೆ..

250ಮಂದಿಯಲ್ಲಿ ಇಬ್ಬರು ಕನ್ನಡಿಗರು

ಹೌದು ಇಂದು ಭಾರತಕ್ಕೆ ಆಗಮಿಸುವ 250 ಭಾರತೀಯರಲ್ಲಿ, ಇಬ್ಬರು ಕನ್ನಡಿಗರಿರುವುದಾಗಿ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ಮೂಲದ ರಾಬರ್ಟ್, ಮಂಗಳೂರು ಮೂಲದ ಜೆರೋಮ್ ಎಂಬುವವರು ಸದ್ಯ ಏರ್ಪೋರ್ಟ್ ತಲುಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

blank

ಈ ಇಬ್ಬರು ಕರ್ನಾಟಕ ಹೆಲ್ಪ್ ಡೆಸ್ಕ್ ಗೆ ಮಾಹಿತಿ ನೀಡಿದ್ದಾಗಿ ಹೇಳಲಾಗುತ್ತಿದ್ದು, ಇವರ ಮಾಹಿತಿ ಅಧರಿಸಿ ವಿದೇಶಾಂಗ ಇಲಾಖೆ ಜೊತೆ ನಿರಂತರ ಸಂಪರ್ಕ ಸಾಧಿಸಿದ ಕರ್ನಾಟಕ ಹೆಲ್ಪ್ ಡೆಸ್ಕ್ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಿದೆ. ನಿನ್ನೆಯೇ ಹೊರಡಬೇಕಿದ್ದ ಈ ವಿಮಾನಗಳು, ನಿನ್ನೆ ತಾಲಿಬಾನ್ ಫೈರಿಂಗ್ ಶುರು ಮಾಡಿದ್ದರಿಂದ ಏರ್​ಲಿಫ್ಟ್​ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಂದು ಭದ್ರತಾ ಪರಿಶೀಲನೆ ಬಳಿಕ ಮಾಡಿದ್ದರಿಂದ ಏರ್​ಲಿಫ್ಟ್ ಮಾಡಲು ಸಜ್ಜಾಗಿದ್ದು, ಅಮೇರಿಕಾ ಸೇನೆ ಹಸಿರು ನಿಶಾನೆ ನೀಡಿದ್ರೆ ಯಾವುದೇ ಕ್ಷಣದಲ್ಲಿ ಬೇಕಾದ್ರು ಏರ್​ಲಿಫ್ಟ್ ಶುರುವಾಗಲಿದೆ..

ಈ ನಡುವೆ ಈ ಇಬ್ಬರು ಕನ್ನಡಿಗರೂ ಮಾತ್ರವಲ್ಲದೆ, ಇನ್ನೂ ಹಲವು ಕನ್ನಡಿಗರು ಅಫ್ಘಾನ್​ನಲ್ಲಿದ್ದಾರೆ ಎನ್ನಲಾಗ್ತಿದ್ದು, ಈ ಕುರಿತು ಮಾತನಾಡಿದ ರಾಜ್ಯ ಹೆಲ್ಪ್​ ಡೆಸ್ಕ್ ನೋಡೆಲ್ ಅಧಿಕಾರಿ ಉಮೇಶ್ ಕುಮಾರ್…

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜೊತೆಗೆ ನಾವು ನಿರಂತರ ಸಂಪರ್ಕದಲ್ಲಿದ್ದು, ಅಫ್ಘಾನಿಸ್ತಾನದಲ್ಲಿ ಎಷ್ಟು ಜನ ಕನ್ನಡಿಗರಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈವರೆಗೆ ನಮಗೆ ಇಬ್ಬರು ಮಾತ್ರ ಸಂಪರ್ಕ ಮಾಡಿದ್ದಾರೆ. ಅಲ್ಲಿ ಇನ್ನು ಸುಮಾರು ಜನ ಕನ್ನಡಿಗರು ಇರಬಹುದು, ಅದರಲ್ಲಿ ಕೆಲವರು ಅಲ್ಲಿಯೇ ಬಿಜಿನೆಸ್​ ಮಾಡ್ಕೊಂಡು ಸೆಟ್ಲ್​ ಆಗಿರಬಹುದು. ಇನ್ನೂ ಕೆಲವರು, ಭಾರತಕ್ಕೆ ಬಾರದೇ, ಯುಕೆ, ಇಟಲಿ ಸೇರಿ ಹಲವು ರಾಷ್ಟ್ರಗಳಿಗೆ ಹೋಗುವ ಇಚ್ಛೆ ಇದ್ದಿರಬಹುದು..ಹೀಗಾಗಿ ಕೇವಲ ಇಬ್ಬರಿಂದಲೇ ಮಾತ್ರ ಅರ್ಜಿ ಬಂದಿದೆ.ಇನ್ನು ಅಲ್ಲಿಯ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಿಲ್ಲ ಆದರೆ ಕನ್ನಡಿಗರನ್ನು ಕರೆ ತರೋದು ಮಾತ್ರ ನಮ್ಮ ಕೆಲಸ ಎಂದಿದ್ದಾರೆ..

ಅಫ್ಘಾನ್ ವಿದ್ಯಾರ್ಥಿಗಳಿಂದ ಕರ್ನಾಟಕ ಹೆಲ್ಪ್ ಡೆಸ್ಕ್ ಗೆ ಮನವಿ.

ಇನ್ನು ರಾಜ್ಯದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ಅಫ್ಘಾನ್ ವಿದ್ಯಾರ್ಥಿಗಳು “ನಮ್ಮ ಪೋಷಕರನ್ನು ಭಾರತಕ್ಕೆ ಕರೆ ತರುವಂತೆ” ಮನವಿ ಮಾಡಿದ್ದಾರೆ.. ಭಾರತಕ್ಕೆ ಆಗಮಿಸುವ ಅಫ್ಘಾನ್ ಪ್ರಜೆಗಳಿಗೆ ಆರು ತಿಂಗಳ ತಾತ್ಕಾಲಿಕ ವೀಸಾ ನೀಡುವಂತೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ತಾತ್ಕಾಲಿಕ ವೀಸಾ ಪಡೆಯಲು, ವೆಬ್ ಸೈಟ್ ಮೂಲಕ ಅಪ್ಲೈ ಮಾಡಲು ಸಲಹೆ ಮಾಡುವಂತೆ ಸೂಚಿಸಲಾಗಿದೆ..ಹೆಲ್ಪ್​ಡೆಸ್ಕ್​ಗೆ ಬಂದ ಕರೆ ಆಧರಿಸಿ ಪೋಷಕರ ಲಿಸ್ಟ್​ ಕೂಡ ರೆಡಿ ಮಾಡಲಾಗುತ್ತಿದೆ ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

blank

Source: newsfirstlive.com Source link