ಲಾರಿ-ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ; ಟ್ರ್ಯಾಕ್ಟರ್​ ಚಾಲಕ ಗಂಭೀರ

ಲಾರಿ-ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ; ಟ್ರ್ಯಾಕ್ಟರ್​ ಚಾಲಕ ಗಂಭೀರ

ದಾವಣಗೆರೆ: ಲಾರಿ ಹಾಗೂ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿ ಟ್ರಾಕ್ಟರ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನಡೆದಿದೆ.

 

ಜಗಳೂರಿನ, ದೊಣೆಹಳ್ಳಿ ಗ್ರಾಮದ ಬಳಿ ಟ್ರ್ಯಾಕ್ಟರ್​ ಹಾಗೂ ಲಾರಿ ಮುಖಾಮುಖಿಯಾಗಿವೆ. ಮುಸ್ಟೂರು ಕಡೆಯಿಂದ ದೊಣೆಹಳ್ಳಿ ಕಡೆಗೆ ಹೊಗುತ್ತಿದ್ದ ಟ್ರ್ಯಾಕ್ಟರ್​ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿಯಾಗಿ ಟ್ರಾಕ್ಟರ್ ಚಾಲಕ ಮಧು ಎಂಬಾತ ಗಂಭೀರ ಗಾಯಗೊಂಡಿದ್ದಾನೆ. ಸದ್ಯ, ಗಾಯಳು ಚಾಲಕನನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಅಲ್ಲದೇ, ಈ ಸಂಬಂಧ ಜಗಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link