‘ಸಾವಿಗೆ ಅಂಜಲ್ಲ, ಅಫ್ಘಾನ್​ ಬಿಟ್ಟು ಹೋಗಲ್ಲ’ ಅಂದ್ರು ಮೇಯರ್ -ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್​ 

‘ಸಾವಿಗೆ ಅಂಜಲ್ಲ, ಅಫ್ಘಾನ್​ ಬಿಟ್ಟು ಹೋಗಲ್ಲ’ ಅಂದ್ರು ಮೇಯರ್ -ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್​ 

ತಾಲಿಬಾನ್​​ ಜೊತೆಗೆ ಪಾಕ್​ನ ISI ಮುಖ್ಯಸ್ಥ

blank
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚನೆಯ ತಾಲೀಮಿನಲ್ಲಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಐಎಸ್​ಐ ಮುಖ್ಯಸ್ಥ ಹಮೀದ್ ಫೈಜ್​ ಕಳ್ಳಾಟ ಬಯಲಾಗಿದ್ದು, ತಾಲಿಬಾನ್ ನಾಯಕರ ಭೇಟಿ ಮಾಡಿರುವ ಫೋಟೋ ಹೊರಬಿದ್ದಿದೆ. ಇನ್ನು, ಹಮೀದ್​ ಫೈಜ್ ಕಂದಹಾರ್​ನಲ್ಲಿ ತಾಲಿಬಾನಿಗಳನ್ನ ಭೇಟಿ ಮಾಡಿದ್ದಾನೆ ಎನ್ನಲಾಗಿದ್ದು, ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಂತಲೇ ಬಿಂಬಿತವಾಗಿರುವ ಮುಲ್ಲಾ ಅಬ್ದುಲ್ಲಾ ಘನಿ ಬರಾದರ್​ ಜೊತೆಗೆ ಚರ್ಚೆ ನಡೆಸಿದ್ದಾನೆ. ಇನ್ನು, ತಾಲಿಬಾನಿಗಳ ಜೊತೆಗೆ ಹಮೀದ್ ಫೈಜ್ ನಮಾಜ್ ಮಾಡುತ್ತಿರುವ ಫೋಟೋ ಲೀಕ್ ಆಗಿದ್ದು, ಪಾಕ್​ ಸರ್ಕಾರ ಹಾಗೂ ತಾಲಿಬಾನ್​ ನಡುವಿನ ಸ್ನೇಹ ಸಂಬಂಧಕ್ಕೆ ಐಎಸ್​ಐ ಸೇತುವೆಯಾಗಿರೋದು ಬಯಲಾಗಿದೆ. ಇನ್ನು, ಸರ್ಕಾರ ರಚನೆಯ ಸರ್ಕಸ್​ನಲ್ಲಿರುವ ತಾಲಿಬಾನಿಗಳ ಭೇಟಿಗಾಗಿ, ಇಂದು ಕಾಬೂಲ್​ಗೆ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭೇಟಿ ನೀಡುವ ಸಾಧ್ಯತೆ ಇದ್ದು, ಸರ್ಕಾರ ರಚನೆ ಹಾಗೂ ಮುಂದಿನ ಬಾಂಧವ್ಯದ ಬಗ್ಗೆ ಚರ್ಚಲಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ತಾಲಿಬಾನ್ ಜೊತೆಗೆ ಪಾಕ್​ ISI ಮುಖ್ಯಸ್ಥನ ಕಳ್ಳಾಟ.. ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?

ಭಾರತೀಯರ ರಕ್ಷಿಸಲು ದಿನಕ್ಕೆ 2 ವಿಮಾನಗಳಿಗೆ ಅನುಮತಿ

blank
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಕಾಬೂಲ್ ನಿಂದ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆ ಮಾಡಲು ಭಾರತಕ್ಕೆ ಅನುಮತಿ ದೊರೆತಿದೆ. ಅಫ್ಘಾನಿಸ್ತಾನ ತಾಲಿಬಾನ್ ವಶವಾದರೂ ಕಾಬೂಲ್ ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಂತ್ರಿಕವಾಗಿ ಅಮೆರಿಕ ಹಾಗೂ ನ್ಯಾಟೋ ಪಡೆಗಳ ನಿಯಂತ್ರಣದಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಭಾರತಕ್ಕೆ ಅನುಮತಿ ನೀಡಿವೆ.

