ಉಕ್ರೇನ್​ ಶೂಟ್​ ಮುಗಿಸಿ ಭಾರತಕ್ಕೆ ಬಂದ ರಾಜಮೌಳಿ ಆಂಡ್​ ಟೀಮ್​

ಉಕ್ರೇನ್​ ಶೂಟ್​ ಮುಗಿಸಿ ಭಾರತಕ್ಕೆ ಬಂದ ರಾಜಮೌಳಿ ಆಂಡ್​ ಟೀಮ್​

ಎಸ್.ಎಸ್.ರಾಜಮೌಳಿ ಸಾರಥ್ಯದ ಥ್ರಿಬಲ್ ಆರ್ ತಂಡ ನಡೆ ನಿಗೂಢ.. ಆದ್ರೆ ಅವರಿಂದ ಬರೋ ಕಂಟೆಂಟ್ ಕ್ಯೂರಿಯಾಸಿಟಿ ಹುಟ್ಟಿಸೋ ಕಾರ್ಮೋಡ.. ಈಗ ರೌದ್ರ ರಣ ರುಧಿರ ಸಿನಿಮಾ ತಂಡದಿಂದ ಒಂದು ಇಂಟ್ರಸ್ಟಿಂಗ್ ಸಮಾಚಾರ ಹೊರ ಬಂದಿದೆ..
ಎಸ್​​.ಎಸ್​.ರಾಜಮೌಳಿ ಅವರ ಸಿನಿಮಾಗಳ ಶೂಟಿಂಗೇ ಒಂದು ಮ್ಯಾರಥಾನ್ ಓಟ ಇದ್ದಂಗೆ.. ಎರಡ್ಮೂರು ವರ್ಷ ಶೂಟಿಂಗ್ ಸೆಟ್​​ನಲ್ಲೇ ಮೌಳಿ ಗ್ಯಾಂಗ್ ಟೈಮ್ ಪಾಸ್ ಮಾಡಿ ಬಿಡ್ತಾರೆ..

blank

2018ರಲ್ಲಿ ಶುರುವಾದ ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್ ಇನ್ನೂ ಕೂಡ ನಡೀತಲೇ ಇದೆ.. ಈಗಾಗಲೇ ಅಕ್ಟೋಬರ್ 13ನೇ ತಾರೀಕು ವಿಶ್ವಾದ್ಯಂತ ಥ್ರಿಬಲ್ ಆರ್ ಸಿನಿಮಾವನ್ನ ತೆರೆಗೆ ಒಪ್ಪಿಸಬೇಕು ಅನ್ನೋ ಗುರಿಯಿಂದ ರಾಜಮೌಳಿ ಟೀಮ್ ಬ್ಯುಸಿಯಾಗಿದೆ..

ಕೆಲ ದಿನಗಳ ಹಿಂದೆ ಉಕ್ರೇನ್ ದೇಶಕ್ಕೆ ಥ್ರಿಬಲ್ ಆರ್ ತಂಡ ಹೋಗಿದೆ ಅನ್ನೋ ಸುದ್ದಿ ಬಂದಿತ್ತು.. ಥ್ರಿಬಲ್ ಆರ್ ಸಿನಿಮಾದ ದೋಸ್ತಿ ಹಾಡನ್ನ ಕಾರಿನಲ್ಲಿ ಹಾಕೋಂದು ಜೂನಿಯರ್ ಎನ್​.ಟಿ.ಆರ್ ಮತ್ತು ರಾಮ್ ಚರಣ್ ಉಕ್ರೇನ್ ದೇಶ ಸುತ್ತಿದ್ರು.. ಈಗ ಉಕ್ರೇನ್ ದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ವಾಪಸ್ ಬಂದಿದೆ ಥ್ರಿಬಲ್ ಆರ್ ತಂಡ..

blank

ಉಕ್ರೇನ್ ದೇಶದಲ್ಲಿ ಸಾಂಗ್ ಶೂಟ್ ಮುಗಿಸಿದ RRR
ಯಾವಾಗ RRR ಶೂಟಿಂಗ್ ಕಂಪ್ಲೀಟ್ ಆಗುತ್ತೆ..?

ಉಕ್ರೇನ್ ದೇಶಕ್ಕೆ ಸಾಂಗ್ ಶೂಟಿಂಗ್​​​ಗೆಂದು ಹೋಗಿತ್ತು ಥ್ರಿಬಲ್ ಆರ್ ಬಳಗ.. ಕಳೆದ ಗುರುವಾರ ಹೈದ್ರಾಬಾದ್​​​ಗೆ ವಾಪಸ್ ಬಂದಿದೆ ಥ್ರಿಬಲ್ ಆರ್ ಟೀಮ್.. ಇನ್ನು ಎಷ್ಟಿದೆ ಶೂಟಿಂಗು ? ಇನ್ನೂ ಯಾಕೆ ಶೂಟಿಂಗ್​ನಲ್ಲಿ ಜಕ್ಕಣ್ಣ ಅನ್ನೋದನ್ನ ಹೇಳ್ತಿವಿ ಕೇಳಿ.. ಉಕ್ರೇನ್ ದೇಶದಲ್ಲಿ ಸಾಂಗ್ ಶೂಟಿಂಗ್ ಮುಗಿಸಿ ಕೊಂಡು ಬಂದಿದೆ ಸಿನಿಮಾ ತಂಡ.. ಇನ್ನು ಪ್ಯಾಚ್ ವರ್ಕ್​​ ಬಾಕಿ ಉಳಿಸಿಕೊಂಡಿದೆ. ಮುಂಬರುವ ಸೆಪ್ಟೆಂಬರ್ 20ರ ತನಕ ಶೂಟಿಂಗ್ ಮಾಡೋ ಪ್ಲಾನ್​​ನಲ್ಲಿ ಮೌಳಿ ಗ್ಯಾಂಗ್ ಇದೆ.. ಸೆಪ್ಟೆಂಬರ್ 20ನೇ ತಾರೀಕು ರೌದ್ರ ರಣ ರುಧಿರ ಚಿತ್ರದ ಶೂಟಿಂಗ್ ಕುಂಬಳ ಕಾಯಿ ಪ್ರಾಪ್ತಿಯಾಗಲಿದೆ.. ರಾಜಮೌಳಿ ಸಿನಿಮಾ ಇನ್ನೂ ಕೂಡ ಶೂಟಿಂಗ್ ಅಡ್ಡದಲ್ಲಿರೋದನ್ನ ನೋಡಿದ ಕೆಲ ಸಿನಿಮಾ ತಂಡಗಳು ಇನ್ನೂ ಏನ್ ಮಾಡ್ತಿದ್ದಾರಪ್ಪ ಇವ್ರು ಅಂತ ಯೋಚಿಸ್ತಿದ್ದಾರೆ..

blank

Source: newsfirstlive.com Source link