ವಿಶ್ವ ಹಿರಿಯ ನಾಗರಿಕರ ದಿನದ ವಿಶೇಷ: ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ

ವಿಶ್ವ ಹಿರಿಯ ನಾಗರಿಕರ ದಿನದ ವಿಶೇಷ: ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ

ಇಂದು ವಿಶ್ವ ಹಿರಿಯ ನಾಗರಿಕರ ದಿನ ಹಿನ್ನೆಲೆ ಹಿರಿಯ ನಾಗರಿಕರಿಗೆ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನ ಆಯೋಜನೆ ಮಾಡಲಾಗಿತ್ತು. ಕೋವಿಡ್ ಬಂದ ನಂತರ ಹಿರಿಯ ನಾಗರಿಕರು ಮನೆಗಳಿಂದ ಹೊರಬರಲು, ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದಕ್ಕೂ ಭಯ ಪಡುತ್ತಿದ್ದಾರೆ, ಜೊತೆಗೆ ಆರೋಗ್ಯ ತಪಾಸಣೆ ಶಿಬಿರಗಳು ಕೂಡಾ ನಗರದಲ್ಲಿ ನಡೆಯುತ್ತಿಲ್ಲ.

blank

ಈ ಹಿನ್ನೆಲೆ ಬಸವನಗುಡಿಯ ಎನ್. ಆರ್ ಕೋಲೋನಿಯಲ್ಲಿ ಇಂದು ವಿಶ್ವ ಹಿರಿಯ ನಾಗರಿಕರ ದಿನ ಹಿನ್ನೆಲೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನ ಆಯೋಜನೆ ಮಾಡಲಾಗಿತ್ತು. ಡಾ. ಶಂಕರ ಗುಹಾ ದ್ವಾರಾಕನಾಥ್ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮುಖ್ಯವಾಗಿ ಕಣ್ಣಿನ ಸಮಸ್ಯೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಯಿತು. ಸುಮಾರು 250 ಹಿರಿಯನಾಗರಿಕರಿಗೆ ಕ್ಯಾಟ್ರಾಕ್ಟ್ ಸರ್ಜರಿ ಮಾಡಿಸಲು ಕೂಡಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

blank

ಇನ್ನು ಈ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಹಿರಿಯ ನಾಗರಿಕರ ಜೊತೆಗೆ ನೂರಾರು ಇತರ ನಾಗರಿಕರು ಆಗಮಿಸಿ ವೈದ್ಯಕೀಯ ಸೌಲಭ್ಯ ಪಡೆದರು. ಈ ಶಿಬಿರಕ್ಕೆ ಕಾಂಗ್ರೇಸ್ನ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ, ಬಿ. ಕೆ ಹರಿಪ್ರಸಾದ್ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಡಾ. ಶಂಕರ ಗುಹಾ ದ್ವಾರಕನಾಥ್ ಈ ಶಿಬಿರ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿವಾರಕ್ಕೆ ಒಮ್ಮೆ ಆರೋಗ್ಯ ತಪಾಸಣಾ ಶಿಬಿರವನ್ನ ಆಯೋಜನೆ ಮಾಡುತ್ತೇನೆ, ವಾರಕ್ಕೆ ಒಮ್ಮೆ ತಜ್ಞ ವೈದ್ಯರನ್ನ ಕರೆಸಿ ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೈದ್ಯರಿಂದ ಸೂಕ್ತ ಚಿಕಿತ್ಸೆ, ಸಲಹೆ ಸೂಚನೆಗಳನ್ನ ಕೊಡಿಸಲಾಗುತ್ತೆ ಅಂತ ಹೇಳಿದ್ರು..

Source: newsfirstlive.com Source link