ಡೈರೆಕ್ಷನ್ ಕನಸಿನಲ್ಲಿರೋ ಉಪೇಂದ್ರ ಪುತ್ರ.. ಅಪ್ಪನ ಸಿನಿಮಾ ಆಯುಷ್ ಉಪೇಂದ್ರನಿಗೆ ಇಷ್ಟ..?

ಡೈರೆಕ್ಷನ್ ಕನಸಿನಲ್ಲಿರೋ ಉಪೇಂದ್ರ ಪುತ್ರ.. ಅಪ್ಪನ ಸಿನಿಮಾ ಆಯುಷ್ ಉಪೇಂದ್ರನಿಗೆ ಇಷ್ಟ..?

ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಅವರ ಸಿನಿಮಾ ನೋಡಿ ಎಷ್ಟ್ ಎಷ್ಟೋ ಜನ ನಿರ್ದೇಶಕರಾಗಿದ್ದಾರೆ.. ನಟ ನಿರ್ಮಾಪಕರೂ ಆಗಿದ್ದಾರೆ.. ಇನ್ನು ಅವರ ಮುಂದೆನೇ ಬೆಳೆದ ಅವರ ಮಗ ಅವರಂಗೆ ಡೈರೆಕ್ಷನ್ ಮಾಡೋ ಕನಸುಕಾಣದೇ ಅಭಿನಯದ ಮನಸು ಮಾಡದೇ ಇರ್ತಾನಾ ಹೇಳಿ.. ಆಯುಷ್ ಉಪೇಂದ್ರ ತನ್ನ ಮನದಾಳದಲ್ಲಿ ಅಡಗಿರೋ ನಟ ಮತ್ತು ಟ್ಯಾಲೆಂಟೆಡ್ ನಿರ್ದೇಶಕನ ಆಸೆ ಹೊರ ಹಾಕಿದ್ದಾರೆ..

blank

ರಿಯಲ್ ಸ್ಟಾರ್ ಉಪೇಂದ್ರ ಅವರ ವಂಶದಲ್ಲಿ ಹಿಂದೆ ಕಲಾವಿದನಿಲ್ಲದಿದ್ರೂ ಉಪ್ಪಿ ಬ್ಲಡ್​​ನಲ್ಲಿ ಕಲಾವಿದನ ಅಂಶವಿತ್ತು.. ಈ ಕಾರಣಕ್ಕೆ ಉಪ್ಪಿ ಮಲ್ಟಿ ಟ್ಯಾಲೆಂಟೆಂಡ್ ಆಗಿ ದೇಶ ಮೆಚ್ಚುವ ಕಲಾಸಿರಿಯಾಗಿ ಗುರುತಿಸಿಕೊಂಡಿದ್ದಾರೆ.. ಇದಕ್ಕೆ ಅವರ ತಂದೆಯ ಕಲಾವಂತಿಕೆಯೂ ವರದಾನವಾಗಿರಬಹುದು.. ಯಾಕೆಂದ್ರೆ ಉಪೇಂದ್ರ ಅವರ ತಂದೆ ಸಖತ್ ಆಗಿ ಮಾತನಾಡ್ತಾರೆ.. ಈ ಕಾರಣಕ್ಕೆ ಇರಬಹುದು ಉಪೇಂದ್ರ ಡೈಲಾಗ್​ನಿಂದಲೇ ಜನಮನ ಗೆದ್ದಿರೋದು.. ಈಗ ಉಪೇಂದ್ರ ಅವರ ಮಗನ ಸರದಿ ಶುರುವಾಗೋ ಕಾಲ ಸನಿಹವಾಗುತ್ತಿದೆ.. ಉಪೇಂದ್ರ ಅವರಂತೆ ಆಯುಷ್ ಉಪೇಂದ್ರ ಕೂಡ ಸದಾ ಹಸನ್ಮುಖಿ.. ಅಪ್ಪನಂತೆ ಡೈಲಾಗ್ ಹೊಡಿತ್ತಾರೆ.. ಸ್ಕ್ರಿಪ್ಟ್ ಬರೆಯುತ್ತಾರೆ, ಅಪ್ಪನೊಟ್ಟಿಗೆ ಸಿನಿಮಾ ನೋಡಿ ಚರ್ಚೆ ಮಾಡ್ತಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲೀಗ ಶಿಲ್ಪಾಶೆಟ್ಟಿಯದ್ದೇ ಸದ್ದು.. ಸಖ್ಖತ್ ಫೋಟೋ ಹಂಚಿಕೊಂಡ ನಟಿ

ಆಯಷ್ ಉಪೇಂದ್ರ ಅವರಿಗೆ ಈಗ ವಯಸ್ಸು 17.. ಜಸ್ಟ್ ಎಸ್​​.ಎಸ್​​.ಎಲ್​.ಸಿ ಮುಗಿಸಿ ಕಾಲೇಜು ಮೆಟ್ಟಿಲು ಹತ್ತೋಕ್ಕೆ ಸಜ್ಜಾಗಿದ್ದಾರೆ.. ಈಗ್ಲೇ ಜಿಮ್​​ಗೆ ಕಡೆ ಹೆಜ್ಜೆ ಇಟ್ಟಿದ್ದಾರೆ.. ನಟಿಸುವ ಆಸಕ್ತಿ ಬಹಳನೇ ಇದೆ.. ಇದ್ರ ಜೊತೆಗೆ ಒಳ್ಳೆ ಫುಟ್ ಬಾಲ್ ಆಟ ಆಡ್ತಾರಂತೆ ಮರಿ ರಿಯಲ್ ಸ್ಟಾರ್. ಉಪೇಂದ್ರ ಅವರ ಮನೆಯಲ್ಲಿ ಸಿನಿಮಾ ಬಿಟ್ರೇ ಹೆಚ್ಚಾಗಿ ಯಾವುದೇ ಚರ್ಚೆಗಳು ಆಗಲ್ವಂತೆ.. ಉಪ್ಪಿ ಫ್ಯಾಮಿಲಿಯಲ್ಲಿ ಸಿನಿಮಾಗಳನ್ನ ಒಟ್ಟೊಟ್ಟಿಗೆ ಕುಳಿತು ನೊಡ್ತಾರಂತೆ.ಮುಂದಿನ ದಿನಗಳಲ್ಲಿ ಉಪ್ಪಿ ದಾರಿಯನ್ನ ಅವರ ಮಗ ಮತ್ತು ಮಗಳು ಹಿಡಿದ್ರು ಅಚ್ಚರಿ ಪಡಬೇಕಿಲ್ಲ.

 

Source: newsfirstlive.com Source link