ಸೋಷಿಯಲ್ ಮೀಡಿಯಾದಲ್ಲೀಗ ಶಿಲ್ಪಾಶೆಟ್ಟಿಯದ್ದೇ ಸದ್ದು.. ಸಖ್ಖತ್ ಫೋಟೋ ಹಂಚಿಕೊಂಡ ನಟಿ

ಸೋಷಿಯಲ್ ಮೀಡಿಯಾದಲ್ಲೀಗ ಶಿಲ್ಪಾಶೆಟ್ಟಿಯದ್ದೇ ಸದ್ದು.. ಸಖ್ಖತ್ ಫೋಟೋ ಹಂಚಿಕೊಂಡ ನಟಿ

ಮುಂಬೈ: ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾನನ್ನ ಮುಂಬೈ ಪೊಲೀಸರು ಬಂಧಿಸಿದ ನಂತರ ಶಿಲ್ಲಾಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದು ವಿರಳವಾಗಿತ್ತು.

ಇದೀಗ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿರುವ ಶಿಲ್ಪಾಶೆಟ್ಟಿ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವರ ಫೋಟೋಗಳಿಗೆ ಅಭಿಮಾನಿಗಳಿಂದ ಕಮೆಂಟ್​​ಗಳ ಸುರಿಮಳೆಯೇ ಸುರಿದಿದೆ.

ರಾಜ್ ಕುಂದ್ರಾ ಬಂಧನದ ನಂತರ ಸಿನಿಮಾ ಶೂಟಿಂಗ್​ನಲ್ಲೂ ಸಹ ಕೆಲವು ದಿನಗಳ ಕಾಲ ಶಿಲ್ಪಾಶೆಟ್ಟಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಶೂಟಿಂಗ್​ ಸ್ಪಾಟ್​ಗೆ ಕಾಲಿಡುವ ಮೂಲಕ ಕೂಡ ಶಿಲ್ಪಾ ಶೆಟ್ಟಿ ಸುದ್ದಿಯಾಗಿದ್ದರು. ಇದೀಗ ಹೊಸ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಶಿಲ್ಪಾಶೆಟ್ಟಿ ಸೋಷಿಯಲ್ ಮೀಡಿಯಾಗಳಿಗೂ ಕಂಬ್ಯಾಕ್ ಮಾಡಿದಂತಾಗಿದೆ.

Source: newsfirstlive.com Source link