ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

ಟೀಮ್ ಇಂಡಿಯಾದ ನೆಕ್ಸ್ಟ್​​​ ಕೋಚ್ ಯಾರು..? ಈ ಒಂದು ಪ್ರಶ್ನೆ, ಕೆಲ ದಿನಗಳಿಂದ ಪದೇ ಪದೇ ಕೇಳಿ ಬರ್ತಿದೆ. ಆದ್ರೀಗ ಈ ಕೋಚ್​ ರೇಸ್​ನಲ್ಲಿ ಅಚ್ಚರಿಯ ಹೆಸರೊಂದು ಕೇಳಿ ಬರ್ತಿದೆ. ಅವ್ರೇ ಕೋಚ್ ಆದರೂ ಅಚ್ಚರಿ ಇಲ್ಲ ಅಂತಿವೆ ಮೂಲಗಳು.

ಟೀಮ್ ಇಂಡಿಯಾದ ಹೆಡ್ ಕೋಚ್ ಯಾರ್​ ಆಗ್ತಾರೆ ಅನ್ನೋದು, ತೀವ್ರ ಚರ್ಚೆಯಾಗ್ತಿದೆ. ಟಿ20 ವಿಶ್ವಕಪ್​​ ನಂತರ, ರವಿ ಶಾಸ್ತ್ರಿ ಅಧಿಕಾರಾವಧಿ ಕೊನೆಗೊಳ್ಳಲಿದೆ. ರಾಹುಲ್ ದ್ರಾವಿಡ್, ಎನ್​ಸಿಎ ನಿರ್ದೇಶಕರ ಮರು ಆಯ್ಕೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರ್​ ಆಗ್ತಾರೆ ಎಂಬ ಪ್ರಶ್ನೆಯ ಚರ್ಚೆ ಮತ್ತಷ್ಟು ಕಾವೇರಿದೆ. ಇಂತಹ ಪರಿಸ್ಥಿತಿಯಲ್ಲಿ ಅಚ್ಚರಿಯ ಹೆಸರೊಂದು ಮುಂಚೂಣಿಗೆ ಬಂದಿದೆ. ಅದು ಬೇಱರು ಅಲ್ಲ..! ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್, ವಿಕ್ರಮ್ ರಾಥೋರ್​.

ಇದನ್ನೂ ಓದಿ: ಶಾಸ್ತ್ರಿ ನಿರ್ಗಮನದಿಂದ ಕೊಹ್ಲಿ ನಾಯಕತ್ವಕ್ಕೆ ಸಂಚಕಾರ..! ನಾಯಕತ್ವದಿಂದ ಕೆಳಗಿಳಿಯುತ್ತಾರಾ ವಿರಾಟ್?

ಹೌದು..! ಕೋಚ್ ರವಿ ಶಾಸ್ತ್ರಿ ಪುನರ್​ ಆಯ್ಕೆ ಬಯಸಿಲ್ಲ. ಇನ್ನೊಂದೆಡೆ ಕೋಚ್​​ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದ ದಿ ಗ್ರೇಟ್​ ವಾಲ್​​ ದ್ರಾವಿಡ್ ಕೂಡ, ಎನ್‌ಸಿಎ ನಿರ್ದೇಶಕರಾಗಿ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಹಲವರು ಟೀಮ್ ಇಂಡಿಯಾ ಕೋಚ್​ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕೂಡ ಒಬ್ಬರಾಗಿದ್ದಾರೆ.

Image

ಎನ್​​ಸಿಎ ನಿರ್ದೇಶಕರ ಹುದ್ದೆಗೆ ರಾಹುಲ್ ದ್ರಾವಿಡ್, ಮರು ಅರ್ಜಿ ಸಲ್ಲಿಕೆ ವಿಕ್ರಮ್ ರಾಥೋರ್ ಭಾರೀ ಲಾಭವೇ ಆಗಲಿದೆ. ಇದನ್ನೇ ಎನ್​ಕ್ಯಾಶ್ ಮಾಡಿಕೊಳ್ಳುವ ಲೆಕ್ಕಚಾರದಲ್ಲಿರುವ ವಿಕ್ರಮ್ ರಾಥೋರ್, ಹೆಡ್ ಕೋಚ್​ ಹುದ್ದೆಗೆ ಬಡ್ತಿ ಪಡೆಯುವ ಪ್ಲಾನ್​ನಲ್ಲಿದ್ದಾರೆ. ಅದ್ರಲ್ಲೂ ರವಿ ಶಾಸ್ತ್ರಿ ಸಹಾಯಕ ಬ್ಯಾಟಿಂಗ್​​ ಕೋಚ್ ಆಗಿ ಸಕ್ಸಸ್​ ಕಂಡಿರುವ ವಿಕ್ರಮ್, ಹೆಡ್​​​​​​​​​​ ಕೋಚ್ ಆಗಿ ನೇಮಕವಾದರೂ ಅಚ್ಚರಿ ಇಲ್ಲ ಅಂತಿವೆ ಮೂಲಗಳು..!

ಇದನ್ನೂ ಓದಿ: IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

ಹೌದು..! 2019, ಸೆಪ್ಟೆಂಬರ್​ನಿಂದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸ್ತಿರುವ ವಿಕ್ರಮ್ ರಾಥೋರ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದರಲ್ಲದೆ ಸಹ ಆಟಗಾರರೊಂದಿಗೂ, ಉತ್ತಮ ಬಾಂಧವ್ಯ ಹೊಂದಿರುವ ವಿಕ್ರಮ್, ಆಟಗಾರರನ್ನ ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಿ ನೇಮಕಗೊಂಡರೆ, ಉತ್ತಮ ಸಮನ್ವಯತೆ ಸಾಧಿಸಹುದಾಗಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯ ಆಪ್ತರೂ ಆಗಿರುವ ವಿಕ್ರಮ್ ರಾಥೋರ್​​ಗೆ ಬಿಗ್​ಬಾಸ್​​ಗಳ ಕೃಪಾಕಟಾಕ್ಷವೂ ಇದೆ. ಇದಲ್ಲದೆ ಹಿಂದೆ ಹಿಮಾಚಲ ಪ್ರದೇಶದ ಕೋಚ್ ಆಗಿ, ಸದ್ಯ ಟೀಮ್ ಇಂಡಿಯಾದ ಬ್ಯಾಟಿಂಗ್​​ ಕೋಚ್ ಆಗಿ ಸಕ್ಸಸ್​​​ ಕಂಡಿದ್ದಾರೆ. ಮತ್ತೊಂದೆಡೆ ಭಾರತೀಯ ಕೋಚ್ ಬಗ್ಗೆ ಬಿಸಿಸಿಐ ಒಲವು ತೋರಿದೆ. ಇದೆಲ್ಲವೂ ವಿಕ್ರಮ್ ರಾಥೋರ್​ ಕೈಹಿಡಿಯಲಿವೆ ಅಂತಾ ಹೇಳಲಾಗ್ತಿದೆ. ಒಟ್ನಲ್ಲಿ ಸದ್ಯ ಹಲವು ದಿಗ್ಗಜರು ಟೀಮ್ ಇಂಡಿಯಾ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಅಂತಿಮವಾಗಿ ಯಾರಿಗೆ ಬಿಸಿಸಿಐ ಮಣೆಹಾಕುತ್ತೆ ಅನ್ನೋದು ವಿಶ್ವಕಪ್ ಬಳಿಕವಬೇ ಗೊತ್ತಾಗಲಿದೆ.

ಇದನ್ನೂ ಓದಿ: ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

Source: newsfirstlive.com Source link