ಪ್ರಾಧ್ಯಾಪಕರಾಗಿದ್ದ ಘನಿ ಮುರಿದು ಬಿದ್ದಿದ್ದ ಅಫ್ಘಾನ್ ದೇಶ ಕಟ್ಟಿದ ಕನಸಿನ ರೋಚಕ ಕಥೆ..!

ಪ್ರಾಧ್ಯಾಪಕರಾಗಿದ್ದ ಘನಿ ಮುರಿದು ಬಿದ್ದಿದ್ದ ಅಫ್ಘಾನ್ ದೇಶ ಕಟ್ಟಿದ ಕನಸಿನ ರೋಚಕ ಕಥೆ..!

ಅಶ್ರಫ್ ಘನಿ, how to build a broken country? ಈ ವಾಕ್ಯವನ್ನು ಹಿಡಿದು, ವಿಶ್ವದ ಮೂಲೆ ಮೂಲೆ ತಿರುಗಿ ಅಫ್ಘಾನ್ ಎನ್ನುವ ಮುರಿದು ಬಿದ್ದ ರಾಷ್ಟ್ರವನ್ನು ಯಶಸ್ವಿಯಾಗಿ ಕಟ್ಟಿದ ನಾಯಕ. ಆದ್ರೆ ಈಗ ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಪರಾರಿಯಾಗಿದ್ದಾರೆ. ಅಲ್ಲೆಲ್ಲೋ ಕುಳಿತು ದೇಶದ ಕುರಿತು ಮಾತನಾಡ್ತಾ ಇದ್ದಾರೆ. ಅಫ್ಘಾನ್ ಕಟ್ಟುವಲ್ಲಿ ಇವರ ಸಂಪೂರ್ಣ ಜರ್ನಿ ಹೇಗಿತ್ತು ಗೊತ್ತಾ?

20ನೇ ಶತಮಾನದ ಕೊನೆಯಲ್ಲಿ ಕೆಲವು ದೇಶಗಳು ಸಂಪೂರ್ಣ ಉಗ್ರರ ಬೀಡಾಗಿತ್ತು. ಮಾತಿಗೆ ಮುಂಚೆ ಗುಂಡೇಟು ಎನ್ನುವ ಹಾಗೆ ಉಗ್ರರು ಮೆರೆಯುತ್ತಿದ್ದರು. ಯಾವಾಗ ಅಲ್-ಕೈದಾ ಅಮೆರಿಕದ ಮೇಲೆ ದಾಳಿ ನಡಿಸಿ ಇಡಿ ವಿಶ್ವವನ್ನೆ ನಡುಗಿಸಿ ಬಿಡ್ತೋ, ಆಗಿನಿಂದ ಉಗ್ರತ್ವವನ್ನು ಮಟ್ಟ ಹಾಕಲು ಅಮೆರಿಕ ಉಗ್ರರ ನಾಡಿನಲ್ಲಿ ನೆಲೆ ನಿಂತು ಉಗ್ರರ ಕ್ಯಾಂಪ್ ಗಳನೆಲ್ಲ ಧ್ವಂಸ ಮಾಡಿ ಬಿಡ್ತು. ಈ ಉಗ್ರರ ನಾಡುಗಳಲ್ಲಿ ಒಂದು ಅಫ್ಘಾನಿಸ್ತಾನ. ಈ ದೇಶದಲ್ಲಿ ಸಹ ತಾಲಿಬಾನಿಗಳ ಕೈನಲ್ಲಿ ವೆಪನ್ಸ್ ಹಿಡಿದು ಎಲ್ಲರನ್ನು ತಮ್ಮ ಅಡಿಯಾಳಾಗಿಸಿಕೊಂಡಿತ್ತು. ಆದರೆ ಅಮೆರಿಕ ಸೇನೆ ಎಲ್ಲವನ್ನು ಶಾಂತಗೊಳಿಸಿ, ಆ ದೇಶದಲ್ಲಿ ಒಂದು ಸುಸಜ್ಜಿತ ಸರ್ಕಾರವನ್ನು ರಚಿಸಲು ಸಹಾಯ ಮಾಡಿತ್ತು.

blank

ಅಫ್ಘಾನ್ ಸರ್ಕಾರ ನೆಲೆ ನಿಂತ ಮೇಲೆ ತಾನು ಮರುಸೃಷ್ಟಿಯಾಗಲು ಅದೆಷ್ಟೋ ವರ್ಷಗಳು ಬೇಕಾಗಿತ್ತು, ಕೊನೆಗೆ ಎಲ್ಲ ರಾಷ್ಟ್ರಗಳಂತೆ ತಾನು ಗುರುತಿಸಿಕೊಳ್ಳಲು ಶುರು ಮಾಡಿದ್ದು, ಆಶ್ರಫ್ ಘನಿ ಎನ್ನುವ ನಾಯಕನ ಪಟ್ಟಾಭೀಷೇಕವಾದ ನಂತರ.

