ಪ್ರಿಯತಮೆಗಾಗಿ 15,000ಕ್ಕೆ ‘ಲವ್ ಸುಪಾರಿ’! ಪೊಲೀಸರ ಗುಂಡೇಟು ತಿಂದ ರೌಡಿ ಕಥೆಯ ರಹಸ್ಯ

ಪ್ರಿಯತಮೆಗಾಗಿ 15,000ಕ್ಕೆ ‘ಲವ್ ಸುಪಾರಿ’! ಪೊಲೀಸರ ಗುಂಡೇಟು ತಿಂದ ರೌಡಿ ಕಥೆಯ ರಹಸ್ಯ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿಶೀಟರ್​ ಅವಿನಾಶ ಅಲಿಯಾಸ್ ರೆಬೆಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಅವಿನಾಶ್ ಸಂಜಯನಗರ ಠಾಣೆ ರೌಡಿಶೀಟರ್ ಆಗಿದ್ದು, ವ್ಯಕ್ತಿಯೊರ್ವರನ್ನು ಕೊಲ್ಲಲು 15000 ಸಾವಿರ ರೂಪಾಯಿ ಸುಪಾರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.

ಈ ಹಿಂದೆ ಮುನಿರಾಜು ಎಂಬವರ ಮೇಲೆ ಹಾಡಹಗಲೇ ಅವಿನಾಶ್​​ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿತ್ತು. ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಿಲು ಸಂಜಯನಗರ ಇನ್ಸ್​​​ಪೆಕ್ಟರ್​ ಬಾಲರಾಜ್ ಹಾಗೂ ತಂಡ ತೆರಳಿತ್ತು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್​ ಪಿಸ್ತೂಲ್​​ -ಕುಖ್ಯಾತ ರೌಡಿಶೀಟರ್ ಅವಿನಾಶ್ ಕಾಲಿಗೆ ಗುಂಡು

blank

ಈ ವೇಳೆ ಪೇದೆ ಸಂತೋಷ್ ಮೇಲೆ ಅವಿನಾಶ್​ ಹಲ್ಲೆ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ್ದ. ಪರಿಣಾಮ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಇನ್ಸ್​​ಪೆಕ್ಟರ್​ ಬಾಲರಾಜ್​​ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸ್​ ಪೇದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ:
ರೌಡಿಶೀಟರ್​ ಅವಿನಾಶ್​ನಿಂದ ಹಲ್ಲೆಗೊಳಗಾದ ಮುನಿರಾಜು ಎಂಬಾತ ತನ್ನ ಸಹೋದ್ಯೋಗಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಜೊತೆಗೆ ಸಹೋದ್ಯೋಗಿಯ ಮಗಳ ಜೊತೆ ಅನುಚಿತವಾಗಿ ವರ್ತಿಸುತ್ತ, ಕಿರುಕುಳ ನೀಡ್ತಿದ್ದ ಎಂದು ಆರೋಪಿಸಲಾಗಿತ್ತು. ಇದರಿಂದ ಬೇಸತ್ತ ಸಹೋದ್ಯೋಗಿಯ ಮಗಳು ತನ್ನ ಬಾಯ್ ಫ್ರೆಂಡ್ ರಿಯಾನ್​ಗೆ ವಿಷಯ ತಿಳಿಸಿದ್ದಾಳೆ.

ವಿಷಯ ತಿಳಿದ ರಿಯಾನ್​ ರೌಡಿಶೀಟರ್​ ಅವಿನಾಶ್​ನನ್ನು ಸಂಪರ್ಕಿಸಿ 15 ಸಾವಿರ ಹಣ ಕೊಟ್ಟು ಮುನಿರಾಜು ಕಥೆ ಮುಗಿಸೋಕೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಜುಲೈ 29 ರಂದು ಮುನಿರಾಜು, ಆತನ ಸಹೋದ್ಯೋಗಿ, ಆಕೆಯ ಮಗಳು, ಬೈಕ್ ನಲ್ಲಿ ಹೊರಟಿದ್ದ ವೇಳೆ ಯುವತಿ ಲೈವ್ ಲೊಕೇಶನ್ ಅನ್ನು ಬಾಯ್ ಫ್ರೆಂಡ್ ರಿಯಾನ್​ಗೆ ಕಳಿಸಿದ್ದಾಳೆ.

ರಿಯಾನ್​​ ಅದನ್ನು ರೌಡಿಶೀಟರ್​ ಅವಿನಾಶ್​ಗೆ ಫಾವರ್ಡ್​ ಮಾಡಿದ್ದು, ಲೈವ್​ ಲೋಕೇಶನ್​ ಫಾಲೋ ಮಾಡಿದ ರೌಡಿ ಅವಿನಾಶ್​ ಸಂಜಯನಗರದಲ್ಲಿ ಮುನಿರಾಜು ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ರೌಡಿಶೀಟರ್​ ಅವಿನಾಶ್​ನನ್ನು ಸಂಜಯನಗರ ಪೊಲೀಸರು ಬೆನ್ನತ್ತಿದ್ದರು.

ಇದನ್ನೂ ಓದಿ: ಜಮೀರ್​​ಗೆ ED ಮತ್ತೆ ಬುಲಾವ್; ಇಂದೇ ವಿಚಾರಣೆಗೆ ಹಾಜರಾಗಲು ಸೂಚನೆ

Source: newsfirstlive.com Source link