ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

– ಸೋಶಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಫೋಟೋ ವೈರಲ್

ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೇ ಅವರು ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.

ಹೌದು. ಸೆಪ್ಟೆಂಬರ್ 2ರಂದು ಅಭಿನಯಚಕ್ರವರ್ತಿಯ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬಕ್ಕೆ 10 ದಿನ ಮೊದಲೇ ಸಿದ್ಧವಾಗಿರುವ ಫೋಟೋವನ್ನು ಕುಂಬ್ಳೆ ಇಂದು ರಿಲೀಸ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಫೋಟೋದಲ್ಲಿ ಸುತ್ತಲೂ ನೆರೆದಿರುವ ಕ್ರೀಡಾಂಗಣದ ಮಧ್ಯದಲ್ಲಿ ಕುಳಿತು ತಮ್ಮ ಅಭಿಮಾನಿಗಳ ಕೈ ಚಾಚುತ್ತಿರುವಂತೆ ಫೋಟೋವೊಂದನ್ನು ಅದ್ಭುತವಾಗಿ ಎಡಿಟ್ ಮಾಡಲಾಗಿದೆ. ಅಲ್ಲದೆ ಫೋಟೋದಲ್ಲಿ ಬಾದ್ ಷಾ ಎಂದು ಬರೆಯಲಾಗಿದ್ದು, ಈ ಫೋಟೋವನ್ನು ಕುಂಬ್ಳೆ ಸೇರಿದಂತೆ ಹಲವಾರು ಅಭಿಮಾನಿಗಳು ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ಮುಂಚಿತವಾಗಿಯೇ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ನನ್ನ ಆತ್ಮೀಯ ಸ್ನೇಹಿತ ಹಾಗೂ ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಕಾಮನ್ ಡಿಪಿ ಶೇರ್ ಮಾಡಿಕೊಳ್ಳಲು ತುಂಬಾ ಸಂತಸವಾಗುತ್ತಿದೆ. ಎಂದಿಗೂ ಸ್ಫೂರ್ತಿದಾಯಕವಾಗಿರಿ ಎಂದು ಕುಂಬ್ಳೆ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಕೂಡ ಪ್ರತಿಕ್ರಿಯಿಸಿದ್ದು, ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೇನು ಇರಲು ಸಾಧ್ಯ ಅನಿಲ್ ಕುಂಬ್ಳೆ ಸರ್. ಇದು ನಿಜಕ್ಕೂ ದೊಡ್ಡ ಸಪ್ರ್ರೈಸ್ ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ. ಸುದೀಪ್ ಫೋಟೋ ವೈರಲ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗ್ ಕಿಚ್ಚ ಸುದೀಪ್ ಹಾಗೂ ಕೋಟಿಗೊಬ್ಬ ಅಂತ ಕೆಲ ಕಾಲ ಟ್ರೆಂಡಿಗ್ ನಲ್ಲಿತ್ತು. ಈ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.  ಇದನ್ನೂ ಓದಿ: ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇದೇ ವರಮಹಾಲಕ್ಷ್ಮಿ ಹಬ್ಬದಂದು ‘ವಿಕ್ರಾಂತ್ ರೋಣ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯ ಆತಂಕ ಹಾಗೂ ಲಾಕ್ ಡೌನ್ ನಿಂದಾಗಿ ಚಿತ್ರ ಚಿಡುಗಡೆಯಾಗಿಲ್ಲ. ಪರಿಣಾಮ ತೆರಮೇಲೆ ಕಿಚ್ಚನನ್ನು ಕಾಣಲು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ನಿರಾಸೆ ಉಂಟಾಗಿದೆ. ಈ ಮಧ್ಯೆ ಹಬ್ಬದಂದು ಕಿಚ್ಚ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಹಬ್ಬದ ಪ್ರಯುಕ್ತ ಸ್ಟೈಲಿಶ್ ಫೋಟೋ ಶೃ ಮಾಡಿರುವ ಕಿಚ್ಚ, ಬಹಳ ದಿನಗಳ ನಂತರ ವೈಯಕ್ತಿಕವಾಗಿ ಮಾಡಿದ ಫೊಟೋಶೂಟ್ ಎಂದು ಕ್ಯಾಪ್ಷನ್ ಕೂ ಹಾಕಿಕೊಂಡಿದ್ದು, ನೆಚ್ಚಿನ ನಟನ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತೂಕ ಕಳೆದುಕೊಂಡ ರಣಧೀರ ನಟಿ

Source: publictv.in Source link