ಜಗತ್ತಿನ ಎಲ್ಲ ದೇಶಗಳ ಜೊತೆಗೂ ರಾಜಕೀಯ, ಆರ್ಥಿಕ ಸಂಬಂಧ ಬೆಳೆಸ್ತಾರಂತೆ ತಾಲಿಬಾನಿಗಳು

ಜಗತ್ತಿನ ಎಲ್ಲ ದೇಶಗಳ ಜೊತೆಗೂ ರಾಜಕೀಯ, ಆರ್ಥಿಕ ಸಂಬಂಧ ಬೆಳೆಸ್ತಾರಂತೆ ತಾಲಿಬಾನಿಗಳು

ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾಗಿರೋ ತಾಲಿಬಾನಿಗಳು ಇದೀಗ ಜಗತ್ತಿನ ಎಲ್ಲ ದೇಶಗಳ ಜೊತೆಗೂ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದ್ರಲ್ಲೂ ಅಮೆರಿಕಾ ಜೊತೆಗೆ ಆರ್ಥಿಕ ಒಪ್ಪಂದ ಮಾಡಿಕೊಳ್ಳಲು ತಾಲಿಬಾನಿಗಳು ಮನಸ್ಸು ಮಾಡಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರ ದಾಖಲಾತಿಗಳನ್ನು ಸುಟ್ಟು.. ನೋವಿನ ಕಥೆ ಹೇಳಿಕೊಂಡ ಆಫ್ಘನ್ ಶಾಲಾ ಸಂಸ್ಥಾಪಕಿ

ತಾಲಿಬಾನ್​ ಸಹಸಂಸ್ಥಾಪಕ ಮುಲ್ಲಾ ಅಬ್ದುಲ್ ಗನಿ ಬರಾದರ್ ಜಗತ್ತಿನ ಎಲ್ಲ ದೇಶಗಳ ಜೊತೆಗೆ ಆರ್ಥಿಕ ಮತ್ತು ರಾಜಕೀಯ ಸಂಬಂಧ ಬೆಳೆಸುವ ಇಚ್ಛೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಚೀನಾ-ತಾಲಿಬಾನ್ ಸ್ನೇಹ.. ಇದರ ಹಿಂದಿದೆ 75 ಲಕ್ಷ ಕೋಟಿ ರೂಪಾಯಿ ಚಕ್ರವ್ಯೂಹ..!

ನಿನ್ನೆ ಈ ಕುರಿತು ಟ್ವಿಟರ್​ನಲ್ಲಿ ಹೇಳಿಕೊಂಡಿರುವ ಬರಾದರ್.. ಮಾತುಕತೆ ಮೂಲಕ ನಮ್ಮೊಂದಿಗೆ ವಿದೇಶಗಳ ಜೊತೆ ಇರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ತೇವೆ ಎಂದಿದ್ದಾರೆ. ಅಫ್ಘಾನಿಸ್ತಾನ ಜನರಿಗೆ ನಾವು ಬದಲಾಗಿದ್ದೇವೆಂದು ತಿಳಿದಿರಲಿ.. ಅಲ್ಲದೇ ನಾವು ಮಾನವ ಹಕ್ಕು ಮತ್ತು ಅಂತಾರಾಷ್ಟ್ರೀಯ ಹಕ್ಕುಗಳಿಗೆ ಬದ್ಧರಾಗಿದ್ದೇವೆ. ವಿದೇಶಗಳ ಪ್ಲಾನ್​ಗಳಿಗೆ ದೇಶದ ಜನರು ಮಾರುಹೋಗಬಾರದು ಎಂದಿದ್ದಾರೆ.

Source: newsfirstlive.com Source link