ಇದನ್ನೂ ಓದಿ: ಮೋದಿ ರಾಜತಾಂತ್ರಿಕತೆ: ಆಫ್ಘಾನ್​​ನಲ್ಲಿರೋ ಭಾರತೀಯರು ನಿಟ್ಟುಸಿರು ಬಿಡುವ ಸದ್ದಿ ಕೊಟ್ಟ ಅಮೆರಿಕ

ತಾಲಿಬಾನಿಗಳಿಂದ 150 ಭಾರತೀಯರು ಸೇಫ್
ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಲು ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 150 ಮಂದಿ ಭಾರತೀಯ ಪ್ರಜೆಗಳು ಕಾಯುತ್ತಿದ್ದರು. ಈ ವೇಳೆ ಏಕಾಏಕಿ ವಿಮಾನ ನಿಲ್ದಾಣಕ್ಕೆ ಬಂದ ತಾಲಿಬಾನ್ ಉಗ್ರರು 150 ಜನ ಭಾರತೀಯರನ್ನ ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ಸದ್ಯ 150 ಭಾರತದ ಪ್ರಜೆಗಳ ವಿಚಾರಣೆ ನಡೆಸಿದ ತಾಲಿಬಾನ್​ ಉಗ್ರರು, ಅವರೆಲ್ಲರನ್ನೂ ವಾಪಸ್​ ಕಾಬೂಲ್​ ಏರ್​​ಪೋರ್ಟ್​​ಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಅಫ್ಘಾನ್​ ಮಾಧ್ಯಮಗಳು ವರದಿ ಮಾಡಿವೆ.

‘ಸಾವಿಗೆ ಅಂಜಲ್ಲ, ಅಫ್ಘಾನ್​ ಬಿಟ್ಟು ಹೋಗಲ್ಲ’

‘ಸಾವಿಗೆ ಅಂಜಲ್ಲ, ಅಫ್ಘಾನ್​ ಬಿಟ್ಟು ಹೋಗಲ್ಲ’ ಅಂದ್ರು ಮೇಯರ್ -ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡಪ್​ 
ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳಿಂದ ಅರಾಜಕತೆ ಉಂಟಾಗಿದೆ. ಇನ್ನು ಜನರ ಪರಿಸ್ಥಿತಿಯಂತೂ ಅತಂತ್ರವಾಗಿದ್ದು, ಅಫ್ಘಾನ್​ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಆದರೂ ತಾಲಿಬಾನಿ​ಗಳಿಗೆ ಎದೆಗುಂದದ ಮೊದಲ ಮಹಿಳಾ ಮೇಯರ್​ ಸತ್ತರೂ ಪರವಾಗಿಲ್ಲ ನಾನು ಅಫ್ಘಾನ್​ ಬಿಟ್ಟು ಹೋಗಲ್ಲ ಅಂತ ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಫ್ಘಾನಿಸ್ತಾನದ ಮೊದಲ ಮೇಯರ್​ ಜರೀಫಾ ಗರ್ಫಿ, ನಾನು ಇಲ್ಲೇ ಇದ್ದು ತಾಲಿಬಾನಿ​​ಗಳಿಗಾಗಿ ಕಾಯ್ತಾ ಇದ್ದೀನಿ. ಸತ್ತರೂ ಇಲ್ಲೇ ಸಾಯ್ತಿನಿ ಅಂತ ಧೈರ್ಯವಾಗಿ ಹೇಳಿದ್ದಾರೆ.

