ಅದ್ಧೂರಿ ಸೆಟ್​ನಲ್ಲಿ ಮಿರ ಮಿರ ಮಿಂಚ್ತಿದ್ದಾನೆ ಸ್ಯಾಂಡಲ್​ವುಡ್​ನ ’ರಂಗನಾಯಕ’

ಅದ್ಧೂರಿ ಸೆಟ್​ನಲ್ಲಿ ಮಿರ ಮಿರ ಮಿಂಚ್ತಿದ್ದಾನೆ ಸ್ಯಾಂಡಲ್​ವುಡ್​ನ ’ರಂಗನಾಯಕ’

ಮೂರನೇ ಬಾರಿಗೆ ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್ ಒಟ್ಟಿಗೆ ಸೇರಿ ಸಿನಿಮಾ ಮಾಡ್ತಿದ್ದಾರೆ.. ಜಗ್ಗೇಶ್ – ಗುರುಪ್ರಸಾದ್ 3ನೇ ಸಿನಿಮಾದ ಹೆಸರು ರಂಗನಾಯಕ.. ಈ ವಿಚಾರ ನಿಮೆಗೆ ಗೊತ್ತಿದೆ.. ಆದ್ರೆ ರಂಗನಾಯಕ ಸಿನಿಮಾ ತಂಡ ಈಗ ಏನ್ ಮಾಡ್ತಿದೆ..? ರಂಗನಾಯಕನಲ್ಲಿ ಜಗ್ಗೇಶ್ ಗೆಟಪ್ ಏನು ಅನ್ನೋ ಸ್ವಾರಸ್ಯ ನಿಮಗೆ ಗೊತ್ತಾ..?

blank

ಹಳೆಯ ಪೌರಾಣಿಕ ಸಿನಿಮಾದಲ್ಲಿ ಕಾಣಸಿಗೋ ರಾಜರ ಅರಮನೆ ಆಸ್ಥಾನ.. ನಾವು ಯಾವುದೋ ಅರಮನೆಯಲ್ಲಿ ಇದ್ದೇವೇನೋ ಅನ್ನೋ ಫೀಲು.. ಇದು ಹೈದ್ರಾಬಾದ್​​ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಇದ್ದಿವಾ ಅನ್ನೋ ಪ್ರಶ್ನೆ ನಮಗೆ ಕಾಡುತ್ತೆ.. ಅಷ್ಟಕ್ಕೂ ನಾವು ನಿಮಗೆ ತೋರಿಸ್ತಿರೋ ಈ ಸಿನಿಮಾದ ಸೆಟ್ಟು ರಂಗನಾಯಕ ಚಿತ್ರದ್ದು.. ಮಠ , ಎದ್ದೇಳು ಮಂಜುನಾಥ ಸಿನಿಮಾದ ನಂತರ ಮತ್ತೊಮ್ಮೆ ಗುರುಪ್ರಸಾದ್-ಜಗ್ಗೇಶ್ ಒಟ್ಟಿಗೆ ರಂಗನಾಯಕ ಸಿನಿಮಾವನ್ನ ಮಾಡ್ತಿದ್ದಾರೆ..

blank

ರಂಗನಾಯಕ ಸಿನಿಮಾ ಶೂಟಿಂಗ್ ಬೆಂಗಳೂರಿನ ಹೊರವಲಯದಲ್ಲಿ ಶುರುವಾಗಿದೆ.. ಸಾಂಗ್ ಶೂಟ್ ಮೂಲಕ ರಂಗನಾಯಕ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ.. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಾಂಗ್ ಟೀಸರ್ ಒಂದನ್ನ ರಂಗನಾಯಕ ಟೀಮ್ ಹೊರಬಿಟ್ಟಿದೆ..

blank

ರಂಗನಾಯಕ.. ಇದು ವಿಜಯನಗರ ಸಾಮ್ರಾಜ್ಯ ಕಥೆ ಅಂತಾರೆ ನಿರ್ದೇಶಕ ಗುರು ಪ್ರಸಾದ್.. ಆದ್ರೆ ನೈಜ ಕಥೆಯೇನು ಈ ಬಾರಿ ಯಾವ ರೀತಿಯ ಪ್ರೇಕ್ಷಕರನ್ನ ರಂಜಿಸಲು ಮುಂದಾಗಿದ್ದಾರೆ ಅನ್ನೋ ಗುಟ್ಟನ್ನ ಬಿಟ್ಟು ಕೊಡುತ್ತಿಲ್ಲ.. ಒಟ್ಟಿನಲ್ಲಿ ರಂಗನಾಯಕ ಸಿನಿಮಾದ ಶೂಟಿಂಗ್ ಭರ್ಜರಿಯಾಗಿಯೇ ಶುರುವಾಗಿದೆ.. ಮುಂಬರುವ ಸಂಕ್ರಾಂತಿ ಹಬ್ಬಕ್ಕೆ ರಂಗನಾಯಕ ಪ್ರೇಕ್ಷಕರ ಮುಂದೆ ಬರೋ ಸಾಧ್ಯತೆ ಇದೆ..

Source: newsfirstlive.com Source link