ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್

ಮುಂಬೈ: ಬಾಲಿವುಡ್ ನಟ ದಿ.ಸುಶಾಂತ್ ಸಿಂಗ್ ರಜಪೂತ್ ಫೇಸ್‍ಬುಕ್ ಖಾತೆಯ ಡಿಸ್‍ಪ್ಲೇ ಪಿಕ್ಚರ್ ಬದಲಾಗಿರೋದು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಫೋಟೋ ಕಂಡು ಶಾಕ್ ಆಗಿರುವ ಅಭಿಮಾನಿಗಳು, ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಎಂದು ಪ್ರಶ್ನಿಸಿ ಕಮೆಂಟ್ ಮಾಡುತ್ತಿದ್ದಾರೆ.

ಓ ಮೈ ಗಾಡ್, ಫೋಟೋ ನೋಡಿ ಶಾಕ್ ಆಯ್ತು. ಸುಶಾಂತ್ ಸಿಂಗ್ ರಜಪೂತ್ ಖಾತೆಯನ್ನು ಕಂಟ್ರೋಲ್ ಮಾಡುತ್ತಿರೋದು ಯಾರು? ಏನು ಆಗತ್ತಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವ ಅಭಿಮಾನಿ, ಈ ಮೊದಲು ಸ್ವತಃ ಸುಶಾಂತ್ ಅವರೇ ತಮ್ಮ ಖಾತೆಯನ್ನು ಬಳಸುತ್ತಿದ್ದರು. ಆದರೆ ಈಗ ಫೋಟೋ ಬದಲಾಗಿದ್ದು ಹೇಗೆ ಎಂದು ಸುಶಾಂತ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

ಅಕೌಂಟ್ ಮ್ಯಾನೇಜ್ ಮಾಡುತ್ತಿರೋದು ಯಾರು?:
ಸುಶಾಂತ್ ಸಿಂಗ್ ರಜಪೂತ್ 2020ರಲ್ಲಿ ನಿಧನರಾಗಿದ್ದರು. ತದನಂತರ ಸುಶಾಂತ್ ಬಳಸುತ್ತಿದ್ದ ಎಲ್ಲ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅವರ ಆಪ್ತ ತಂಡವೊಂದು ನಿರ್ವಹಿಸುತ್ತಿದೆ. ನಮ್ಮಂತಹ ಅಭಿಮಾನಿಗಳಿಗೆ ನೀವೇ ಅಸಲಿ ಗಾಡ್ ಫಾದರ್. ನಾವೆಲ್ಲರೂ ಅವರ ವಿಚಾರಗಳನ್ನು ಕಲಿಯಬೇಕು ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ. ಜೊತೆಗೆ ಸುಶಾಂತ್ ಖಾತೆಯ ಬಯೋಡೇಟಾ ಸಹ ಬದಲಾಯಿಸಲಾಗಿದೆ. ಅದರಲ್ಲಿ ಸುಶಾಂತ್ ಸಿಂಗ್ ರಜಪೂತ್ (21 ಜನವರಿ, 1986- 14 ಜೂನ್ 2020) ಭಾರತೀಯ ನಟ, ಡ್ಯಾನ್ಸರ್, ಉದ್ಯಮಿ ಮತ್ತು …) ಎಂದು ಬರೆಯಲಾಗಿದೆ. ಇದನ್ನೂ ಓದಿ: ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

Source: publictv.in Source link