ಆಪ್ತ ಸ್ನೇಹಿತರ ಮನೆಗೆ ವಿನಯ್​ ಕುಲಕರ್ಣಿ ಭೇಟಿ
ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್​ ಕುಲಕರ್ಣಿ ಲೋಕಾಪುರದ ತಮ್ಮ ಸ್ನೇಹಿತ ಮಹಾಂತೇಶ ಉದುಪುಡಿ ಮನೆಗೆ ತೆರಳಿದ್ರು. ಇತ್ತೀಚೆಗಷ್ಟೇ ಉದುಪುಡಿ ನಿಧನರಾಗಿದ್ದು, ಅವರ ಕುಟುಂಬಕ್ಕೆ ವಿನಯ್​ ಕುಲಕರ್ಣಿ ಸಾಂತ್ವನ ಹೇಳಿದರು. ನಂತರ ಇಳಕಲ್​ ನಗರದಲ್ಲಿರುವ ತಮ್ಮ ಆಪ್ತ ಸ್ನೇಹಿತ ವಿಜಯಾನಂದ ಕಾಶಪ್ಪನವರ ಮನೆಗೆ ಭೇಟಿ ನೀಡಿ, ಅಲ್ಲಿ ಅಲ್ಪೋಹಾರ ಸೇವಿಸಿ, ಬೆಂಗಳೂರನತ್ತ ಪಯಣ ಬೆಳೆಸಿದ್ದು, ಬಾಗಲಕೋಟೆ ಮೂಲಕ ಬೆಂಗಳೂರಿಗೆ ತೆರಳಿದ್ರು.

ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಚಿಂತನೆ
ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದೆ. ಈ ಹಿನ್ನೆಲೆ ಉಡುಪಿಯಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಚಿಂತಿಸಲಾಗ್ತಿದೆ ಈ ಬಗ್ಗೆ ಮಾತನಾಡಿರುವ ಸಚಿವ ಸುನೀಲ್ ಕುಮಾರ್​ ಗಣೇಶೋತ್ಸವ ವಿಜೃಭಣೆಯಿಂದ ನಡೆಯಬೇಕು ಎಂಬುದು ನಮ್ಮ ಆಶಯವಾಗಿದೆ. ಆದ್ರೆ, ಕೊರೊನಾ ಮೂರನೇ ಅಲೆಯ ಆತಂಕ ಕೂಡ ಕಣ್ಣಾ ಮುಂದೆಯೇ ಇದೆ. ಹೀಗಾಗಿ ಧಾರ್ಮಿಕ ಆಚರಣೆ ಮತ್ತು ಆರೋಗ್ಯ ಎರಡೂ ಮುಖ್ಯ. ಈ ಬಗ್ಗೆ ಸರ್ಕಾರ ಒಂದು ಸೂತ್ರವನ್ನು ಸಿದ್ದಪಡಿಸಲಿದೆ. ಧಾರ್ಮಿಕ ಆಚರಣೆ, ವೈಭವಿಕರಣಕ್ಕೆ ಕುಂದು ಕೊರತೆ ಆಗದಂತೆ ನಿಯಮ ಬರಲಿದೆ ಎಂದಿದ್ದಾರೆ.

‘ಝೈಕೋವ್-ಡಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ’
ಕೊರೊನಾ ಸೋಂಕಿಗೆ ಬ್ರೇಕ್​ ಹಾಕಲು ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅವಕಾಶ ನೀಡಲಾಗಿರುವ ವಿಚಾರದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಪ್ರತಿಕ್ರಿಯೆ ನೀಡಿದ್ದಾರೆ. ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಲಾಗಿದ್ದು, ಶೀಘ್ರವೇ ಲಸಿಕೆ ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಝೈಕೋವ್-ಡಿ ಲಸಿಕೆಯು ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದೆ. 12 ವರ್ಷಕ್ಕಿಂತ ಮೇಲ್ಪಟ್ಟವರು ಸಹ ಈ ಲಸಿಕೆ ತೆಗೆದುಕೊಳ್ಳಬಹುದು. ಇದನ್ನು 3 ಡೋಸ್‌ಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ಇಂದು ರಕ್ಷಾ ಬಂಧನ ಆಚರಣೆ
ಇಂದು ದೇಶಾದ್ಯಂತ ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ. ಅಣ್ಣ ತಂಗಿಯ ಪ್ರೀತಿಯ ಬಾಂಧ್ಯವಕ್ಕೆ ಸಾಕ್ಷಿಯಾಗುವ ಈ ದಿನವನ್ನು ಎಲ್ಲಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಗೆ ಬಗೆ ಬಗೆಯ ರಾಖಿಗಳು ಲಗ್ಗೆ ಇಟ್ಟಿದ್ದು, ನೋಡುಗರನ್ನ ಆರ್ಕಷಿಸುತ್ತಿದೆ. ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ದೇಶದ ಜನರಿಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ. ಅಣ್ಣ-ತಂಗಿಯರ ಬಾಂಧವ್ಯ ಸಾರುವ ಈ ವಿಶೇಷ ಹಬ್ಬದಂದು ನಾವೆಲ್ಲಾ ನಮ್ಮ ದೇಶದ ಹೆಣ್ಣು ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡುವುದಾಗಿ ಸಂಕಲ್ಪ ಮಾಡೋಣ ಅಂತ ರಾಷ್ಟ್ರಪತಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಆರ್​ಸಿಬಿ ತಂಡಕ್ಕೆ ಮೈಕ್​ ಹಸನ್​ ಹೊಸ ಕೋಚ್

