ಜಲಸಂಪನ್ಮೂಲ ಇಲಾಖೆಯಿಂದಲೇ ನಿಯಮ ಉಲ್ಲಂಘನೆ; KRS​ ಹಿನ್ನೀರಿನಲ್ಲಿ ಸೇಲಿಂಗ್​ ಕಾಂಪಿಟೇಷನ್

ಜಲಸಂಪನ್ಮೂಲ ಇಲಾಖೆಯಿಂದಲೇ ನಿಯಮ ಉಲ್ಲಂಘನೆ; KRS​ ಹಿನ್ನೀರಿನಲ್ಲಿ ಸೇಲಿಂಗ್​ ಕಾಂಪಿಟೇಷನ್

ಮೈಸೂರು: ಜಲಸಂಪನ್ಮೂಲ ಇಲಾಖೆಯಿಂದಲೇ ನಿಯಮ ಉಲ್ಲಂಘಿಸಿ ಕೆಆರ್​ಎಸ್​ ಡ್ಯಾಂ ಹಿನ್ನೀರಿನಲ್ಲಿ ನ್ಯಾಷಿನಲ್​ ಸೆಲ್ಲಿಂಗ್​ ಕಾಂಪಿಟೇಷನ್​ಗೆ ಅವಕಾಶ ಮಾಡಿಕೊಟ್ಟು, ಸರ್ಕಾರದ ನಿಯಮವನ್ನ ಉಲ್ಲಂಘನೆ ಮಾಡಲಾಗಿದೆ.

ರಾಯಲ್ ಸೆಲ್ಲಿಂಗ್ ಕ್ಲಬ್‌ಗೆ, ಜಲಸಂಪನ್ಮೂಲ ಇಲಾಖೆ ನ್ಯಾಷಿನಲ್​ ಸೈಲಿಂಗ್​ಗೆ ಅವಕಾಶ ನೀಡಿದೆ. ಇಂದಿನಿಂದ ಆರಂಭವಾಗಲಿರುವ ಸೆಲ್ಲಿಂಗ್ ನೌಕಾಯಾನ ಚಟುವಟಿಕೆ ಮತ್ತು ಒಲಂಪಿಕ್ನಲ್ಲಿ ಭಾಗವಹಿಸುವಿಕೆಯನ್ನ ಉತ್ತೇಜಿಸಲು ರಾಷ್ಟ್ರೀಯ ರೆಗಟ್ಟಾ ನಡೆಸಲು ಅವಕಾಶ ನೀಡಲಿದ್ದು, ಇಂದು ಮತ್ತು ನಾಳೆ ಸೇರಿ ಮೂರು ದಿನಗಳ ಕಾಲ ನಡೆಸಲು ಇಲಾಖೆ ಅವಕಾಶ ನೀಡಿದೆ. ಇಲಾಖೆ ವಿಧಿಸಿರೋ ಷರತ್ತುಗಳನ್ನ ಉಲ್ಲಂಘನೆ ಮಾಡಿ ರೆಗಟ್ಟಾ ಆಯೋಜನೆ ಮಾಡಲಾಗಿದೆ. ಡ್ಯಾಂನ 1.5 ಕಿಮೀ ವ್ಯಾಪ್ತಿ ಈಗಲೂ ನಿರ್ಬಂಧಿತ ಪ್ರದೇಶ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಆದ್ರೆ, ಈಗ ನಡೆಯುತ್ತಿರುವ ರೆಗಟ್ಟಾ ಡ್ಯಾಂನಿಂದ ಕೇವಲ 500, 600 ಮೀಟರ್ ದೂರದಲ್ಲಿದೆ.

