ತಾಲಿಬಾನಿಗಳ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್; 14 ಮಂದಿಯ ಹೆಡೆಮುರಿ ಕಟ್ಟಿದ ಪೊಲೀಸ್​

ತಾಲಿಬಾನಿಗಳ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್; 14 ಮಂದಿಯ ಹೆಡೆಮುರಿ ಕಟ್ಟಿದ ಪೊಲೀಸ್​

ನವದೆಹಲಿ: ಅತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಇಡೀ ದೇಶವನ್ನ ವಶಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಮಧ್ಯೆ ಇತ್ತ ಭಾರತದಲ್ಲೇ ಕೆಲವರು ತಾಲಿಬಾನಿಗಳನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ​​ ವಾಟ್ಸಾಪ್​ ಖಾತೆ ಸ್ಥಗಿತಗೊಳಿಸಿದ ಫೇಸ್​​​ಬುಕ್ -ಯೂಟ್ಯೂಬ್​ನಿಂದಲೂ ಕ್ರಮ

ಹೀಗೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದನ್ನು ಬೆಂಬಲಿಸಿ ಪೋಸ್ಟ್​ಗಳನ್ನು ಹಾಕಿದ್ದ ಅಸ್ಸಾಂ ರಾಜ್ಯದ 14 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತರ ವಿರುದ್ಧ ಸಮಾಜ ವಿರೋಧಿ ನಡೆ ಆ್ಯಕ್ಟ್, ಐಟಿ ಆ್ಯಕ್ಟ್ ಹಾಗೂ ಸಿಆರ್​ಪಿಸಿ ಅಡಿ ಕೇಸ್​ಗಳನ್ನು ದಾಖಲಿಸಲಾಗಿದೆ.

ಕಾಮ್ರುಪ್ ಮೆಟ್ರೋಪೊಲಿಟನ್​ನ ಇಬ್ಬರು, ಬರ್ಪೆಟಾ, ಧುಬ್ರಿ, ಮತ್ತು ಕರೀಂಗಂಜ್ ಜಿಲ್ಲೆಗಳಿಂದ ತಲಾ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೇ ದರ್ರಂಗ್, ಕಚರ್, ಹೈಲಾಕಂಡಿ, ಸೌತ್ ಸಲ್ಮಾರ, ಗೋಲ್ಪಾರ ಮತ್ತು ಹೊಜೈ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚೀನಾ-ತಾಲಿಬಾನ್-ಪಾಕಿಸ್ತಾನ ದುಷ್ಟಕೂಟ ಒಂದಾದ್ರೆ ಭಾರತದ ಮೇಲೆ ಏನು ಪರಿಣಾಮ ಬೀರುತ್ತೆ?

ಇಂಥ ಆರೋಪಿಗಳ ವಿರುದ್ಧ ನಾವು ಕ್ರಿಮಿನಲ್ ಕೇಸ್​​ಗಳನ್ನು ದಾಖಲಿಸುತ್ತಿದ್ದೇವೆ, ಇಂಥ ಯಾವುದೇ ಆರೋಪಗಳು ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸಿ ಎಂದು ಡೆಪ್ಯುಟಿ ಇನ್ಸ್​ಪೆಕ್ಟರ್ ಜನರಲ್ ವಯೋಲೆಟ್ ಬರುವಾ ಹೇಳಿದ್ದಾರೆ.

Source: newsfirstlive.com Source link