ಅಫ್ಘಾನ್, ಉಗ್ರರ ಕೈಕೆಳಗೆ ತಾಂಡವಾಡ್ತಾ ಇದ್ದಾಗ, ಅಶ್ರಫ್ ಘನಿ ದೂರದಲ್ಲಿ ನೆಲೆ ನಿಂತು ಅಫ್ಘಾನ್ ಆಳ್ವಿಕೆಗೆ ಸಿದ್ಧರಾಗ್ತಾ ಇದ್ರೂ ಅಂದ್ರೆ ತಪ್ಪಾಗಲ್ಲ. ಇವರು ಮೂಲತಹ ಆ್ಯಂತ್ರೋಪಾಲಜಿಸ್ಟ್. ಅಂದ್ರೆ ಮಾನವ ಶಾಸ್ತ್ರದಲ್ಲಿ ಪರಿಣಿತರು. ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಘನಿ, ಕೊಲಿಂಬಿಯಾ ವಿದ್ಯಾಲಯದಲ್ಲಿ ಮಾಸ್ಟರ್ ಪದವಿಯನ್ನು ಮುಗಿಸಿದ್ದರು. ಸ್ನಾತಕೋತ್ತರ ಪದವಿ ನಂತರ ತನ್ನ ಹುಟ್ಟೂರು ಕಾಬೂಲ್ ವಿಶ್ವವಿದ್ಯಾನಿಲದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್ಡಿ ಮುಗಿಸಿ ಪದವಿದರರು ಘನಿ. ಕೊನೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಬಲವಾಗಿದ್ದ ಘನಿ ಕಾಬೂಲ್ ವಿದ್ಯಾಲಯಕ್ಕೆ ಕುಲಪತಿಗಳಾಗಿದ್ದು ಇದೆ. ಇದಾದ ಬಳಿಕ ಇವರು ವರ್ಲ್ಡ್ ಬ್ಯಾಂಕ್​​ನಲ್ಲಿ ಕಾರ್ಯಕಾರಣಿಯಾಗಿ ಸೇವೆ ಸಲ್ಲಿಸಿ, ಹಣದ ವ್ಯವಹಾರದ ಬಗ್ಗೆ ಸೃಜನಶೀಲರಾಗಿದ್ದರು.

May be an image of 7 people and people smiling

2001ರಲ್ಲಿ ಹಮೀದ್ ಕರ್ಜಾಯ್ ಸರ್ಕಾರಕ್ಕೆ ಮುಖ್ಯ ಸಲಹೆಗಾರರು
ವಿಶ್ವವೆಲ್ಲ ತಿರುಗಾಡಿ, ದೇಶ ಕಟ್ಟುವ ಸಲಹೆಗಳನ್ನು ಕಲೆ ಹಾಕಿಕೊಂಡಿದ್ದ ಅಶ್ರಫ್ 2001ರಲ್ಲಿ ಅಫ್ಘಾನ್ ಸರ್ಕಾರ ಮರು ರಚನೆ ಸಮಯದಲ್ಲಿ ದೇಶಕ್ಕೆ ಮರುಳಿದ್ದರು. ಹಮೀದ್ ಕರ್ಜಾಯ್ ಅಧ್ಯಕ್ಷರಾದಾಗ ಅಶ್ರಫ್ ರನ್ನು ಮುಖ್ಯ ಸಲಹೆಗಾರರಾಗಿ ಆಯ್ಕೆ ಮಾಡಿಕೊಂಡಿದ್ದರು. ಅಂದಿನಿಂದ ಅಶ್ರಫ್ ಅವರು ಪೊಲಿಟಿಕಲ್ ಕೆರಿಯರ್ ಪ್ರಾರಂಭವಾಯಿತು. ಇಲ್ಲಿಂದ ಅಶ್ರಫ್ ನೇರವಾಗಿ ಅಫ್ಘಾನಿಸ್ತಾನವನ್ನು, ವಿಶ್ವದ ಇನ್ನುಳಿದ ರಾಷ್ಟ್ರಗಳಂತೆ ಹೆಸರು ಸ್ಥಾಪಿಸಲು ಪಣ ತೊಟ್ಟಿದ್ದರು. ಸಲಹೆಗಾರರಾಗಿ ಯಶಸ್ವಿಯಾಗಿದ್ದ ಅಶ್ರಫ್ ಗೆ ದೇಶದ ಹಣಕಾಸಿನ ವ್ಯವಹಾರದ ಶಾಸಕ ಸ್ಥಾನ ಸಿಕ್ಕಿದ್ದು ಅಫ್ಘಾನಿಗಳಿಗೆ ಮತ್ತೊಂದು ಮೇಜರ್ ಬ್ರೇಕ್.