blank

ಇನ್ನೂ, ಈ ಸ್ಪರ್ಧೆ ಆಯೋಜನೆ ಬಗ್ಗೆ, ಪ್ರಶ್ನೆ ಕೇಳಿದ್ರೆ, ಆಯೋಜಕರಿಂದ ಉಡಾಫೆ ಉತ್ತರ ಸಿಕ್ಕದೆ. ಅನುಮತಿ ಪತ್ರಗಳನ್ನ ನೀಡದೆ ಅಧಿಕಾರಿಯನ್ನೇ ಆಯೋಜಕ ಪ್ರಶ್ನಿಸಿದ್ದಾನೆ. ನೀರಾವರಿ ಇಲಾಖೆ ಅಧಿಕಾರಿ ಸುರೇಶ್ ಬಾಬು ಅನುಮತಿ ಪತ್ರ ಕೇಳಿದ್ದಕ್ಕೆ ಉಡಾಫೆ ಉತ್ತರ.. ನಾನು‌ ಇಲ್ಲೇ ಇದ್ದೀನಿ, ಎನಿ ಟೈಮ್ ಯು ಕ್ಯಾನ್ ಅರೆಸ್ಟ್ ಮೀ ಅಂತ ಡಾ.ಅರವಿಂದ್ ಶರ್ಮ ಎಂಬುವವರಿಂದ ಉದ್ಧಟತನದ ವರ್ತನೆ ನೀಡಿದ್ದಾನೆ.  ನಿಮಗೆ ಏನ್ ಬೇಕು ರೈಟಿಂಗ್​ನಲ್ಲಿ ನೋಟೀಸ್ ಕೊಡಿ. ನಿಮ್ಮ ಇಲಾಖೆ ಮೇಲೆ ನಿಮಗೆ ಬೆಲೆಯಿಲ್ಲ, ಕಾವೇರಿ ನೀರಾವರಿ ನಿಗಮವೆ ನಮಗೆ ಅನುಮತಿ ನೀಡಿದೆ. ದಾಖಲಾತಿಗಳನ್ನೆಲ್ಲ ಇಲಾಖೆಯ ಕಚೇರಿಗೆ ತಲುಪಿಸಿದ್ದೇನೆ, ನನ್ನನ್ನೇನು ನೀವು ಕೇಳುವಂತಿಲ್ಲ ಎಂದು ಅಧಿಕಾರಿಯನ್ನೇ ಆಯೋಜಕ ವಾಪಸ್ಸು ಕಳುಹಿಸಿದ್ದಾನೆ ಎನ್ನಲಾಗಿದೆ

ವೀಕೇಂಡ್ ಕರ್ಫ್ಯೂಗೆ ಡೋಂಟ್ ಕೇರ್..

ಜಿಲ್ಲೆಯಲ್ಲಿ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಬಗ್ಗೆ ಕೊಂಚವೂ ಪಾಲಿಸದೇ, ನೂರಾರು ಜನರನ್ನು ಸೇರಿಸಿಕೊಂಡು ಸೈಲಿಂಗ್ ಸ್ಪರ್ಧೆಯನ್ನ ನಡೆಸಿದ್ದಾನೆ. ಸ್ಪರ್ಧೆ ನಡೆಯುತ್ತಿರುವ ಸ್ಥಳ ಮೈಸೂರಿಗೆ ಸೇರಿದ್ದರು ತಡೆಯಲು ಇಲ್ಲಿಯವರೆಗೂ ಪೊಲೀಸರು ಬಂದಿಲ್ಲ?  ಕೆ.ಆರ್.ಎಸ್ ಡ್ಯಾಂ 1.5 ಕಿ ಮೀ ವ್ಯಾಪ್ತಿ ಈಗಲೂ ನಿರ್ಬಂಧಿತ ಪ್ರದೇಶ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಸಲು ಅವಕಾಶ ಇಲ್ಲ.ಆದ್ರೆ ಈಗ ನಡೆಯುತ್ತಿರುವ ಸೈಲಿಂಗ್ ಸ್ಪರ್ಧೆ ಡ್ಯಾಂ ನಿಂದ ಕೇವಲ 500, 600 ಮೀಟರ್ ದೂರದಲ್ಲಿದ್ದರೂ, ಹಲವು ಅನುಮಾನಗಳಿಗೆ ಎಡೆಮಾಡುಕೊಡುತ್ತಿದೆ ಅಧಿಕಾರಿಗಳ ನಡೆ..

Source: newsfirstlive.com Source link