ಈರುಳ್ಳಿ ಬೆಳೆಗೆ ಬಂತು ವಿಚಿತ್ರ ರೋಗ.. ಮಗಳ ಕಿವಿಯೋಲೆ ಒತ್ತೆಯಿಟ್ಟಿದ್ದ ರೈತ ಕಂಗಾಲು

ಈರುಳ್ಳಿ ಬೆಳೆಗೆ ಬಂತು ವಿಚಿತ್ರ ರೋಗ.. ಮಗಳ ಕಿವಿಯೋಲೆ ಒತ್ತೆಯಿಟ್ಟಿದ್ದ ರೈತ ಕಂಗಾಲು

ದಾವಣಗೆರೆ: ಆ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದ.. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ. ಫಸಲು ಕೂಡ ಉತ್ತಮವಾಗಿ ಬಂದಿತ್ತು.. ಬಂದ ಫಸಲನ್ನ ಮಾರಿ ಇರೋ ಸಾಲ ತೀರಿಸಬೇಕು ಅನ್ನೋಷ್ಟರಲ್ಲಿ ರೈತನ ಬಾಳಿಗೆ ಕೋತಿರೋಗ ಕೊಳ್ಳಿ ಇಟ್ಟಿದೆ‌‌..

ರೈತ ತನ್ನ ಜಮೀನಿಗೆ ಸಾವಯವ ಗೊಬ್ಬರ ಹಾಕಿದ್ದ.. ಭೂಮಿಯನ್ನ ಫಲವತ್ತತೆಗೊಳಿಸಿ 25 ಸಾವಿರ ರೂಪಾಯಿ ಹಣ ಖರ್ಚು ಮಾಡಿ ಬೀಜ ಗೊಬ್ಬರ ತಂದಿದ್ದ.. 2 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಫಸಲು ಕೂಡ ಉತ್ತಮವಾಗಿ ಬರೋ ಹಂತದಲ್ಲಿತ್ತು.. ಇನ್ನೂ ಹದಿನೈದು ದಿನ ಕಳೆದಿದ್ದರೆ ಸುಮಾರು 50 ಕ್ವಿಂಟಾಲ್ ಈರುಳ್ಳಿ ರೈತನ ಕೈ ಹಿಡಿಯಲಿತ್ತು.. ಆದರೆ ಈರುಳ್ಳಿಗೆ ಕೋತಿ ರೋಗ ಬಂದು ಜಮೀನಿನಲ್ಲೇ ಕೊಳೆಯುವಂತೆ ಮಾಡಿದೆ.

blank

ಆದ್ರೂ ರೈತ ಏಕಾಂತಪ್ಪ ದೃತಿಗೆಡದೆ ಮಗಳ ಕಿವಿಯೋಲೆ ಒತ್ತೆಯಿಟ್ಟು 16 ಸಾವಿರ ರೂಪಾಯಿ ಹಣ ತಂದಿದ್ದ.. ಅದೇ ಹಣದಲ್ಲಿ ಔಷದಿ ಕೂಡಾ ಸಿಂಪಡಣೆ ಮಾಡಿದ್ದ.. ಆದರೂ ಯಾವುದೇ ಪ್ರಯೋಜನವಾಗಿಲ್ಲ.. ಸಾಲ ಸೂಲ ಮಾಡಿ ಬೆಳೆದ ಬೆಳೆ ಈಗ ಮಣ್ಣು ಪಾಲಾಗುವ ಆತಂಕ ತರಿಸಿದೆ.

blank

ಏಕಾಂತಪ್ಪನಂತೆ ಜಗಳೂರಿನಾದ್ಯಂತ ಈರುಳ್ಳಿ ಬೆಳೆಗಾರರ ಪರಿಸ್ಥಿತಿ ಇದೆ ಆಗಿದೆ.. ಜಗಳೂರು ತಾಲೂಕಿನಲ್ಲೆ ಸುಮಾರು 900ಕ್ಕೂ ಅಧಿಕ ಎಕರೆಯಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದರು. ಮಳೆ ಇಲ್ಲದೆ ಯಾವಾಗಲೂ ಮೋಡ ಮುಸುಕಿದ ವಾತಾವರಣದಿಂದ ಈರುಳ್ಳಿಗೆ ಕೋತಿ ರೋಗ ಬಂದಿದೆಯಂತೆ.. ಇಷ್ಟೆಲ್ಲ ಕಷ್ಟ ಅನುಭವಿಸ್ತಿದ್ರು, ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ..

blank

ಒಮ್ಮೆ ಅತಿವೃಷ್ಠಿ ಆದರೆ ಮತ್ತೊಮ್ಮೆ ಅನಾವೃಷ್ಠಿ.. ಉತ್ತಮ ಬೆಳೆ ಬೆಳೆದಾಗ ರೋಗದ ಸಮಸ್ಯೆ.. ಹೀಗೆ ರೈತರು ಕಷ್ಟದಲ್ಲೆ ಹುಟ್ಟಿ, ಕಷ್ಟದಲ್ಲೆ ಮುಳುಗುವಂತಾಗಿದೆ.. ಇನ್ನೂ ಸರ್ಕಾರದಿಂದ ಬರೋ ಪುಡಿಗಾಸು ಪರಿಹಾರ ಯಾವುದಕ್ಕೂ ಆಗಲ್ಲ.. ಇನ್ನಾದ್ರೂ ಸರ್ಕಾರ ಎಚ್ಚೆತ್ತು, ಕಷ್ಟದಲ್ಲಿರೋ ರೈತರ ಕಣ್ಣೀರು ಒರೆಸಬೇಕಿದೆ..

Source: newsfirstlive.com Source link