ಐ ಲವ್ ತಾಲಿಬಾನ್ ಎಂದು ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

ಬಾಗಲಕೋಟೆ: ಐ ಲವ್ ತಾಲಿಬಾನ್ ಎಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದ ಜಮಖಂಡಿಯ ಆಸೀಫ್ ಗಲಗಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಆಸೀಫ್ ಗಲಗಲಿ, ಅವಿವೇಕಿ ತಾಲಿಬಾನ್ ಉಗ್ರರ ಬಗ್ಗೆ ಪ್ರೀತಿ ತೋರಿದ್ದನು. ಈತ ತನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ ಐಲವ್ ತಾಲಿಬಾನಿ ಎಂದು ಬರೆದುಕೊಂಡಿದ್ದ. ಈ ಪೋಸ್ಟ್ ವೈರಲ್ ಆಗಿತ್ತು. ಈ ಬಗ್ಗೆ ಸ್ವ ಸಮುದಾಯದವರು ಈತನ ದೇಶದ್ರೋಹ ಕೃತ್ಯವನ್ನು ಖಂಡಿಸಿದ್ದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಿರುಕುಳ ಹಿನ್ನೆಲೆಯಲ್ಲಿ ಅಫ್ಘಾನ್ ದೇಶ ಬಿಟ್ಟು ಜನ ಓಡಿ ಹೋಗುತ್ತಿದ್ದಾರೆ. ಹೀಗಿರುವಾಗ ತಾಲಿಬಾನಿಗಳ ಮೇಲೆ ಪ್ರೀತಿ ತೋರಿದ್ದಕ್ಕೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿತ್ತು. ಈ ಪೋಸ್ಟ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಾಪತ್ತೆಯಾಗಿದ್ದ ಆಸೀಫ್ ಗಲಗಲಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಮಖಂಡಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Source: publictv.in Source link