ಬಿಜೆಪಿ ನಾಯಕ ಚಿ.ನಾ. ರಾಮುಗೆ ಯುವತಿಯಿಂದ ವಿಡಿಯೋ ಕಾಲ್.. ನಂತರ ಬ್ಲಾಕ್​ಮೇಲ್

ಬಿಜೆಪಿ ನಾಯಕ ಚಿ.ನಾ. ರಾಮುಗೆ ಯುವತಿಯಿಂದ ವಿಡಿಯೋ ಕಾಲ್.. ನಂತರ ಬ್ಲಾಕ್​ಮೇಲ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಮುಖಂಡ ಚಿ.ನಾ ರಾಮುಗೆ ಯುವತಿಯೋರ್ವಳು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚಿ.ನಾ. ಮೊದಲು ರಾಮುವಿಗೆ ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆ ಮೆಸೆಂಜರ್ ಮೂಲಕ ರಾಮು ನಂಬರ್ ಪಡೆದು ಚಾಟಿಂಗ್ ಮಾಡಿದ್ದಾಳಂತೆ.

ವಾಟ್ಸಾಪ್​ನಲ್ಲಿ ಚಾಟಿಂಗ್​ನಲ್ಲಿ ತೊಡಗಿದ್ದ ಮಹಿಳೆ ಬಳಿಕ ವಿಡಿಯೋ ಕಾಲ್ ಮಾಡಿ ಅಸಭ್ಯ ವರ್ತನೆ ತೋರಿದ್ದಾಳೆಂದು ಆರೋಪಿಸಲಾಗಿದೆ. ಯುವತಿಯ ಜೊತೆ ಮಾತುಕತೆ ಮುಗಿಸಿದ ಬಳಿಕ ಅಪರಿಚಿತ ವ್ಯಕ್ತಿ ರಾಮುಗೆ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಕಲಬುರಗಿ ಜನರು ಬಹಳ ಲೇಜಿ’ ಮುರುಗೇಶ್ ನಿರಾಣಿ ವಿವಾದಾತ್ಮಕ ಹೇಳಿಕೆ

ನಿಮ್ಮ ನಗ್ನ ಫೋಟೋಗಳಿವೆ ಹಣ ಕೊಡಿ, ಇಲ್ಲ ವೈರಲ್ ಮಾಡ್ತೀವಿ ಅಂಥ ಬೆದರಿಕೆಯೊಡ್ಡಿದ್ದಾರೆ. ಯುವತಿಯೊಂದಿಗೆ ನೀವು ನಗ್ನವಾಗಿರೋ ವಿಡಿಯೋ ಇದೆ. ಕೇಳಿದಷ್ಟು ಹಣ ನೀಡಿಲ್ಲ ಅಂದ್ರೆ ದೇಶಾದ್ಯಂತ ವೈರಲ್ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ದಾನಂತೆ. ವ್ಯಕ್ತಿಯ ಬೆದರಿಕೆಗೆ ಹೆದರಿ ಅಪರಿಚಿತನ ಖಾತೆಗೆ 31,500 ಹಣ ಹಾಕಿದ್ದಾರಂತೆ. ಬಳಿಕ ಆರೋಪಿ ಮತ್ತೆ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿದ್ದಾನಂತೆ. ಇದರಿಂದ ಬೇಸತ್ತು ಇದೀಗ ಬಿಜೆಪಿ ಮುಖಂಡ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಚಿ.ನಾ ರಾಮು ದೂರು ನೀಡಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರಂತೆ.

Source: newsfirstlive.com Source link