‘ಕಲಬುರಗಿ ಜನರು ಬಹಳ ಲೇಜಿ’ ಮುರುಗೇಶ್ ನಿರಾಣಿ ವಿವಾದಾತ್ಮಕ ಹೇಳಿಕೆ

‘ಕಲಬುರಗಿ ಜನರು ಬಹಳ ಲೇಜಿ’ ಮುರುಗೇಶ್ ನಿರಾಣಿ ವಿವಾದಾತ್ಮಕ ಹೇಳಿಕೆ

ಬಾಗಲಕೋಟೆ: ಕಲಬುರಗಿ ಜನಕ್ಕೆ ಹೊಳಿ(ನದಿ) ಇದ್ರೂ ನೀರಾವರಿ ಮಾಡುವ ಹವ್ಯಾಸ ಇಲ್ಲ.. ಆ ಜನ ಬಹಳ ಲೇಜಿ ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ ನಿರಾಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಉಸ್ತುವಾರಿ ಜಿಲ್ಲೆಗಳು ಬದಲಾವಣೆ ಆಗುತ್ತವೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ.. ನಾನೇನು ಉಸ್ತುವಾರಿ ಜಿಲ್ಲೆ ಬದಲಾವಣೆ ಕೊಟ್ಟಿಲ್ಲ. ನಾನು ಕಲಬುರಗಿಯನ್ನೇ ಬೇಡಿದ್ದೇನೆ, ಮುಂದೆನೂ ಕಲಬುರಗಿಯಲ್ಲೇ ಇರ್ತಿನಿ. ಕಲಬುರಗಿ ಬಹಳ ಹಿಂದುಳಿದ ಭಾಗ ಅದನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡು, ಇಡೀ 70 ವರ್ಷದಲ್ಲಿ ಶಿಕ್ಷಣದಲ್ಲಿ ಒಮ್ಮೆಯೂ ಕಲಬುರಗಿ 10 ಒಳಗೆ ಬಂದಿಲ್ಲ. ಮುಂದಿನ ವರ್ಷಗಳಲ್ಲಿ 10ಕ್ಕಿಂತ ಕಡಿಮೆ ರ್ಯಾಂಕ್​ನಲ್ಲಿ ಕಲಬುರಗಿ ತರೋ ಚಾಲೆಂಜ್ ಮಾಡಿದ್ದೀನಿ.

ನೀರಾವರಿಯಲ್ಲಿ ಹೊಳಿ ಪೂರ್ತಿ ಇರುತ್ತೆ.. ನೀರಾವರಿ ಮಾಡುವಂತಹ ಹವ್ಯಾಸನೇ ಇಲ್ಲ ಅವ್ರಿಗೆ, ಭಾರಿ ಲೇಜಿ. ಹೀಗಾಗಿ ಕಲಬುರಗಿ ತಾಲ್ಲೂಕಿಗೆ ಒಂದೊಂದು ಬಸ್ ಬಿಟ್ಟು ನೀರಾವರಿ ಪ್ರದೇಶಗಳಿಗೆ ಪಿಕ್‌ನಿಕ್ ವ್ಯವಸ್ಥೆ ಮಾಡ್ತಿದ್ದೀನಿ. ಕೊಲ್ಹಾಪುರ, ಸಾಂಗ್ಲಿ, ಮುಧೋಳ, ಬದಾಮಿ ಕಡೆ ಟೂರ್ ಮಾಡಿಸ್ತೀನಿ. ಈ ಭಾಗದಲ್ಲಿ ಹೊಳೆಯಲ್ಲಿ ಹೇಗೆ ನೀರಾವರಿ ಮಾಡ್ತಿದಾರೆ ಎಂಬುದನ್ನ ತೋರಿಸುತ್ತಿದ್ದೇನೆ. ಕಲಬುರಗಿಯಲ್ಲಿ 100 ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಮಾಡ್ತಿದೀವಿ ಎಂದಿದ್ದಾರೆ.

Source: newsfirstlive.com Source link