ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಯತ್ನಾಳ್

– ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ?

ವಿಜಯಪುರ: ನನಗೆ ಗುಂಡು ಹೊಡೆಯುವದಾದ್ರೆ ಹೊಡೆದು ಹಾಕಿ. ಆದ್ರೆ ಗಣೇಶ ಚತುರ್ಥಿಯನ್ನು ವಿಜೃಂಬಣೆಯಿಂದ ನಾವು ಆಚರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೆಡ್ಡು ಹೊಡೆದಿದ್ದಾರೆ.

ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯತ್ನಾಳ್, ಕೊರೊನಾದ ಹೆಸರಲ್ಲಿ ನಿಮ್ಮ ನಿರ್ಬಂಧನೆಗಳು ಕೇವಲ ಗಣೇಶ ಚತುರ್ಥಿಗೆ ಮೀಸಲಾಗಿವೆ. ಬೇರೆ ಹಬ್ಬಗಳಿಗೆ ಅದು ಅನ್ವಯ ಆಗೋದಿಲ್ಲವಾ? ಕೇವಲ ಹಿಂದು ಹಬ್ಬಗಳಿಂದಲೇ ಕೊರೊನಾ ಹರಡುತ್ತಾ ಎಂದು ಪ್ರಶ್ನಿಸಿದ್ದಾರೆ. ನಮ್ಮ ವಿಜಯಪುರ ನಗರ ವ್ಯಾಕ್ಸಿನೇಷನ್ ನಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. 10 ಸಾವಿರ ಜನರನ್ನ ಸೇರಿಸಿ ಸಭೆ, ಸಮಾರಂಭಗಳು ನಡೆಯುತ್ತಿವೆ. ಅದರಿಂದ ಕೊರೊನಾ ಹರಡಲ್ವಾ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಗಣೇಶ ಮೂರ್ತಿ ತಯಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದವರು ಬೀದಿ ಪಾಲು

ಸಿಎಂ ಗಮನಕ್ಕೂ ಈ ವಿಷಯ ತಂದಿದ್ದೇನೆ. ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಮಣಕ್ಕಷ್ಟೆ ಕೊರೊನಾ ನಿಯಮಗಳು ಬೇಡ ಅಂತಾ ಹೇಳಿದ್ದೇನೆ. ಕಾರಣ ಗಣೇಶ ಚತುರ್ಥಿಗೆ ಯಾವುದೇ ಅಡತಡೆ ಮಾಡಬೇಡಿ ಅಂತಾ ಜಿಲ್ಲಾಧಿಕಾರಿ, ಎಸ್.ಪಿ. ಅವರಿಗೆ ಸಿಎಂ ಸೂಚಿಸಿದ್ದಾರೆ. ಒಂದು ವೇಳೆ ಅಡತಡೆ ಮಾಡಿದ್ರೂ ನಾನು ಕೇಳಲ್ಲ. ವಿಜಯಪುರದಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸುತ್ತೇವೆ. ವಿಜಯಪುರ ಜಿಲ್ಲೆಯ ಎಲ್ಲ ಗಣೇಶ ಉತ್ಸವದ ಮಹಾಮಂಡಳಿಗಳು ಯಾವುದೇ ಆತಂಕ ಇಲ್ಲದೆ ಗಣೇಶ ಹಬ್ಬ ಆಚರಿಸಿ ಎಂದು ಕರೆ ನೀಡಿದರು. ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಮುಕ್ತ ಅವಕಾಶ ನೀಡಿ: ವಿಶ್ವ ಹಿಂದು ಪರಿಷದ್ ಆಗ್ರಹ

Source: publictv.in Source link