ದೆಹಲಿಯಲ್ಲಿ ಧಾರಾಕಾರ ಮಳೆ- ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ

ನವದೆಹಲಿ: ಭರ್ಜರಿ ಮಳೆಗೆ ದೆಹಲಿ ಮತ್ತೊಮ್ಮೆ ಜಲಾವೃತವಾಗಿದೆ. ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರಸ್ತೆಗಳು, ಅಂಡರ್‍ ಪಾಸ್‍ಗಳಲ್ಲಿ ನೀರು ತುಂಬಿದೆ.

ಮಳೆಯ ಆರ್ಭಟದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ದೆಹಲಿಯ ಜೊತೆಗೆ ನೆರೆಯ ಹರಿಯಾಣ, ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲೂ ವರ್ಷಧಾರೆಯಾಗಿದೆ. ಇತ್ತ ಬೆಂಗಳೂರಿನಲ್ಲೂ ತುಂತುರು ಮಳೆಯಾಯ್ತು. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇವತ್ತು ಮಳೆ ಸುರೀತು. ಹೆಬ್ಬಾಳ, ಕೆ.ಆರ್.ಪುರ, ಹಲಸೂರು ಸುತ್ತಮುತ್ತ ವರುಣ ಅಬ್ಬರಿಸಿದ್ರೆ ಉಳಿದೆಡೆ ತುಂತುರು ಮಳೆಯಾಯ್ತು. ಚಿಕ್ಕಬಳ್ಳಾಪುರ ನಗರದಲ್ಲಿ ತುಂತುರು ಮಳೆಯಾದ್ರೆ, ಗೌರಿಬಿದನೂರು, ಶಿಢ್ಲಘಟ್ಟ ತಾಲೂಕಿನಲ್ಲಿ ಮಳೆ ಜೋರಾಗಿತ್ತು. ಸಂಜೆ ವೇಳೆಗೆ ಮೈಸೂರಿನಲ್ಲೂ ವರುಣ ಅಬ್ಬರಿಸಿದ. ಹಾಸನದಲ್ಲೂ ಮಳೆರಾಯ ಏಕಾಏಕಿ ಧೋ ಅಂತ ಸುರಿದ್ರೆ, ರಾಮನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿತು. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಆ.22ವರೆಗೆ ಕೆಲವು ಕಡೆ ಮಳೆಯಾಗುವ ಸಾಧ್ಯತೆಯಿದ್ದು, ಬಳಿಕ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ

ಇಂದು ರಾತ್ರಿ, ನಾಳೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮಂಡ್ಯ ಭಾಗದಲ್ಲಿ ಭಾರೀ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ಭಯಾನಕವಾಗಿ ಕುಸಿದ ಗುಡ್ಡ- ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರ ವೀಡಿಯೋ ವೈರಲ್

Source: publictv.in Source link