ಅಫ್ಘಾನಿಗಳಿಗೆ ಹೊಸ ಕರೆನ್ಸಿ ಅನಾವರಣ
ದೇಶದ ಬಜೆಟ್ ನಿಯಮ ಬದಲಿಸಿದ ಅಶ್ರಫ್ ಘನಿ

ಹಮೀದ್ ಕರ್ಜಾಯ್ ರವರ ಸರ್ಕಾರದಲ್ಲಿ ಹಣಕಾಸಿನ ವ್ಯವಹಾರವನ್ನು ಕೈಗೆತ್ತಿಕೊಂಡ ಅಶ್ರಫ್ ತನ್ನ ಬುದ್ಧಿವಂತಿಕೆ ಹಾಗೂ ವಿವಿಧ ಯೋಜನಗಳಿಂದ ಅಫ್ಘಾನ್​ಗೆ ಹೊಸ ರೂಪವನ್ನು ತಂದು ಕೊಟ್ಟರು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೊಸ ಕರೆನ್ಸಿಗಳನ್ನು ದೇಶಕ್ಕೆ ಕೊಡಿಗೆಯಾಗಿ ಕೊಟ್ಟರು. ನೂತನವಾದ ಬಜೆಟ್ ನಿಯಮಗಳನ್ನು ಜಾರಿಗೆ ತಂದಿದ್ದರು ಅಶ್ರಫ್ ಘನಿ. ನೂತನ ಸಂಪತ್ತಿನ ಸೃಷ್ಟಿಯ ಮೂಲಕ ಬಡತನ ನಿರ್ಮೂಲನೆ ಮತ್ತು ನಾಗರಿಕರ ಹಕ್ಕುಗಳ ಸ್ಥಾಪನೆಯು ಘನಿಯ ಅಭಿವೃದ್ಧಿ ವಿಧಾನದ ಹೃದಯವಾಗಿತ್ತು. ಇದರಿಂದ ಅಶ್ರಫ್ ರವರ ಸೇವೆಯನ್ನು ಅಫ್ಘಾನಿಗಳು ಮರೆಯುವಂತಿಲ್ಲ.

2014 ರಲ್ಲಿ ಅಫ್ಘಾನ್ ಅಧ್ಯಕ್ಷರಾಗಿ ಅಶ್ರಫ್ ಆಯ್ಕೆ
ದೇಶದ ಅಭಿವೃದ್ಧಿಗೆ ಅಶ್ರಫ್​ರ ಘನಿಯ ಸತತ ಶ್ರಮ

ಶೈಕ್ಷಣಿಕ ತಜ್ಞ ಹಾಗೂ ಅರ್ಥಶಾಸ್ತ್ರಜ್ಞರಾದ ಅಶ್ರಫ್ ಘನಿ ಅಫ್ಘಾನಿಸ್ತಾನದ 14ನೇ ಅಧ್ಯಕ್ಷರಾಗಿದ್ದರು. 2014ರ ಸಪ್ಟೆಂಬರ್ 20ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ ಆಳ್ವಿಕೆಯಲ್ಲಿ ಅಫ್ಘಾನ್ ಅಭಿವೃದ್ಧಿ ಪಥವನ್ನು ಹಿಡಿದಿದ್ದಂತು ನಿಜ. ಬಡ ರಾಷ್ಟ್ರದ ಬೆಳವಣಿಗೆಗಾಗಿ ಈತ ಸುತ್ತಿದ ದೇಶಗಳಿಲ್ಲ, ಬೇಟಿಯಾಗದ ಗಣ್ಯರಿಲ್ಲ. ದೇಶವನ್ನು ಕಟ್ಟಲು ಸುದೀರ್ಘವಾಗಿ ತಪಸ್ಸು ಮಾಡಿದ್ದರು ಅಶ್ರಫ್ ಘನಿ. ಅದರಂತೆ ವಿಶ್ವದ ಬಲೀಷ್ಟರಿಂದ ದೇಶವನ್ನು ಸುಧಾರಿಸಲು ಹೂಡಿಕೆಗಳನ್ನು ತಂದಿದ್ದರು. ಅಮೆರಿಕ ಸೇನೆಯ ಬೆಳವಣೆಗೆಗೆ ಹೂಡಿಕೆ ಇಟ್ಟರೇ, ಭಾರತ ಶೈಕ್ಷಣಿಕ ಹಾಗೂ ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡಿತ್ತು. ಹೀಗೆ ಎಲ್ಲ ರಾಷ್ಟ್ರಗಳೂ ಈ ದೇಶದ ಬೆಳವಣೆಗೆಗೆ ಹಣ ಹೂಡಿಕೆ ಮಾಡಲು ಆಶ್ರಫ್ ಮೂಲ ಕಾರಣರಾಗಿದ್ದರು.