blank
14ನೇ ಆವೃತ್ತಿಯ ಐಪಿಎಲ್​ ದ್ವಿತೀಯಾರ್ಧ ಆರಂಭವಾಗಲು ಇನ್ನೊಂದು ತಿಂಗಳು ಬಾಕಿ ಇದೆ. ಈ ಬೆನ್ನಲ್ಲೇ ಆರ್​ಸಿಬಿ ಟೀಮ್​ಗೆ ಕೋಚ್​ ಸೈಮನ್​ ಕ್ಯಾಟಿಚ್​ ಶಾಕ್​ ನೀಡಿದ್ದಾರೆ. ಆರ್​ಸಿಬಿಯ ಹೆಡ್​ ಕೋಚ್​ ಆಗಿದ್ದ ಸೈಮನ್​, ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ವೈಯಕ್ತಿಕ ಕಾರಣದಿಂದ ಕೋಚ್​ ಹುದ್ದೆಗೆ ಗುಡ್​ಬೈ ಹೇಳಿದ್ದಾಗಿ ಸೈಮನ್​ ಕ್ಯಾಟಿಚ್​ ತಿಳಿಸಿದ್ದಾರೆ. ಇನ್ನು, ಆರ್​ಸಿಬಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮೈಕ್​ ಹಸನ್​ ಇನ್ನು ಮುಂದೆ ಹೆಡ್​ ಕೋಚ್​ ಆಗಲಿದ್ದಾರೆ ಅಂತ ಆರ್​ಸಿಬಿ ಟೀಮ್​ ತಿಳಿಸಿದೆ.

ಬಹು ನಿರೀಕ್ಷಿತ ಗಣಪತ್​ 2022ಕ್ಕೆ ಬಿಡುಗಡೆ
ಬಾಲಿವುಡ್​ ನಟ​ ಟೈಗರ್​ ಶ್ರಾಫ್​ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಗಣಪತ್​ 2022ರ ಡಿಸೆಂಬರ್​ಗೆ ತೆರೆ ಕಾಣಲಿದೆ ಅಂತಾ ಅವರೇ ಟ್ವೀಟ್​ ಮಾಡಿ ತಿಳಿಸಿದ್ದಾರೆ. ​ವಿಕಾಸ್‌ ಬಾಹ್ಲಾ ನಿರ್ದೇಶನದ ಈ ಸಿನಿಮಾದಲ್ಲಿ ಟೈಗರ್‌ ಶ್ರಾಫ್‌ಗೆ ನಾಯಕಿಯಾಗಿ ಕೃತಿ ಸನೋನ್‌ ನಟಿಸುತ್ತಿದ್ದಾರೆ. ಇನ್ನು, ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬ ಮಾತಿದೆ. ಈಗಾಗಲೇ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು, ಗಣಪತ್​ ತಂಡ ಟೀಸರ್​ ರಿಲೀಸ್​ ಮಾಡಿದೆ. ಸದ್ಯ ಈ ಟೀಸರ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link