ಚಳಿಗಾಲದ ಅಧಿವೇಶನವನ್ನು ಸುವಣರ್ಸೌಧದಲ್ಲೇ ನಡೆಸಲು ಕ್ರಮ ಕೈಗೊಳ್ತೇನೆ: ಸಿಎಂ ಬೊಮ್ಮಾಯಿ

ಚಳಿಗಾಲದ ಅಧಿವೇಶನವನ್ನು ಸುವಣರ್ಸೌಧದಲ್ಲೇ ನಡೆಸಲು ಕ್ರಮ ಕೈಗೊಳ್ತೇನೆ: ಸಿಎಂ ಬೊಮ್ಮಾಯಿ

ಬೆಳಗಾವಿ: ನಗರದ ಸುವರ್ಣಸೌಧದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಯ ಕೋವಿಡ್​ ಮತ್ತು ಪ್ರವಾಹ ಪರಿಸ್ಥಿತಿಯ ಕುರಿತು ಪರಿಶೀಲನೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರ ಕೋವಿಡ್​ 3ನೇ ಅಲೆ ಮುಂಜಾಗ್ರತಾ ಕ್ರಮವಾಗಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅದರ ಫಲವಾಗಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್​ ಕಡಿಮೆಯಾಗಿದೆ ಎಂದರು..

ಮುಂದುವರೆದು ಮಾತನಾಡಿದ ಅವರು ಜಿಲ್ಲೆಯಲ್ಲಿ ಆಕ್ಸಿಜನ್​ ಕೊರತೆಯಾಗದಂತೆ ಮುಂದಿನ 20 ದಿನಗಳಲ್ಲಿ ಜಿಲ್ಲೆಯ 10ಕಡೆ ಆಕ್ಸಿಜನ್ ‌ಉತ್ಪಾದನಾ ಘಟಕ ಸ್ಥಾಪನೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.. ಚಿಕ್ಕೋಡಿಯಲ್ಲಿ RTPCR ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿದ್ದೇನೆ, ಮತ್ತು ಲಸಿಕೆ ಅಭಾವ ಉಂಟಾಗದಂತೆ ಕೇಂದ್ರಕ್ಕೆ ಒಂದು ಕೋಟಿ‌ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಗಡಿ ಗ್ರಾಮಗಳಿಗೆ ಆದ್ಯತೆ ಮೇರೆಗೆ ಲಸಿಕೆಗೆ ನೀಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ..

ಇದನ್ನು ಓದಿ:  ಸಿ.ಟಿ. ರವಿ ಮನೆ ಮುತ್ತಿಗೆಗೆ ಕಾಂಗ್ರೆಸ್ ಯತ್ನ.. ಪ್ರತಿರೋಧ ಒಡ್ಡಲು ಬಿಜೆಪಿ ಕಾರ್ಯಕರ್ತರು ಜಮಾವಣೆ

ಕಳೆದ ಬಾರಿ ಪ್ರವಾಹದಿಂದ ಮನೆಗಳು ಹಾನಿ ಆದಂತಹವರಿಗೂ ಸೂಕ್ತ ಪರಿಹಾರ ಒದಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಡಿಸೆಂಬರ್ ನಲ್ಲಿ ಸುವರ್ಣ ಸೌಧದಲ್ಲೇ ಚಳಿಗಾಲಸ ಅಧಿವೇಶನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದು, ಮಹತ್ವದ ಸರಕಾರಿ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು..

Source: newsfirstlive.com Source link