ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಕೇಸ್: ಯಾತ್ರೆ ನಡೆಸಿದ ಬಿಜೆಪಿಗರ ಮೇಲೇಕಿಲ್ಲ ಎಂದ ಕಾಂಗ್ರೆಸ್

ವಿನಯ್ ಕುಲಕರ್ಣಿ ಸೇರಿ 300 ಜನರ ವಿರುದ್ಧ ಕೇಸ್: ಯಾತ್ರೆ ನಡೆಸಿದ ಬಿಜೆಪಿಗರ ಮೇಲೇಕಿಲ್ಲ ಎಂದ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಇಂದು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಹಿನ್ನೆಲೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸಂಭ್ರಮದಿಂದ ವಿನಯ್ ಕುಲಕರ್ಣಿಯವರನ್ನ ಸ್ವಾಗತಿಸಿಕೊಂಡರು.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 300 ಜನರ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸಲಾಗಿದೆ.

ಇದಕ್ಕೆ ಕಾಂಗ್ರೆಸ್ ಕಿಡಿಕಾರಿದ್ದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ. ಟ್ವೀಟ್​ನಲ್ಲಿ.. ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಹಾಗೂ 300 ಜನರ ಮೇಲೆ ಕೋವಿಡ್ ನಿಯಮ ಉಲ್ಲಂಘನೆಯ ಕೇಸ್ ಹಾಕಲಾಗಿದೆ.

blank

 

ಜನರು ಅಭಿಮಾನ ತೋರಲು ಅಗಮಿಸಿದ್ದಕ್ಕೆ ವಿನಯ್ ಕುಲಕರ್ಣಿ ಹೊಣೆಯಾಗುವುದಾದರೆ ಗುಂಡು ಹಾರಿಸಿದ ಪ್ರಕರಣದಲ್ಲಿ ಭಗವಂತ್ ಖೂಬಾ ಅವರೂ ಹೊಣೆಗಾರರಲ್ಲವೇ? ಯಾತ್ರೆಯುದ್ದಕ್ಕೂ ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿಯವರ ಮೇಲೆ ಏಕಿಲ್ಲ ಕೇಸ್? ಎಂದು ಪ್ರಶ್ನಿಸಿದೆ.

Source: newsfirstlive.com Source link