May be an image of 2 people

ಹೂಡಿಕೆಗಳು ಬರುವ ಹೊತ್ತಿಗೆ ತಾಲಿಬಾನ್ ಆಕ್ರಮಣ
ಅಶ್ರಫ್ ಅವರ ಯೋಜನೆಗಳು ಕಾರ್ಯರೂಪಕ್ಕೆ ಬರುವ ವೇಳೆ ಇದಾಗಿತ್ತು. ಬಡ ರಾಷ್ಟ್ರಗಳ ಅಭಿವೃದ್ಧಿಗಾಗಿ, ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಮುಂದಿನ ವಾರದಲ್ಲಿ ಅಫ್ಘಾನಿಸ್ತಾನಕ್ಕಾಗಿ 460 ಬಿಲಿಯನ್ ಡಾಲರ್ ಹೂಡಿಕೆಗೆ ಸಿದ್ದವಾಗಿತ್ತು. ಇದೆಲ್ಲ ಅಶ್ರಫ್ ರವರ ಅಭಿವೃದ್ಧಿ ಪಥದ ಯೋಜನೆಯೇ ಆಗಿದೆ. ಆದರೆ ಇಂದು ಅವರು ಕಟ್ಟಿದ್ದ ಸಾಮ್ರಾಜ್ಯ ನೇರವಾಗಿ ತಾಲಿಬಾನಿಗಳ ಪಾಲಾಗಿದೆ. ಯಾವ ಪರಿಸ್ಥಿತಿಯಲ್ಲಿ ಇವರ ಅನಿವಾರ್ಯ ಹೆಚ್ಚುತ್ತೋ ಆ ಸಮಯದಲ್ಲಿ ಅಧ್ಯಕ್ಷ ಕಣ್ಮರೆಯಾಗಿದ್ದಾರೆ. ತಾಯಿನಾಡನ್ನ ತೊರೆದ ಹೇಡಿ ಎನ್ನುವ ಮಾತುಗಳನ್ನು ಅಶ್ರಫ್ ಹೊತ್ತು ಹೋಗಿದ್ದಾರೆ.

ತಾಲಿಬಾನ್ ಅಕ್ರಮಣದ ಬೆನ್ನಲ್ಲಿ ಅಶ್ರಫ್ ಪರಾರಿ
ನಿಂತು ಬಗೆ ಹರೆಸುವ ಬದಲು ಅಶ್ರಫ್ ಓಡಿ ಹೋಗಿದ್ದೇಕೆ ?

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದ್ದರು. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿ, ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿರೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇಷ್ಟು ವರ್ಷಗಳ ಕಾಲ 2 ಲಕ್ಷ ಸೈನಿಕರ ಭದ್ರ ಸೇನೆ ಸ್ಥಾಪಿಸಿದ ಅಶ್ರಫ್, ಸೇನೆಯ ಜೊತೆ ನಿಂತು 75 ಸಾವಿರ ಉಗ್ರರರ ಎದುರು ಹೋರಾಡುವುದನ್ನು ಬಿಟ್ಟಿ, ಇಷ್ಟು ವರ್ಷ ಕಟ್ಟಿದ್ದ ಭದ್ರ ಕೋಟೆಯನ್ನು ತಾಲಿಬಾನಿಗಳ ಕೈಗೆ ನೇರವಾಗಿ ಕೊಟ್ಟು ಪರಾರಿಯಾಗಿದ್ದಾರೆ. ಈ ವಿಚಾರವಾಗಿ ಎಮರೇಟ್ಸ್ ನಲ್ಲಿ ಎಲ್ಲೋ ಕುಳಿತುಕೊಂಡು ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಹೀಗೆ ಮಾಡಿದೆ ಎಂದು ಹೇಳುತ್ತಿರುವುದು ಅಫ್ಘಾನ್ ನಾಗರೀಕರು ಒಪ್ಪುತ್ತಿಲ್ಲ.

