ಭಾರತದಿಂದ ಅಫ್ಘಾನಿಸ್ತಾನಕ್ಕೆ 2 ವಿಮಾನಗಳ ಹಾರಾಟ.. 300 ಭಾರತೀಯರು ಸೇಫ್​

ಭಾರತದಿಂದ ಅಫ್ಘಾನಿಸ್ತಾನಕ್ಕೆ 2 ವಿಮಾನಗಳ ಹಾರಾಟ.. 300 ಭಾರತೀಯರು ಸೇಫ್​

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಕಾಬೂಲ್‌ನಿಂದ ದಿನಕ್ಕೆ ಎರಡು ವಿಮಾನಗಳು ಕಾರ್ಯ ನಿರ್ವಹಿಸಲು ಭಾರತಕ್ಕೆ ಯುಎಸ್ ಮತ್ತು ನ್ಯಾಟೋ ಪಡೆಗಳು ಅನುಮತಿ ನೀಡಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಮೂಲಕ ಭಾರತ ಸರ್ಕಾರ ತನ್ನ ಪ್ರಜೆಗಳನ್ನ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆಗಸ್ಟ್ 15 ರಂದು ತಾಲಿಬಾನ್ ಕಾಬೂಲ್ ವಶಪಡಿಸಿಕೊಂಡ ನಂತರ ವಿವಿಧ ದೇಶಗಳು ತಮ್ಮ ಜನರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿವೆ. ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ಅಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಯುಎಸ್ ಮತ್ತು ನ್ಯಾಟೋ ಪಡೆಗಳು ನಿರ್ವಹಿಸುತ್ತಿರುವ ಕಾಬೂಲ್ ವಿಮಾನ ನಿಲ್ದಾಣವು ಅಸ್ತವ್ಯಸ್ತಗೊಂಡಿದೆ.

300ಕ್ಕೂ ಹೆಚ್ಚು ಭಾರತೀಯರನ್ನು ಕಾಬೂಲ್‌ನಿಂದ ಕರೆದುಕೊಂಡು ಬರಬೇಕಾಗಿದೆ ಎಂದು ವರದಿಗಳು ಹೇಳಿವೆ. ಭಾರತೀಯ ವಾಯುಪಡೆಯು ಈಗಾಗಲೇ ಅಫ್ಘಾನಿಸ್ತಾನದ ರಾಯಭಾರಿ ಮತ್ತು ಇತರೆ ಎಲ್ಲ ರಾಜತಾಂತ್ರಿಕರನ್ನು ಒಳಗೊಂಡಂತೆ ಸುಮಾರು 180 ಪ್ರಯಾಣಿಕರನ್ನು ಸ್ಥಳಾಂತರಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಭಾರತೀಯರನ್ನ ಕರೆದುಕೊಂಡು ಬರುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

Source: newsfirstlive.com Source link