ಸುಶಾಂತ್​ ಸಿಂಗ್ ಅಭಿಮಾನಿಗಳಿಗೆ ಶಾಕ್..​​ ಫೇಸ್​ಬುಕ್​ ಪ್ರೊಫೈಲ್ ಫೋಟೋ ಆಯ್ತು ಚೇಂಜ್

ಸುಶಾಂತ್​ ಸಿಂಗ್ ಅಭಿಮಾನಿಗಳಿಗೆ ಶಾಕ್..​​ ಫೇಸ್​ಬುಕ್​ ಪ್ರೊಫೈಲ್ ಫೋಟೋ ಆಯ್ತು ಚೇಂಜ್

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು, ಪ್ರತಿ ದಿನ ಅವ್ರನ್ನ ನೆನಪಿಸಿಕೊಳ್ತಾರೆ. ಮಿಸ್​ ಮಾಡ್ಕೊಳ್ತಾರೆ. ಆದ್ರೆ, ಇವತ್ತು, ಅದೇ ಅಭಿಮಾನಿಗಳು ಸ್ವಲ್ಪ ಶಾಕ್​ ಆಗಿದ್ದಾರೆ. ಯಾಕೆ ಗೊತ್ತಾ? ತಲೆಕೆಡಿಸಿಕೊಳ್ಳುವಂಥದ್ದು ಆಗಿದೆ. ಅದೇನಂದ್ರೆ, ಸುಶಾಂತ್​ರ ಫೇಸ್​ಬುಕ್​ರ ಪ್ರೊಫೈಲ್​ ಪಿಕ್​ ಚೇಂಜ್​ ಆಗಿದೆ.

ಹೌದೂ, ಸುಶಾಂತ್ ಸಿಂಗ್​ರ ಅಧಿಕೃತ ಫೇಸ್​ಬುಕ್ ಖಾತೆಯ ಪ್ರೊಫೈಲ್ ಪಿಕ್ಚರ್​ ಬದಲಾಯಿಸಲಾಗಿದ್ದು, ಅಭಿಮಾನಿಗಳು ಗಾಬರಿ ಬಿದ್ದಿದ್ದಾರೆ. ಸುಶಾಂತ್ ಸಿಂಗ್ ಇಹಲೋಕ ತ್ಯಜಿಸಿ ವರ್ಷ ಕಳೆದ ಮೇಲೆ ಅವರ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಬದಲಾವಣೆಗಳು ಅದ್ಹೇಗೆ ನಡೆದಿದೆ? ಅಂತ ಅಭಿಮಾನಿಗಳು ನಾನಾವಿಧದ ಪ್ರಶ್ನೆಗಳನ್ನ ಕೇಳ್ತಿದ್ದಾರೆ. ಅಲ್ಲದೇ, ಅವರ ಪ್ರೊಫೈಲ್ ಪಿಕ್ಚರ್​ ಬದಲಿಸಿದ ನಂತರ ಗೊಂದಲಗೊಂಡ ಅಭಿಮಾನಿಗಳು ಅವರ ಹಳೆಯ ಪೋಸ್ಟ್​ಗಳಿಗೂ ಹೋಗಿ ಕಾಮೆಂಟ್ ಹಾಕುತ್ತಿದ್ದು, ಈ ಖಾತೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದೀರಿ? ಅಂತ ಎಂದು ಪ್ರಶ್ನೆ ಕೇಳ್ತಿದ್ದಾರೆ. ಇದೀಗ, ಆ ಬದಲಾವಣೆಗಳನ್ನ ಯಾರ್​ ಮಾಡಿದ್ದಾರೆ, ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

blank

Source: newsfirstlive.com Source link