ಅಶ್ರಫ್ ಪಲಾಯನದ ಹಿಂದೆ ಭ್ರಷ್ಟಚಾರದ ಮಾತುಗಳು
ಅಶ್ರಫ್ ಘನಿ, ತನ್ನ ಸರ್ಕಾರ ಸ್ಥಾಪಿಸಿದಾಗ, ಮೊದಲು ಕೈಗೊಂಡ ನಿರ್ಧಾರವೇ ಭ್ರಷ್ಟರ ಬೇಟೆ. ಆದರೆ ಇದೀಗ ಇವರ ಪರಾರಿಯ ಬೆನ್ನಲ್ಲೆ ಈತ ಒಬ್ಬ ಭ್ರಷ್ಟ ಎನ್ನುವ ಮಾತುಗಳು ಮುಗ್ಧ ನಾಗರೀಕರ ನಡುವೆ ಹರಿದಾಡುತ್ತಿವೆ. ಅವರು ಪಲಾಯನ ಮಾಡುವಾಗ 169 ಮಿಲಿಯನ್ ಡಾಲರ್ ಹಣದ ಜೊತೆಗೆ 3 ಐಷಾರಾಮಿ ಕಾರ್​​ಗಳನ್ನು ಹೊತ್ತು ಹೋಗಿದ್ದಾರೆ ಎನ್ನುವ ಮಾತುಗಳು ಶುರುವಾಗಿದ್ದವು. ಆದರೆ ಈ ಮಾತುಗಳು ಸತ್ಯಕ್ಕೆ ದೂರವಾಗಿದೆ ಎಂದು ಘನಿ ತಿಳಿಸಿದ್ದರು. ಆದರೆ ತಾಲಿಬಾನಿಗಳ ಕೈಗೆ ಸಿಲುಕಿದ್ದರೆ ಇವರ ಪರಿಸ್ಥಿತಿ ಬೀದಿ ಹೆಣವಾಗುವುದಾಗಿ ಅರಿತು ಪಲಾಯನ ಮಾಡಿದ್ದಾರೆ ಅನ್ನೋದು, ಇವರನ್ನು ಹೇಡಿ ಎನ್ನುವ ಟೀಕೆಗೆ ಸಿಲುಕಿಸಿದಂತಾಗಿದೆ.

blank

ತಮ್ಮ ಪ್ರತಿ ಮಾತಿನಲ್ಲೂ how to build broken nation ಎಂದು ತತ್ವ ಪದಗಳನ್ನು ಆಡುತ್ತಿದ್ದ ಘನಿ, ಸರಿಯಾದ ಸಮಯದಲ್ಲಿ ಪಲಾಯನ ಮಾಡಿ, ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಂತಾಗಿದೆ. ಇದರಿಂದ ಅಧ್ಯಕ್ಷ ಪದವಿಯ ಜೊತೆಗೆ ಜನರ ಮನಸ್ಸಿನಲ್ಲಿಯೂ ಸಹ ಇವರನ್ನು ಕೆಳಗಿಸಿದಂತಾಗಿದೆ. ಅವರು ಪಲಾಯನ ಮಾಡಲು ವೈಯುಕ್ತಿಕ ಕಾರಣಗಳಿದ್ದರೂ ದೇಶವನ್ನು, ದೇಶದ ಪ್ರಜೆಗಳನ್ನು ಈ ಪರಿಸ್ಥಿತಿಗೆ ಸಿಲುಕಿಸಿ ಹೋಗಿರೋದು ಸಹಿಸಲಾರದ ವಿಷಯ. ಆದರೆ ಅಫ್ಘಾನಿಸ್ತಾನದ ಅಸಲಿ ಅಭಿವೃದ್ಧಿಗೆ ಇವರು ಕಾರಣ ಅನ್ನೋದನ್ನು ಮರೆಯುವಂತಿಲ್ಲ

Source: newsfirstlive.com Source link