‘ನೀನು ನನ್ನ ಲವ್ವರ್ ನಂತಿಲ್ಲ, ಬೇರೆ ಮದ್ವೆ ಆಗು’ ಎಂದು ಟಾರ್ಚರ್ -ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

‘ನೀನು ನನ್ನ ಲವ್ವರ್ ನಂತಿಲ್ಲ, ಬೇರೆ ಮದ್ವೆ ಆಗು’ ಎಂದು ಟಾರ್ಚರ್ -ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ‘ಪ್ಲೀಸ್​ ನನಗೆ ನೀನಂದ್ರೆ ಇಷ್ಟ ಇಲ್ಲ, ನಿನಗೆ ನಾನೇ ನಿಂತು ಇನ್ನೊಂದು ಮದುವೆ ಮಾಡ್ತೀನಿ, ಬೇರೆ ಮದುವೆಯಾಗಿ ಆರಾಮಾಗಿರು.. ನನ್ನ ಬಿಟ್ಟು ಬಿಡು’ ಈ ಮಾತುಗಳನ್ನ ಕೇಳಿದ್ರೆ ನೀವು ಯಾರೋ ಒಬ್ಬ ಪ್ರೇಮಿ ತನ್ನ ಪ್ರಿಯಕರನಿಗೋ, ಪ್ರಿಯಕರ ಪ್ರಿಯತಮೆಗೋ ಹೇಳ್ತಿರಬಹುದು ಎಂದೆನಿಸಬಹುದು. ಆದರೆ ಈ ಮಾತುಗಳನ್ನು ಸ್ವತಃ ಗಂಡನಾದವ ತನ್ನ ಹೆಂಡತಿಗೆ ಹೇಳ್ತಿದ್ದಾನಂದ್ರೆ ನೀವು ನಂಬಲೇಬೇಕು!

ಇದನ್ನೂ ಓದಿ: ತಾಲಿಬಾನಿಗಳಿಗೆ IMF ಗುನ್ನಾ; ‘ಆರ್ಥಿಕ ಚಕ್ರವ್ಯೂಹ’ದ ಸ್ಟ್ರೋಕ್​ಗೆ ಉಗ್ರ ಸಂಘಟನೆ ಕಂಗಾಲು..!

ಹೌದು ಮದುವೆಯಾದ ಗಂಡನಿಂದಲೇ ಇನ್ನೊಂದು ಮದುವೆಯಾಗುವಂತೆ ಪತ್ನಿಗೆ ಟಾರ್ಚರ್ ನೀಡ್ತಿರುವ ಘಟನೆ ನಗರದಲ್ಲಿ ನಡೆದಿದೆ. ನನಗೆ ನೀನು ಇಷ್ಟ ಇಲ್ಲ. ನೀನು ನನ್ನ ಲವ್ವರ್ ಥರಾ ಇಲ್ಲ. ನಾನೇ ಇನ್ನೊಬ್ಬ ಹುಡ್ಗನನ್ನ ನೋಡ್ತೀನಿ, ಪ್ಲೀಸ್ ಅವನನ್ನ ಮದುವೆಯಾಗು ಅಂತೀರೋ ಗಂಡನ ವಿರುದ್ಧ ಪತ್ನಿ ಪೊಲೀಸ್​ಠಾಣೆಯ ಮೆಟ್ಟಿಲೇರಿದ್ದಾಳೆ.

ಇದನ್ನೂ ಓದಿ: ಆತುರದಲ್ಲಿ ಯಡವಿದ ಬೈಡನ್! ಆಘ್ಫಾನ್​​ನಲ್ಲಿ ತಾಲಿಬಾನಿ​ಗಳಿಂದ ಅಮೆರಿಕ ಬಂದೂಕುಗಳ ಮೆರವಣಿಗೆ..!

‘ನೀನು ನನ್ನ ಲವ್ವರ್ ನಂತಿಲ್ಲ’
‌25 ಮಹಿಳೆಯೊಬ್ಬರು ಕಳೆದ ವರ್ಷ ಡಿಸೆಂಬರ್​ನಲ್ಲಿ ವಿಶ್ವಾಸ್ ಎಂಬಾತನನ್ನ ಮದುವೆಯಾಗಿದ್ದರು.  ಮದುವೆಯಾಗಿ 8 ತಿಂಗಳು ಕಳೆದರೂ ಪತ್ನಿಯ ಜೊತೆ ವಿಶ್ವಾಸ್ ಸಾಂಸಾರಿಕ ಜೀವನ ನಡೆಸದೇ ಬೇರೆ ಮದುವೆಯಾಗುವಂತೆ ಟಾರ್ಚರ್​ ನೀಡ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪ್ರಾಧ್ಯಾಪಕರಾಗಿದ್ದ ಘನಿ ಮುರಿದು ಬಿದ್ದಿದ್ದ ಅಫ್ಘಾನ್ ದೇಶ ಕಟ್ಟಿದ ಕನಸಿನ ರೋಚಕ ಕಥೆ..!

ಗಂಡನ ಈ ನಡೆ ಕುರಿತು ಪ್ರಶ್ನಿಸಿದ್ದಕ್ಕೆ ನೀನು ನನಗೆ ಇಷ್ಟವಿಲ್ಲ. ಹಿರಿಯರ ಒತ್ತಾಯಕ್ಕೆ ನಿನ್ನನ್ನ ಮದುವೆಯಾದೆ. ನಿನ್ನ ಮದುವೆಗೂ ಮೊದಲು ನಾನು ಬೇರೆ ಯುವತಿಯನ್ನ ಲವ್ ಮಾಡ್ತಿದ್ದೆ. ನೀನು ನನ್ನ ಲವ್ವರ್ ನಂತಿಲ್ಲ, ಅವಳಿಗೂ ನಿನಗೂ ಹೋಲಿಕೆಯೇ ಆಗಲ್ಲ. ದಯಮಾಡಿ ನನ್ನ ಬಿಟ್ಬಿಡು ಅಂತ ಪತ್ನಿಗೆ ಕಿರುಕುಳ ನೀಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಗಂಡನ ಮನವೊಲಿಸಲು ಯತ್ನಿಸಿ ವಿಫಲವಾದ ಪತ್ನಿ ಕೊನೆಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮೂರು ಬಾರಿ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಈಕೆಯ ಪವರ್​ನ ಸೀಕ್ರೆಟ್ ‘ಸೆಕ್ಸ್’​

ಇದನ್ನೂ ಓದಿ: ಚೀನಾ-ತಾಲಿಬಾನ್-ಪಾಕಿಸ್ತಾನ ದುಷ್ಟಕೂಟ ಒಂದಾದ್ರೆ ಭಾರತದ ಮೇಲೆ ಏನು ಪರಿಣಾಮ ಬೀರುತ್ತೆ?

Source: newsfirstlive.com Source link